ಮನೋರಂಜನೆ

ಸಾರಾ ಗೋವಿಂದು ಥೇಟರ್‌ ಕೊಡಿಸಿದರು. ಜನ ಸಿನಿಮಾ ನೋಡಿದರು

Pinterest LinkedIn Tumblr

sa-ra-govindಪತ್ರಿಕಾಗೋಷ್ಠಿಯೆಂದರೆ ಹಿಂದಿನ ರಾತ್ರಿಯೇ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತದೆ ಎಂದು ವೆಸ್ಲಿà ಬ್ರೌನ್‌ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದರು. ಆದರೆ, ಆವತ್ತು ಅವರ ಮುಖ ನೋಡಿದರೆ, ವೆಸ್ಲಿ ಟೆನ್ಶನ್‌ನಲ್ಲಿದ್ದಾರೆ ಅಂತೇನು ಅನಿಸುತ್ತಿರಲಿಲ್ಲ. ಖುಷಿಖುಷಿಯಿಂದಲೇ ಓಡಾಡಿಕೊಂಡಿದ್ದರು. ಅವರ “ಮತ್ತೆ ಶ್‌’ ಎಂಬ ಚಿತ್ರ ಸಂಯುಕ್ತವಾಗಿ 25 ದಿನ ಓಡಿತ್ತಂತೆ. ಅದೇ ಕಾರಣಕ್ಕೆ ಚಿತ್ರಕ್ಕೆ ಬೆಂಬಲ ಕೊಟ್ಟವರಿಗೆ ನೆನಪಿನ ಕಾಣಿಕೆ ಕೊಡುವುದಕ್ಕೆ ಒಂದು ಸಮಾರಂಭ ಇಟ್ಟುಕೊಂಡಿದ್ದರು.

ವೇದಿಕೆ ಮೇಲಿದ್ದಿದ್ದು ಸಹಕಾರಿ ರಂಗದ ಧುರೀಣರು. ಅದರಲ್ಲಿ ಒಂದಿಬ್ಬರು ಮುಂದೆ ನಿರ್ಮಾಪಕರಾಗುವವರು. ಚಿತ್ರದಲ್ಲಿ ನಟಿಸಿದವರು, ಗ್ಲಾಮರ್‌ ಗೊಂಬೆಗಳು ಎಲ್ಲಿ ಎಂದು ಹುಡುಕಿದರೆ ಯಾರೂ ಸಿಗಬೇಡವೇ? ಆ ಕೊರತೆಯನ್ನು ನೀಗುವುದಕ್ಕೆ ಸಮಿತಾ ಶಾ ಬಂದರು. ಅವರು ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದಾರಂತೆ ಮತ್ತು ವೆಸ್ಲೆ ಚಿತ್ರದ ಪತ್ರಿಕಾಗೋಷ್ಠಿಗಳಿಗೆ ಯಾವತ್ತೂ ತಡವಾಗಿ ಬರುತ್ತಾರಂತೆ. ಹಾಗಂತ ಮಧ್ಯೆ ಮಧ್ಯೆ ಕಾಮಿಡಿ ಮಾಡುತ್ತಾ, ಇನ್ನು ಕ್ಯಾಂಡಲ್‌ ಹಚ್ಚುವುದಕ್ಕೆ ಬೆಂಕಿಪೊಟ್ಣ ಕೊಡಿ ಎಂದು ಸೀರಿಯಸ್‌ ಆಗುತ್ತಾ, ಮುಖ್ಯ ಅತಿಥಿಗಳನ್ನು ಪರಿಚಯಿಸಿಕೊಡುತ್ತಾ, ಜೊತೆಗೆ ಚಿತ್ರ 25 ದಿನಗಳನ್ನೂ ಪೂರೈಸಿದ್ದರ ಬಗ್ಗೆ ಮಾತನಾಡುತ್ತಾ … ಎಲ್ಲವನ್ನೂ ಮ್ಯಾನೇಜ್‌ ಮಾಡಿದರು ವೆಸ್ಲೆ.

ಅವರು ಹೇಳುವಂತೆ, ಈ ಚಿತ್ರ ಸಹ ದಾಖಲೆ ಮಾಡಿದೆಯಂತೆ. ಅದೇನು ದಾಖಲೆ ಎಂದರೆ, “ಮಂತ್ರಿ ಮಾಲ್‌ನಲ್ಲಿ ಮಾರ್ನಿಂಗ್‌ ಶೋ ಹೌಸ್‌ಫ‌ುಲ್‌ ಆಗಿತ್ತು. ಮೊದಲು ಚಿತ್ರಮಂದಿರ ಇಲ್ಲ ಎಂದರು. ಕೊನೆಗೆ ಸಾ.ರಾ. ಗೋವಿಂದು ಅವರಿಗೆ ಹೇಳಿದೆವು. ಅವರು ಫೋನ್‌ ಮಾಡಿ ಥಿಯೇಟರ್‌ ಕೊಡಿಸಿದರು. ಆಮೇಲೆ ನೋಡಿದರೆ ಹೌಸ್‌ಫ‌ುಲ್‌ ಆಯ್ತು. ಜನ ಜಾಸ್ತಿ ಎಂಬ ಕಾರಣಕ್ಕೆ, ಇನ್ನೊಂದು ಬೇರೆ ಹಾಲ್‌ ಕೊಟ್ಟರು. ಇದೀಗ ಚಿತ್ರ ಕಂಬೈನ್‌x ಆಗಿ 25 ದಿನ ಮುಗಿಸಿದೆ. ಈಗ ನಾಲ್ಕು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ’ ಎಂದರು. ವೆಸ್ಲಿ ಪ್ರಕಾರ, ಈ ಚಿತ್ರ ಟೋಟಲಿ ಸೇಫ್ ಆಗಿದೆಯಂತೆ. “ಖುಷಿ ಇರೋದೇ ಆ ವಿಷಯದಲ್ಲಿ. ಸಿನಿಮಾ ಫ‌ುಲ್‌ ಸೇಫ್ ಆಗಿದೆ. ತೆಲುಗು ಮತ್ತು ತಮಿಳಿಗೆ ಡಬ್ಬಿಂಗ್‌ ರೈಟ್ಸ್‌ ಹೋಗಿದೆ. ನಾವು ಹಾಕಿದ ದುಡ್ಡು ವಾಪಸ್ಸಾಗಿದೆ. ಲೈಟ್‌ ಇಲ್ಲದೆ ಮಾಡಿದ ಪ್ರೊಯೋಗಾತ್ಮಕ ಚಿತ್ರ ಇದು.
ಇಂತಹ ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ಬಹಳ ಖುಷಿಯಾಗಿದೆ’ ಎಂದರು. ನಿರ್ಮಾಪಕ ದಯಾನಂದ ಮಠಪತಿ, ಸಾಹಸ ನಿರ್ದೇಶಕ ಕೌರವ ವೆಂಕಟೇಶ್‌, ಸಮಿತಾ ಶಾ, ಸೆಬಾಸ್ಟಿಯನ್‌ ಡೇವಿಡ್‌, ಸುಷ್ಮಾ ವೆಸ್ಲಿà, ಕಪಿಲ್‌ ಸೇರಿದಂತೆ ಹಲವರು ಈ 25 ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-ಉದಯವಾಣಿ

Write A Comment