ಮನೋರಂಜನೆ

ಪಾತರಗಿತ್ತಿ ಪ್ರಜ್ವಲ್‌ ಪೂವಯ್ಯ ಮತ್ತೆ ಪರಭಾಷೆಗೆ

Pinterest LinkedIn Tumblr

pataragittiಕನ್ನಡದ ಬಹುತೇಕ ನಟಿಮಣಿಗಳು ಈಗಾಗಲೇ ಪರಭಾಷೆ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಅನೇಕ ನಟಿಯರು ಅತ್ತ ಮುಖ ಮಾಡಿರುವುದೂ ಉಂಟು. ಈಗ ಮತ್ತೂಬ್ಬ ನಟಿ ಪ್ರಜ್ವಲ್‌ ಪೂವಯ್ಯ ಸರದಿ. ಹಾಗಂತ ಪ್ರಜ್ವಲ್‌ ಪೂವಯ್ಯ ಅವರಿಗೆ ಪರಭಾಷೆ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ತಮಿಳು ಚಿತ್ರಗಳಲ್ಲಿ ನಟಿಸಿರುವ ಪ್ರಜ್ಜು ಪೂವಯ್ಯ, ಪ್ರಾದೇಶಿಕ ಭಾಷೆಯ ತುಳು ಚಿತ್ರದಲ್ಲೂ ಗುರುತಿಸಿಕೊಂಡಾಗಿದೆ. ಈಗ ಹೊಸ ವಿಷಯವೆಂದರೆ, ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

ಹೌದು ಅವರು ಸದ್ದಿಲ್ಲದೆಯೇ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರ ಇದೀಗ ಚಿತ್ರೀಕರಣದಲ್ಲಿದೆ. ಸದ್ಯಕ್ಕೆ ಪರಭಾಷೆಯಿಂದ ಅವಕಾಶಗಳು ಹುಡುಕಿ ಬರುತ್ತಿದ್ದರೂ, ಪ್ರಜ್ವಲ್‌ ಪೂವಯ್ಯ ಮಾತ್ರ ಕನ್ನಡದಲ್ಲೇ ಒಳ್ಳೇ ಅವಕಾಶ ಎದುರು ನೋಡುತ್ತಿದ್ದಾರೆ. ಈಗಾಗಲೇ ಪ್ರಜ್ವಲ್‌ ಅಭಿನಯದ “ಕರೋನಾ’ ರಿಲೀಸ್‌ ಆಗಬೇಕಿದೆ. “ಗಲ್ಲಿ ಬೇಕರಿ’ ಚಿತ್ರ ಕೂಡ ರಿಲೀಸ್‌ಗೆ ರೆಡಿಯಾಗಿದೆ.

ಈಗ “ಅಸ್ತಿತ್ವ’ ಚಿತ್ರದ ಮೇಲೂ ಇನ್ನಿಲ್ಲದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಪ್ರಜ್ಜು. ಇದಷ್ಟೇ ಅಲ್ಲ, ಈ ವಾರದಲ್ಲೊಂದು ಒಳ್ಳೇ ಸುದ್ದಿ ಕೊಡ್ತೀನಿ ಎನ್ನುವ ಪ್ರಜ್ಜು, ಕನ್ನಡದಲ್ಲಿ ಹೊಸ ಸಿನಿಮಾ ಮಾಡುತ್ತಿರುವುದಾಗಿ ಸೂಚನೆ ಕೊಡುತ್ತಾರೆ.

ಹಾಗಾದರೆ, ಆ ಚಿತ್ರದ ಹೀರೋ ಯಾರು, ಯಾವ ಸಿನಿಮಾ, ನಿರ್ದೇ ಶಕರು ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ, ಉತ್ತರ ಕೊಡದ ಅವರು, ಎಲ್ಲವೂ ಸಸ್ಪೆನ್ಸ್‌. ಇಷ್ಟರಲ್ಲೇ ಎಲ್ಲಾ ವಿಷಯಗಳನ್ನೂ ಕೊಡುತ್ತೇನೆ’ ಎಂದಷ್ಟೇ ಹೇಳಿ ಸೆ¾„ಲ್‌ ಕೊಡುತ್ತಾರೆ ಅವರು. ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡಿರುವ ಪ್ರಜ್ವಲ್‌ ಪೂವಯ್ಯ ಅವರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಕೆಲಸ ಮಾಡೋಕೆ ಖುಷಿಯಂತೆ. ಹಾಗಂತ ಬೇರೆ ಇಂಡಸ್ಟ್ರಿಯಲ್ಲಿ ಸರಿ ಇಲ್ಲವೆಂದಲ್ಲ, ಅಲ್ಲಿಗಿಂತ ತವರು ನೆಲದಲ್ಲಿ ಕೆಲಸ ಮಾಡುವುದು ಹೆಚ್ಚು ಖುಷಿ ಕೊಡುತ್ತೆ ಎನ್ನುತ್ತಾರೆ ಅವರು.

ಪ್ರಜ್ವಲ್‌ ಪೂವಯ್ಯ ಅವರಿಗೆ ಅವಕಾಶಗಳು ಸಿಗುತ್ತಿಲ್ಲವೇ? ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಬಿಟ್ಟರೆ, ಹೇಳಿಕೊಳ್ಳುವಂತಹ ಯಾವುದೇ ಅವಕಾಶ ಸಿಕ್ಕಿಲ್ಲವೇ? ಈ ಪ್ರಶ್ನೆಗೆ ಪ್ರಜ್ಜು ಉತ್ತರ ಏನು ಗೊತ್ತಾ? ಹಾಗೇನೂ ಇಲ್ಲ. ನನಗೆ ಚಿತ್ರಗಳ ಸಂಖ್ಯೆಗಿಂತ, ಒಳ್ಳೆಯ ಚಿತ್ರದಲ್ಲಿ ಒಳ್ಳೇ ನಟಿ ಎನಿಸಿಕೊಳ್ಳುವ ಆಸೆ. ಹಾಗಾಗಿ, ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಜನರ ಮನಸ್ಸಲ್ಲಿ ಉಳಿಯುವಂತಹ ಚಿತ್ರದಲ್ಲಿ ಮಾಡಬೇಕು ಎಂಬ ನಿಲುವು ಅವರದು. ಅದೇನೆ ಇರಲಿ, ಪ್ರಜ್ವಲ್‌ ಪೂವಯ್ಯ ಮಾತ್ರ, ಸಿನಿಮಾ ಹೊರತಾಗಿ ಬೇರೇನೂ ಮಾಡುತ್ತಿಲ್ಲ. ಮೂರು ಹೊತ್ತು ಸಿನಿಮಾ ಜಪ ಮಾಡುತ್ತಿರುವ ಅವರಿಗೆ ಒಳ್ಳೆಯ ಕಥೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಒಂದಷ್ಟು ಕಥೆ ಕೇಳಿದ್ದರೂ, ಅವುಗಳಿಗಿನ್ನೂ ಗ್ರೀನ್‌ಸಿಗ್ನಲ್‌ ಕೊಟ್ಟಿಲ್ಲವಂತೆ. ಕಾರಣ, ಪಾತ್ರ ಹಾಗು ಕಥೆಯಲ್ಲಿ ಒಂದಷ್ಟು ಗೊಂದಲವಿದೆ. ಆದರೂ, ಪ್ರಜ್ವಲ್‌ಗೆ ಅವಕಾಶಗಳಿಗೆ ಕೊರತೆ ಇಲ್ಲವಂತೆ. ಅದೇನೆ ಇರಲಿ, ಪ್ರಜ್ವಲ್‌ ಪೂವಯ್ಯಗೆ ಈಗ “ಅಸ್ತಿತ್ವ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಗಟ್ಟಿನೆಲೆ ಕಟ್ಟಿಕೊಡುತ್ತೆ ಎಂಬ ನಂಬಿಕೆ ಇದೆ. ಹಾಗಂತ ಅವರು ಅತಿಯಾದ ವಿಶ್ವಾಸ ಇಟ್ಟುಕೊಂಡಿಲ್ಲವಂತೆ.
-ಉದಯವಾಣಿ

Write A Comment