ಮನೋರಂಜನೆ

5 ರಾಗ 5 ಹಾಡು1 ಸಿನಿಮಾ; ಚೌಕ ಚಿತ್ರಕ್ಕೆ ಐವರು ಸಂಗೀತ ನಿರ್ದೇಶಕರು

Pinterest LinkedIn Tumblr

Chowka-barಒಂದೇ ಚಿತ್ರಕ್ಕೆ ಹಲವು ಸಂಗೀತ ನಿರ್ದೇಶಕರಿಂದ ಸಂಗೀತ ಸಂಯೋಜಿಸುವ ಟ್ರೆಂಡ್‌ ಕನ್ನಡದಲ್ಲಿ ಹೆಚ್ಚಾಗುತ್ತಿದೆ. ಇದಕ್ಕೂ ಮುನ್ನ, ಪ್ರೇಮ್‌ ನಿರ್ದೇಶನದ ಹೊಸ ಚಿತ್ರ “ಕಲಿ’ಗೆ ಹಂಸಲೇಖ, ವಿ. ಹರಿಕೃಷ್ಣ, ಗುರುಕಿರಣ್‌, ಸಾಧು ಕೋಕಿಲ ಮತ್ತು ಅರ್ಜುನ್‌ ಜನ್ಯ ಅವರುಗುಳು ತಲಾ ಒಂದೊಂದು ಹಾಡನ್ನು ಸಂಯೋಜಿಸುತ್ತಾರೆ ಎಂದು ದೊಡ್ಡ ಸುದ್ದಿಯಾಯಿತು. ಈಗ ಅಂಥದ್ದೇ ಒಂದು ಪ್ರಯೋಗ, ತರುಣ್‌ ಸುಧೀರ್‌ ನಿರ್ದೇಶನದ ಮೊದಲ ಚಿತ್ರ “ಚೌಕ’ದಲ್ಲೂ ನಡೆಯುತ್ತಿದೆ. ಈ ಚಿತ್ರದಲ್ಲಿ ವಿ. ಹರಿಕೃಷ್ಣ,, ಗುರುಕಿರಣ್‌, ಅನೂಪ್‌ ಸೀಳಿನ್‌, ಶ್ರೀಧರ್‌ ಸಂಭ್ರಮ್‌ ಮತ್ತು ಅರ್ಜುನ್‌ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಹೌದು, ಈ ಬಾರಿ ವಿಭಿನ್ನ ಕಥೆಯನ್ನು ಮಾಡಿಕೊಂಡಿರುವ ನಿರ್ದೇಶಕ ತರುಣ್‌ ಸುಧೀರ್‌, ಛಾಯಾಗ್ರಹಣ, ಸಂಗೀತ, ಸಂಭಾಷಣೆ, ಕಲಾ ನಿರ್ದೇಶನ ಈ ಎಲ್ಲಾ ವಿಭಾಗಗಳಲ್ಲೂ ಐದೈದು ಪ್ರತಿಭಾವಂತರನ್ನು ಆಯ್ಕೆ ಮಾಡಿದ್ದಾರೆ. ಸಂಗೀತ ನಿರ್ದೇಶಕರು ಯಾರ್ಯಾರು ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ ಇದೆ. ಚಿತ್ರಕ್ಕೆ ಸಂಭಾಷಣೆಯನ್ನು “ಸಿಂಪಲ್‌’ ಸುನಿ, ಅನಿಲ್‌ ಕುಮಾರ್‌, ಎ.ಪಿ. ಅರ್ಜುನ್‌, ಚಿಂತನ್‌ ಮತ್ತು ಯೋಗಾನಂದ್‌ ಮುದ್ದಾನ್‌ ಅವರಿಂದ ಬರೆಸಿದ್ದಾರೆ. ಕಲಾ ನಿರ್ದೇಶಕರಲ್ಲಿ ಅರುಣ್‌ ಸಾಗರ್‌, ರವೆ ಸಂತೆಹಕ್ಲು, ಮೋಹನ್‌ ಬಿ ಕೆರೆ, ಹೊಸ್ಮನೆ ಮೂರ್ತಿ ಮತ್ತು ಶಿವಕುಮಾರ್‌ ಅವರ ಹೆಸರುಗಳಿವೆ. ಇನ್ನು ಈ ಚಿತ್ರಕ್ಕೆ ಕೆ.ಎಂ. ಪ್ರಕಾಶ್‌ ಸಂಕಲನ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲ, ಈ ಚಿತ್ರಕ್ಕೆ ಐವರು ಛಾಯಾಗ್ರಾಹಕರು ಕೆಲಸ ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿರಬೇಕು. ಎಸ್‌. ಕೃಷ್ಣ, ಸತ್ಯ ಹೆಗಡೆ, ಸುಧಾಕರ್‌ ರಾಜ್‌, ಶೇಖರ್‌ ಚಂದ್ರು ಮತ್ತು ಸಂತೋಷ್‌ ರೈ ಪಾತಾಜೆ ಒಂದೊಂದು ಎಪಿಸೋಡುಗಳನ್ನು ಚಿತ್ರೀಕರಣ ಮಾಡಲಿದ್ದಾರೆ. ದ್ವಾರಕೀಶ್‌ ನಿರ್ಮಾಣದ 50ನೇ ಚಿತ್ರವಾಗಿರುವ “ಚೌಕ’ಗೆ ಕಥೆ, ಚಿತ್ರಕಥೆಯನ್ನು ಬರೆದು ನಿರ್ದೇಶಿಸುತ್ತಿರುವುದು ತರುಣ್‌ ಸುಧೀರ್‌. ಪ್ರೇಮ್‌, ಪ್ರಜ್ವಲ್‌, ದಿಗಂತ್‌ ಮತ್ತು ವಿಜಯ್‌ ರಾಘವೇಂದ್ರ ಅಭಿನಯಿಸುತ್ತಿರುವ ಈ ಚಿತ್ರಗಳಲ್ಲಿ ಐಂದ್ರಿತಾ ರೇ ಅಭಿನಯಿಸಿದ್ದಾರೆ.
-ಉದಯವಾಣಿ

Write A Comment