ಕರ್ನಾಟಕ

ದಲಿತ ಸಿಎಂ ಪ್ರಸ್ತಾಪದಿಂದ ದಲಿತರಿಗೆ ಅಪಮಾನ

Pinterest LinkedIn Tumblr

anjaneeyaಯಾದಗಿರಿ: ಇತ್ತೀಚೆಗೆ ದಲಿತ ಮುಖ್ಯಮಂತ್ರಿ ವಿಚಾರ ಪ್ರಸ್ತಾಪವಾಗುತ್ತಿರುವುದರಿಂದ ಸ್ವಾಭಿಮಾನಿ ದಲಿತರಿಗೆ
ಅಪಮಾನವಾಗುತ್ತಿದೆ. ಹಾಗಾಗಿ ದಲಿತ ಮುಖ್ಯಮಂತ್ರಿ ವಿಚಾರ ಪ್ರಸ್ತಾಪಿಸಿ ಅಪಮಾನ ಮಾಡಬೇಡಿ ಎಂದು
ಸಮಾಜಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ವಿಚಾರ ಇದೀಗ ಅಪ್ರಸ್ತುತ. ದಲಿತ ಸಿಎಂ ಕುರಿತು ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಹೇಳಿಕೆ ವೈಯಕ್ತಿಕ ವಿಚಾರವಾಗಿದೆ.

ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಅವರಿಗೆ ಬೆಂಬಲ ನೀಡಿರುವುದು ವೈಯಕ್ತಿಕ ನಿರ್ಧಾರವಾಗಿದೆ ಎಂದರು.

ಸಿಎಂ ಸ್ಥಾನ ಖಾಲಿ ಇಲ್ಲ: ಮುಖ್ಯಮಂತ್ರಿ ಹುದ್ದೆಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಜೊತೆಗೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಉದ್ಭವಿಸಿಲ್ಲ. ಆದ್ದರಿಂದ ಮುಂದಿನ ಚುನಾವಣೆ
ಘೋಷಣೆಯಾಗುವವರೆಗೂ ಸಿದಟಛಿರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.

ಅಹಿಂದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ನಂ.1 ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಪಕ್ಷದ ಬಲವರ್ಧನೆ ಆಗುತ್ತಿದೆ ಎಂದು ಹೇಳಿದರು.
-ಉದಯವಾಣಿ

Write A Comment