ಮನೋರಂಜನೆ

ಆರ್ಚರಿ ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಸರಿಗಟ್ಟಿದ ದೀಪಿಕಾ

Pinterest LinkedIn Tumblr

Deepika-Kumariಶಾಂಘೈ (ಪಿಟಿಐ): ರಿಯೊ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಿಟ್ಟಿಸಿರುವ ಭಾರತದ ದೀಪಿಕಾ ಕುಮಾರಿ, ಚೀನಾದಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ ಟೂರ್ನಿಯ ಮಹಿಳೆಯರ ರಿಕರ್ವ್‌ ಸ್ಪರ್ಧೆಯಲ್ಲಿ ಬುಧವಾರ ವಿಶ್ವದಾಖಲೆ ಸರಿಗಟ್ಟಿದ್ದಾರೆ.

ಶಾಂಘೈನಲ್ಲಿ ನಡೆಯುತ್ತಿರುವ ಟೂರ್ನಿಯ 72 ಬಾಣಗಳ ರ‍್ಯಾಂಕಿಂಗ್ ಸುತ್ತಿನಲ್ಲಿ ವಿಶ್ವದ ಮಾಜಿ ನಂಬರ್ 01 ಕ್ರಮಾಂಕದ ದೀಪಿಕಾ, ಒಟ್ಟು 720 ಪಾಯಿಂಟ್‌ಗಳ ಪೈಕಿ 686 ಪಾಯಿಂಟ್‌ ಕಲೆಹಾಕಿದರು. ಈ ಮೂಲಕ 2015ರಲ್ಲಿ ಗುವಾಂಜೌನಲ್ಲಿ ನಡೆದ ಟೂರ್ನಿಯಲ್ಲಿ ಕೊರಿಯಾದ ಕಿ ಬೊ ಬೇ ಅವರು ಮಾಡಿದ್ದ ದಾಖಲೆಯನ್ನು ಸರಿಗಟ್ಟಿದರು.

ಮೊದಲಾರ್ಧದಲ್ಲಿ 346 ಪಾಯಿಂಟ್ಸ್ ಕಲೆಹಾಕಿದ್ದ ದೀಪಿಕಾ ಅವರಿಗೆ ಕಿ ಬೊ ಬೇ ಅವರ ದಾಖಲೆ ಮುರಿಯಲು 341 ಪಾಯಿಂಟ್‌ಗಳ ಅಗತ್ಯವಿತ್ತು.

ಆದರೆ, ಕೊನೆಯಲ್ಲಿ ಎರಡು ಬಾಣಗಳಿಂದ ತಲಾ ಒಂಬತ್ತು ಪಾಯಿಂಟ್‌ ಕಲೆಹಾಕಿದರು. ಇದರಿಂದ ಅವರ ದಾಖಲೆ ಸರಿಗಟ್ಟಲಷ್ಟೇ ಸಾಧ್ಯವಾಯಿತು.

Write A Comment