ರಾಷ್ಟ್ರೀಯ

ರಾಷ್ಟ್ರಪತಿ ಆಳ್ವಿಕೆ; ‌7 ಪ್ರಶ್ನೆ ಎತ್ತಿದ ಸುಪ್ರೀಂ ಕೋರ್ಟ್‌

Pinterest LinkedIn Tumblr

Supreme-Court-Newನವದೆಹಲಿ (ಪಿಟಿಐ): ಉತ್ತರಾಖಂಡ ಬಿಕ್ಕಟ್ಟಿನ ಕುರಿತು ಅರ್ಜಿ ವಿಚಾರಣೆ ವೇಳೆ ವಿಧಾನಸಭೆಗೆ ಸ್ಪೀಕರ್‌ ಅವರೇ ಯಜಮಾನ ಎಂದಿರುವ ಸುಪ್ರೀಂ ಕೋರ್ಟ್‌, ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಏಳು ಪ್ರಶ್ನೆಗಳನ್ನು ಕೇಳಿದೆ.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಶಿವಕೀರ್ತಿ ಸಿಂಗ್ ಅವರ ಪೀಠ ಕೇಳಿದ ಏಳು ಪ್ರಶ್ನೆಗಳು ಇಂತಿವೆ.

1) ಬಹುಮತ ಸಾಬೀತು ಮಾಡಲು ವಿಳಂಬವಾದರೆ ರಾಷ್ಟ್ರಪತಿ ಆಡಳಿತ ವಿಧಿಸಬಹುದೇ?

2) ಸ್ಪೀಕರ್ ಅವರು ಶಾಸಕರನ್ನು ಅನರ್ಹಗೊಳಿಸಿದರೆ, ಸಂವಿಧಾನದ 356ನೇ ಕಲಂ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಧಿಸಲು ಅದು ಸಂಬಂಧಿತ ವಿಷಯ ಆಗುತ್ತದೆಯೇ?

3) ಕೇಂದ್ರದ ಆಡಳಿತ ಜಾರಿಗೊಳಿಸಲು ರಾಷ್ಟ್ರಪತಿ ಅವರು ವಿಧಾನಸಭೆಯ ಕಲಾಪಗಳನ್ನು ಪರಿಗಣಿಸುತ್ತಾರೆಯೇ?

4) 175(2)ನೇ ಕಲಂ ಅಡಿಯಲ್ಲಿ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ಕೇಳಿದ್ದಾರೆಯೇ?

5) ಇಬ್ಬರದೂ ಸಾಂವಿಧಾನಿಕ ಸ್ಥಾನಮಾನ. ಹೀಗಿರುವಾಗ ಮತ ವಿಭಜನೆಗೆ ಅವಕಾಶ ಕೊ‌ಡುವಂತೆ ಸ್ಪೀಕರ್‌ಗೆ ರಾಜ್ಯಪಾಲರು ಸೂಚಿಸಬಹುದೇ?

6) ಹಣಕಾಸು ಮಸೂದೆ ಅನುಮೋದನೆ ಪಡೆಯಲು ವಿಫಲವಾದರೆ, ಸರ್ಕಾರ ರಾಜೀನಾಮೆ ಕೊಡಬೇಕು ಎಂಬುದು ಸಂಪ್ರದಾಯ. ಆದರೆ, ಅದು ಅನುಮೋದನೆ ಪಡೆದಿಲ್ಲ ಎಂದು ಸ್ಪೀಕರ್ ಹೇಳಿಲ್ಲವಾದರೆ ಅದನ್ನು ಯಾರು ಹೇಳಬೇಕು?

7) ರಾಷ್ಟ್ರಪತಿ ಆಡಳಿತ ಹೇರಿದಾಗ ಧನವಿನಿಯೋಗ ಮಸೂದೆಯ ಸ್ಥಿತಿ ಏನಾಗಿರುತ್ತದೆ?

Write A Comment