ರಾಷ್ಟ್ರೀಯ

21 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

Pinterest LinkedIn Tumblr

Fishingರಾಮೇಶ್ವರ, ತಮಿಳುನಾಡು (ಪಿಟಿಐ): ಅಂತರರಾಷ್ಟ್ರೀಯ ಜಲಗಡಿ ಉಲ್ಲಂಘನೆ ಆರೋಪದಡಿ ತಮಿಳುನಾಡಿನ 21 ಮೀನುಗಾರನ್ನು ಶ್ರೀಲಂಕಾ ನೌಕಾ ಪಡೆಯು ಬುಧವಾರ ಬಂಧಿಸಿದೆ.

ಬಂಧಿತ ಮೀನುಗಾರರು ಪಂಬನ್‌ ಹಾಗೂ ಥಂಗಚಿಮಾಡೊಮ್‌ಗೆ ಸೇರಿದವರಾಗಿದ್ದು, ಅವರ ಮೂರು ದೋಣಿಗಳನ್ನೂ ಲಂಕಾ ವಶಕ್ಕೆ ಪಡೆದಿದೆ ಎಂದು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಗೋಪಿನಾಥ್ ತಿಳಿಸಿದ್ದಾರೆ.

ವಿವಾದಾತ್ಮಕ ಕಚಥೀವು ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಈ ಬಂಧನ ನಡೆದಿದೆ.

Write A Comment