ರಾಷ್ಟ್ರೀಯ

ಸರಗಳ್ಳರ ಶಿಕ್ಷೆ ಹೆಚ್ಚಿಸಲು ಮಹಾರಾಷ್ಟ್ರ ನಿರ್ಧಾರ

Pinterest LinkedIn Tumblr

chaine-snachingಮುಂಬೈ (ಪಿಟಿಐ): ಸರಗಳ್ಳರಿಗೆ ₹25 ಸಾವಿರ ದಂಡದ ಜತೆಗೆ ಜೈಲು ಶಿಕ್ಷಾವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

1973ರ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಜತೆಗೆ ಭಾರತೀಯ ದಂಡ ಸಂಹಿತೆಯ 379, 397–ಎ(1)(2) ಹಾಗೂ 379–ಬಿ ಕಲಂಗಳ ತಿದ್ದುಪಡಿಗೆ ಮಹಾರಾಷ್ಟ್ರ ಸಚಿವ ಸಂಪುಟ ಅಸ್ತು ಎಂದಿದೆ. ಈ ವಿಷಯವನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಪ್ರಕಟಣೆ ಮೂಲಕ ತಿಳಿಸಿದೆ.

ಇದರಿಂದ ಕೃತ್ಯದ ಸ್ವರೂಪದ ಮೇಲೆ ತಪ್ಪಿತಸ್ಥ ಸರಗಳ್ಳರಿಗೆ ವಿಧಿಸುವ ಶಿಕ್ಷಾ ಪ್ರಮಾಣ ಹಾಗೂ ದಂಡ ವಿಧಿಸಲು ಅವಕಾಶ ದೊರೆಯುತ್ತದೆ.

ಅಪರಾಧದ ವೇಳೆ ಸಂತ್ರಸ್ತರು ಗಂಭೀರ ಗಾಯಗೊಂಡರೆ, ತಪ್ಪಿತಸ್ಥನಿಗೆ ₹25 ಸಾವಿರ ದಂಡ ಹಾಗೂ ಗರಿಷ್ಠ ಐದು ವರ್ಷ ಕಠಿಣ ಶಿಕ್ಷ ವಿಧಿಸಲು ಅವಕಾಶ ದೊರೆಯುತ್ತದೆ.

ಅಪರಾಧದ ವೇಳೆ ಸಂತ್ರಸ್ತರು ಗಾಯಗೊಳ್ಳದ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 2–5 ವರ್ಷ ಶಿಕ್ಷೆ ವಿಧಿಸಲು ಅವಕಾಶ ಇರಲಿದೆ.

ಶಸ್ತ್ರ ತೋರಿಸಿ ಕೃತ್ಯ ಎಸೆಗಿದ್ದರೆ ಇಲ್ಲವೇ ಘಟನೆಯಲ್ಲಿ ಸಂತ್ರಸ್ತ ಗಾಯಗೊಂಡಿದ್ದರೆ, ಅಂಥ ಪ್ರಕರಣವನ್ನು ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗಳಲ್ಲಿ ವಿಚಾರಣೆ ನಡೆಸಬಹುದು.

ಮುಂಬೈನಲ್ಲಿ 2014–15ನೇ ಸಾಲಿನಲ್ಲಿ ಒಟ್ಟು 2,305 ಪ್ಕರರಣ ದಾಖಲಾಗಿದ್ದವು. ಒಟ್ಟು 14.2 ಕೋಟಿ ಮೊತ್ತ ಚಿನ್ನದ ಸರ ದೋಚಿದ್ದು ಸೇರಿದೆ. ಇದೇ ಅವಧಿಯಲ್ಲಿ ಇಡೀ ಮಹಾರಾಷ್ಟ್ರದಾದ್ಯಂತ ಒಟ್ಟು 8,350 ಪ್ರಕರಣಗಳು ವರದಿಯಾಗಿದ್ದವು.

Write A Comment