ಮನೋರಂಜನೆ

ಕಂಗನಾ, ಹೃತಿಕ್‌ ಅವರ ‘ಹಗ್ಗಿಂಗ್‌’ ಚಿತ್ರ

Pinterest LinkedIn Tumblr

viralಮುಂಬೈ (ಪಿಟಿಐ): ಬಾಲಿವುಡ್‌ ನಟ ಹೃತಿಕ್ ರೋಷನ್ ಹಾಗೂ ನಟಿ ಕಂಗನಾ ರನೋಟ್‌ ಅವರ ಶೀತಲ ಸಮರ ಹೊಸ ಆಯಾಮ ಪಡೆದುಕೊಂಡಿದ್ದು ಇಬ್ಬರು ಪರಸ್ಪರ ತಬ್ಬಿಕೊಂಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಂಗನಾ ರನೋಟ್‌ ಅವರು ಹೃತಿಕ್‌ ರೋಷನ್‌ ಅವರ ಮೇಲೆ, ಚಿತ್ರಗಳನ್ನು ಕದ್ದು ಪ್ರಕಟಿಸಿರುವುದು, ಮೇಲ್‌ ಹ್ಯಾಕ್‌ ಮಾಡಿರುವುದು ಮತ್ತು ಫೋನ್‌ ಕದ್ದಾಲಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತಂತೆ ತನಿಖೆ ನಡೆಸುತ್ತಿರುವ ಪೊಲೀಸರು ಇಬ್ಬರ ನಡುವೆ ವಿನಿಮಯಗೊಂಡಿರುವ 3000 ಇ–ಮೇಲ್‌ಗಳನ್ನು ಪರಿಶೀಲಿಸುತ್ತಿದ್ದಾರೆ.

ಇದೀಗ ಕಂಗನಾ ಮತ್ತು ಹೃತಿಕ್‌ ರೋಷನ್‌ ಅವರು ಪರಸ್ಪರ ತಬ್ಬಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ ಈ ಪ್ರಕರಣಕ್ಕೆ ಹೊಸ ತಿರುವು ಬಂದಿದೆ.

ಕಂಗಾನ ಮತ್ತು ಹೃತಿಕ್‌ ರೋಷನ್‌ ನಡುವೆ ಸಂಬಂಧ ಇರುವ ಬಗ್ಗೆ ಬಾಲಿವುಡ್‌ನಲ್ಲಿ ಅನುಮಾನ ವ್ಯಕ್ತವಾಗಿತ್ತು. ಈ ಚಿತ್ರವನ್ನು ಯಾರು ಪ್ರಕಟಿಸಿದ್ದಾರೆ ಎಂಬುದು ಇನ್ನು ತಿಳಿದುಬಂದಿಲ್ಲ. ಒಟ್ಟಿನಲ್ಲಿ ಇಬ್ಬರ ನಡುವೆ ಸಂಬಂಧ ಇರುವುದನ್ನು ಈ ವೈರಲ್‌ ಚಿತ್ರ ದೃಢಪಡಿಸುತ್ತದೆ ಎಂದು ಬಾಲಿವುಡ್‌ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

Write A Comment