ಮನೋರಂಜನೆ

ಸಲ್ಮಾನ್​ಖಾನ್ ರಿಯೋ ಒಲಿಂಪಿಕ್ಸ್​ ಸದ್ಭಾವನಾ ರಾಯಭಾರಿ

Pinterest LinkedIn Tumblr

23-Salman-Khan-webಮುಂಬೈ: 2016ರ ರಿಯೋಡಿಜನೈರೊ ಒಲಿಂಪಿಕ್ಸ್​ನಲ್ಲಿ ಸೂಪರ್​ಸ್ಟಾರ್ ಸಲ್ಮಾನ್ ಖಾನ್ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅವರು ಭಾರತೀಯ ತಂಡದ ’ಸದ್ಭಾವನಾ ರಾಯಭಾರಿ’ಯಾಗಿ ನೇಮಕಗೊಂಡಿದ್ದಾರೆ.

ಈ ನಿಟ್ಟಿನ ಅಧಿಕೃತ ಪತ್ರ ಇನ್ನೂ ಸಲ್ಮಾನ್ ಖಾನ್ ಅವರಿಗೆ ತಲುಪಿಲ್ಲ. ಆದರೆ ಎಎನ್​ಐ ಟ್ವೀಟ್ ಪ್ರಕಾರ ‘ಭಜರಂಗಿ ಭಾಯಿಜಾನ್’ ನಟ ರಿಯೋ ಒಲಿಂಪಿಕ್ಸ್​ನಲ್ಲಿ ಸದ್ಭಾವನಾ ರಾಯಭಾರಿಯಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕೀಡಾಕೂಟಕ್ಕೆ ಸದ್ಭಾವನಾ ರಾಯಭಾರಿಯಾಗಿ ಬಾಲಿವುಡ್ ಸೂಪರ್​ಸ್ಟಾರ್ ಒಬ್ಬರು ಆಯ್ಕೆಯಾಗಿರುವುದು ಇದೆ ಪ್ರಪ್ರಥಮ. ಸಲ್ಮಾನ್ ಖಾನ್ ಅವರು ಪ್ರಸ್ತುತ ಕ್ರೀಡಾ-ನಾಟಕ ‘ಸುಲ್ತಾನ್’ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

Write A Comment