ಮನೋರಂಜನೆ

ಕ್ಯಾನ್ಸರ್​ನಿಂದ ಹೊರ ಬಂದ ಭಾರತದ ಮಾಜಿ ಕ್ರಿಕೆಟಿಗ

Pinterest LinkedIn Tumblr

Arun-Lal-recoveringಕೋಲ್ಕತ: ಭಾರತದ ಮಾಜಿ ಆರಂಭಿಕ ಬ್ಯಾಟ್ಸ್​ಮನ್ ಅರುಣ್ ಲಾಲ್ ಭಯಾನಕ ಕ್ಯಾನ್ಸರ್ ಖಾಯಿಲೆಯಿಂದ ಗುಣ ಮುಖರಾಗಿದ್ದು, ಇದು ನನ್ನ ಎರಡನೇಯ ಇನಿಂಗ್ಸ್ ಎಂದು ಶನಿವಾರ ತಿಳಿಸಿದ್ದಾರೆ.

60ರ ಹರೆಯದ ಅರುಣ್ ಲಾಲ್ ಮಾತನಾಡುತ್ತಾ, ನನಗೆ ಮತ್ತೊಂದು ಅವಕಾಶ ನೀಡಿದಕ್ಕೆ ಮೊದಲನೇಯದಾಗಿ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ, ಅದೇ ರೀತಿ ಕಠೀಣ ಪರಿಸ್ಥಿಯಲ್ಲಿದ್ದಾಗ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿದ ವೈದ್ಯರಿಗೆ ಋಣಿಯಾಗಿರುವೆ ಎಂದು ತಿಳಿಸಿದ್ದಾರೆ.

ಸದಾ ನಾನು ಸಕಾರಾತ್ಮಕ ಚಿಂತನೆ ನಡೆಸಿ ರೋಗದ ಗಂಭೀರತೆಯನ್ನು ಮರೆಯಲು ಪ್ರಯತ್ನಿಸುತ್ತಿದ್ದು, ಈ ಸಂದರ್ಭದಲ್ಲಿ ಕ್ಯಾನ್ಸರ್ ಜಯಿಸಿ ಬಂದ ಯುವಿಯನ್ನು ನೆನಪಿಸಿಕೊಳ್ಳುತ್ತಿದ್ದೆ. ಹಲ್ಲಿನ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ವೈದ್ಯರು 14ಗಂಟೆ ತೆಗೆದು ಕೊಂಡಿದ್ದರು ಎಂದು ಉಲ್ಲೇಖಿಸಿದ್ದಾರೆ.

ಭಾರತದ ಪರ 16 ಟೆಸ್ಟ್ ಪಂದ್ಯ ಹಾಗೂ 13 ಏಕದಿನ ಪಂದ್ಯಗಳನ್ನು ಆಡಿರುವ ಲಾಲ್, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಪೇರಿಸಿದ್ದಾರೆ. ನಿವೃತ್ತಿ ನಂತರ ಅಂತಾರಾಷ್ಟ್ರಿಯ ಪಂದ್ಯಗಳಿಗೆ ಕಾಮೆಂಟರಿ ಕೊಡುತ್ತ ಮನೆ ಮಾತಾಗಿದ್ದರು.

ಪಿಗ್ಗಿ ಲವ್ ಯೂ, ನಿಮ್ಮ ಧ್ವನಿಗಾಗಿ ಕಾತರರಾಗಿದ್ದೇವೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.

Write A Comment