ಮನೋರಂಜನೆ

ನಾನು ನೋಡಿದ ಬೆಸ್ಟ್‌ ತಿಥಿ ಇದು -ಪುನೀತ್‌

Pinterest LinkedIn Tumblr

21-CINEMA-5
“ಈ ಸಿನಿಮಾ ನೋಡಿ ಒಂಥರಾ “ಗಾಡ್ಸ್‌ ಮಸ್ಟ್‌ ಬಿ ಕ್ರೇಝಿ’ ಚಿತ್ರ ನೋಡಿದಂಗಾಯಿತು …’ ಪುನೀತ್‌ ಬಹಳ ಖುಷಿಯಾಗಿದ್ದರು. ಅವರು ಖುಷಿಯಾಗಿದ್ದು “ತಿಥಿ’ ಚಿತ್ರದ ಬಗ್ಗೆ. “ರಾಜಕುಮಾರ’ ಚಿತ್ರದ ಚಿತ್ರೀಕರಣಕ್ಕೆ ಆಸ್ಟ್ರೇಲಿಯಾಗೆ ಹೊರಡುವುದಕ್ಕಿಂತ ಮುನ್ನ, “ತಿಥಿ’ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಅವರು ಮಾತಾಡಿದರು. “ನನಗಂತೂ ಈ ಚಿತ್ರ ಸಖತ್‌ ಖುಷಿಯಾಯಿತು. ಮಂಡ್ಯ, ಹಾಸನ ಜನರಿಗಂತೂ ಈ ಚಿತ್ರ ಖಂಡಿತಾ ಹಬ್ಬ. ಏಕೆಂದರೆ, ಆ ಸೊಗಡು ಈ ಚಿತ್ರದಲ್ಲಿದೆ. ಈ ಚಿತ್ರವನ್ನು ಮಿಸ್‌ ಮಾಡಿಕೊಳ್ಳಬಾರದು’ ಎಂದರು ಪುನೀತ್‌ ರಾಜಕುಮಾರ್‌.

ಪುನೀತ್‌ ಚಿತ್ರವನ್ನು ಮೆಚ್ಚಿಕೊಂಡಿದ್ದು, ಬಂದು ಟ್ರೇಲರ್‌ ಮತ್ತು ಪೋಸ್ಟರ್‌ ಬಿಡುಗಡೆ ಮಾಡಿದ್ದು ನೋಡಿ ನಿರ್ದೇಶಕ ರಾಮ್‌ ರೆಡ್ಡಿ
ಥ್ರಿಲ್‌ ಆಗಬಿಟಿದ್ದರು. “ನಮ್ಮದು ಹೊಸಬರ ತಂಡ. ಆದರೂ ಪುನೀತ್‌ ರಾಜಕುಮಾರ್‌ ಅವರು ಇಲ್ಲಿಯವರೆಗೂ ಬಂದು, ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅವರೊಬ್ಬ ನಿಜವಾದ ಹೀರೋ ಮತ್ತು ಸ್ನೇಹಿತ’ ಎಂದರು ರಾಮ್‌ ರೆಡ್ಡಿ. “ತಿಥಿ’ ಚಿತ್ರವನ್ನು ರಾಮ್‌ ಮಾಡಿದ ರೀತಿಯೇ ರೋಚಕವಾಗಿದೆ. 100ಕ್ಕೂ ಹೆಚ್ಚು ಪಾತ್ರಗಳಿರುವ ಈ ಚಿತ್ರವನ್ನು ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ಮಾಡಿದ್ದಾರಂತೆ ರಾಮ್‌. ಚಿತ್ರದ ಸ್ಕ್ರೀನ್‌ಪ್ಲೇ 160 ಪುಟಗಳಷ್ಟು ಇದೆಯಂತೆ. ಈ ಚಿತ್ರ ಏನಾದರೂ ಸಾಧ್ಯವಾಗಿದ್ದರೆ, ಅದಕ್ಕೆ ಮೂರು ಜನ ಪ್ರಮುಖ ಕಾರಣ ಎಂಬುದು ರಾಮ್‌ ಅಭಿಪ್ರಾಯ.
-ಉದಯವಾಣಿ

Write A Comment