ಮನೋರಂಜನೆ

ಏಪ್ರಿಲ್‌ 22ಕ್ಕೆ ಬಬ್ರುವಾಹನ ಬಿಡುಗಡೆ

Pinterest LinkedIn Tumblr

21-CINEMA-6ಈ ಬಾರಿ ವರನಟ ಡಾ.ರಾಜಕುಮಾರ್‌ ಅವರ ಹುಟ್ಟುಹಬ್ಬಕ್ಕೊಂದು ವಿಶೇಷವಿದೆ. ಅದು ಅಭಿಮಾನಿಗಳಿಗೆ ವಿಶೇಷ ಕೊಡುಗೆಯೂ ಹೌದು. ಅದೇನೆಂದರೆ, ಅತ್ಯಂತ ಜನಪ್ರಿಯತೆ ಗಳಿಸಿರುವ “ಬಬ್ರುವಾಹನ’ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವುದು. ಏಪ್ರಿಲ್‌
22 ರಂದು ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಿದ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಕೆಸಿಎನ್‌ ಗೌಡ ಅವರ ಪುತ್ರ ಕೆಸಿಎನ್‌ ಮೋಹನ್‌ ಅಣಿಯಾಗಿದ್ದಾರೆ. ರಾಜಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ “ಬಬ್ರುವಾಹನ’ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿದೆ. 7.1 ಸೌಂಡ್‌ ಟೆಕ್ನಾಲಜಿಯೊಂದಿಗೆ ಚಿತ್ರ ತೆರೆ ಕಾಣುತ್ತಿದೆ. ಇತ್ತೀಚೆಗೆ ಚಿತ್ರದ ಪೂರ್ವಭಾವಿ ಪ್ರದರ್ಶನವನ್ನು ಏರ್ಪಡಿಸಿದ್ದರು ಕೆಸಿಎನ್‌ ಮೋಹನ್‌.

ಅಂದಿನ ಹೈಲೈಟ್‌ ಹಿರಿಯ ನಟಿ ಹಾಗು “ಬಬ್ರುವಾಹನ’ ಚಿತ್ರದಲ್ಲಿ ರಾಜಕುಮಾರ್‌ ಅವರಿಗೆ ಜೋಡಿಯಾಗಿದ್ದ ಸರೋಜಾದೇವಿ.
ಅಷ್ಟೇ ಅಲ್ಲ, ಆ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ಭಾರ್ಗವ. ಸಿನಿಮಾ ನೋಡಿ ಹಿಂದಿನ ನೆನಪು ಮೆಲುಕು ಹಾಕಿದ ಭಾರ್ಗವ ಮತ್ತು ರಾಮಕೃಷ್ಣ. “ಬಬ್ರುವಾಹನ’ ಆಗಿನ ಕಾಲಕ್ಕೆ 35 ಲಕ್ಷ ರೂ.ಬಜೆಟ್‌ನಲ್ಲಿ ಚಿತ್ರೀಕರಣಗೊಂಡಿತ್ತು. ಆದರೆ, ಈಗ ಅದೇ ಚಿತ್ರದ ಹೊಸ ತಂತ್ರಜ್ಞಾನಕ್ಕಾಗಿ 60 ಲಕ್ಷ ರೂ.ಖರ್ಚಾಗಿದ್ದು, ಬಿಡುಗಡೆಯ ಹೊತ್ತಿಗೆ ಕೋಟಿ ಸಮೀಪಿಸಲಿದೆ ಎಂಬುದು ಮೋಹನ್‌ ಮಾತು. “ಆ ದಿನಗಳಲ್ಲಿ “ಬಬ್ರುವಾಹನ’ ಚಿತ್ರಕ್ಕೆ ಇದ್ದಂತಹ ಬೇಡಿಕೆ ಈಗಲೂ ಇದೆ ಎಂಬುದೇ ಸಂತಸ’ ಅನ್ನುತ್ತಾರೆ ಭಾರ್ಗವ. ಚಿತ್ರ ವೀಕ್ಷಿಸಿದ ಸರೋಜಾದೇವಿ ಕೂಡ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. “ಆಗಿನ ದಿನಗಳಲ್ಲಿ ಎಲ್ಲವೂ ಕಷ್ಟವಾಗಿತ್ತು. ಈಗಿನಂತೆ ಯಾವುದೇ ತಂತ್ರಜ್ಞಾನ ಮುಂದುವರೆದಿರಲಿಲ್ಲ. ಅಂತಹ ದಿನಗಳಲ್ಲೂ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರು ಒಳ್ಳೆಯ ಸಿನಿಮಾ ಮಾಡಿದರು. ಇಂತಹ ಚಿತ್ರದಲ್ಲಿ ನಾನು ಇದ್ದೇನೆ ಅನ್ನೋದೇ ಖುಷಿಯ ವಿಷಯ’ ಅಂದರು ಸರೋಜಾದೇವಿ.

ನಟ ರಾಮಕೃಷ್ಣ ಕೂಡ “ಬಬ್ರುವಾಹನ’ ಚಿತ್ರದಲ್ಲಿ ಭಾಗವಾಗಿದ್ದಕ್ಕೆ ಖುಷಿಗೊಂಡು, ಇದು ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಚಿತ್ರ
ಅಂದರು. ಅಂದಹಾಗೆ, ಈ ಚಿತ್ರವನ್ನು ರಾಜ್ಯಾದ್ಯಂತ ಸುಮಾರು 60 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ
ಮಾಡಲಾಗುತ್ತಿದೆ.

-ಉದಯವಾಣಿ

Write A Comment