ಮುಂಬೈ

ಶನಿ ಶಿಂಗ್ಣಾಪುರದ ಬಳಿಕ ತ್ರಿಯಂಬಕೇಶ್ವರ ಗರ್ಭಗುಡಿ ಪ್ರವೇಶಿಸಿದ ಮಹಿಳೆಯರು

Pinterest LinkedIn Tumblr

saniಮುಂಬೈ, ಏ.21- ಶನಿಶಿಂಗ್ಣಾಪುರದ ಶನಿ ಮಹಾತ್ಮನ ದೇವಾಲಯದಲ್ಲಿ ಪ್ರವೇಶ ಪಡೆದ ನಂತರ ಮಹಿಳೆಯರು ಇಂದು ಮುಂಜಾನೆ ಮಹಾರಾಷ್ಟ್ರದ ನಾಶಿಕ್‍ನಲ್ಲಿರುವ ಹೆಸರಾಂತ ತ್ರಿಯಂಬಕೇಶ್ವರ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆದರು. ವನಿತಾಗುಟ್ಟೆ ನೇತೃತ್ವದ ಸ್ವರಾಜ್ ಸಂಘಟನೆಯ ಮಹಿಳೆಯರು ಇಂದು ಬೆಳಗ್ಗೆ 6 ಗಂಟೆಗೆ ತ್ರಿಯಂಬಕೇಶ್ವರ ಸ್ವಾಮಿ ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಿ ಪೂಜೆ ಸಲ್ಲಿಸಿದರು. ನಿನ್ನೆ ಗರ್ಭಗುಡಿ ಪ್ರವೇಶಿಸುವ ಮಹಿಳೆಯರನ್ನು ಸ್ಥಳೀಯರು ತಡೆದು ಪ್ರವೇಶಕ್ಕೆ ಅಡ್ಡಿಪಡಿಸಿದರು. ಈ ವೇಳೆ ಮಹಿಳೆಯರ ಮೇಲೆ ಹಲ್ಲೆಗಳೂ ನಡೆದಿದ್ದವು. ಗಲಭೆಯನ್ನು ನಿಯಂತ್ರಿಸಲು ಪೆÇಲೀಸರು ಮಧ್ಯಪ್ರವೇಶ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ತಾವು ದೇವಸ್ಥಾನ ಪ್ರವೇಶಿಸಲು ರಕ್ಷಣೆ ನೀಡುವಂತೆ ಮಹಿಳೆಯರು ಮನವಿ ಮಾಡಿದ್ದರು. ಅವರ ಮನವಿಯಂತೆ ಇಂದು ನಾವು ಅವರಿಗೆ ಸೂಕ್ತ ರಕ್ಷಣೆ ಒದಗಿಸಿದ್ದೇವೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿನ್ನೆ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 150 ಜನರನ್ನು ಬಂಧಿಸಲಾಗಿದೆ.

ದೇವಸ್ಥಾನ ಟ್ರಸ್ಟ್ ಕಳೆದ ವಾರವೇ ಮಹಿಳೆಯರ ಪ್ರವೇಶಕ್ಕೆ ಅನುಮೋದನೆ ನೀಡಿತ್ತಾದರೂ, ದೇವಾಲಯ ಪ್ರವೇಶದ ವೇಳೆ ಮಹಿಳೆಯರು ಒದ್ದೆಯಾದ ರೇಷ್ಮೆ ಅಥವಾ ಹತ್ತಿ ಬಟ್ಟೆ ತೊಟ್ಟು ಬರುವಂತೆ ಸೂಚಿಸಿದ್ದರು. ಆದರೆ, ಇದಕ್ಕೆ ಸ್ವರಾಜ್ ಮಹಿಳಾ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಇಂದು ಒಣಬಟ್ಟೆಯಲ್ಲೇ ದೇವಾಲಯ ಪ್ರವೇಶಿಸಿದ ಮಹಿಳಾ ಸಂಘಟನೆಯ ಮುಖ್ಯಸ್ಥೆ ವನಿತಾಗುಟ್ಟೆ ಮಹಾರಾಷ್ಟ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

Write A Comment