ಮನೋರಂಜನೆ

ಗಣೇಶ ಚೆಲ್ಲಾಟಕ್ಕೆ 10 ವರ್ಷ

Pinterest LinkedIn Tumblr

ganeshಗಣೇಶ್‌ಗೆ ಇವತ್ತು ಸ್ಪೆಷಲ್‌ ದಿನ ಎಂದರೆ ತಪ್ಪಿಲ್ಲ. ಏಕೆಂದರೆ, ಗಣೇಶ್‌ ಹೀರೋ ಆಗೊ ಇವತ್ತಿಗೆ 10 ವರ್ಷಗಳು ಮುಗಿದಿವೆ. 2006ರ
ಏಪ್ರಿಲ್‌ 21ರ ಶುಕ್ರವಾರದಂದು, ಗಣೇಶ್‌ ನಾಯಕನಾಗಿ ಅಭಿನಯದ ಮೊದಲ ಚಿತ್ರ “ಚೆಲ್ಲಾಟ’, ಮೇನಕಾ ಹಾಗೂ ಇನ್ನಿತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅದಾಗಿ ಇವತ್ತಿಗೆ 10 ವರ್ಷಗಳಾಗಿವೆ. ಈ 3650 ದಿನಗಳಲ್ಲಿ 30 ಚಿತ್ರಗಳು, ಗೆಲುವು, ಸೋಲು ಎಲ್ಲವನ್ನೂ ನೋಡಿದ್ದಾಗಿದೆ.

“ಕ್ಲೀಶೆ ಎನಿಸಬಹುದು. ಆದರೆ, 10 ವರ್ಷ ನಿಜಕ್ಕೂ ಕಳೆದಿದ್ದೇ ಗೊತ್ತಾಗಲಿಲ್ಲ. ಸ್ಟ್ರಗ್ಲರ್‌ ಆಗಿದ್ದವನಿಗೆ ಬ್ರೇಕ್‌ ಕೊಟ್ಟಿದ್ದು “ಚೆಲ್ಲಾಟ’. ಅದಾದ ಮೇಲೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಗೆಲುವು, ಸೋಲು ಎಲ್ಲವನ್ನೂ ನೋಡಿದ್ದಾಗಿದೆ. ಪ್ರತಿಯೊಂದು ಚಿತ್ರದಲ್ಲೂ ಒಂದೊಂದು ಹೊಸ ವಿಷಯವನ್ನು ಕಲಿತಿದ್ದೇನೆ, ಕಲಿಯುತ್ತಲೇ ಇದ್ದೇನೆ’ ಎನ್ನುತ್ತಾರೆ ಗಣೇಶ್‌.

ಈ 10 ವರ್ಷಗಳ ಬಗ್ಗೆ ಏನಂತೀರೀ ಅಂದರೆ, ಥ್ಯಾಂಕ್ಸ್‌ ಎಂಬ ಪದ ಅವರಿಂದ ಬರುತ್ತದೆ. “ಯಾರಿಗೆ ಧನ್ಯವಾದ ಹೇಳಬೇಕು ಗೊತ್ತಾಗುತ್ತಿಲ್ಲ. ನನ್ನನ್ನು ಬೆಳೆಸಿದ ಪ್ರೇಕ್ಷಕರಿಗೆ, ಚಿತ್ರರಂಗದವರಿಗೆ, ಜೊತೆಗೆ ಕೆಲಸ ಮಾಡಿದ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರಿಗೆ … ಹೀಗೆ ಒಂದು ದೊಡ್ಡ ಪಟ್ಟಿಯೇ ಇದೆ. ಅವರೆಲ್ಲರಿಗೂ ನಾನು ಥ್ಯಾಂಕ್ಸ್‌ ಹೇಳಲೇಬೇಕು. ಅವರೆಲ್ಲಾ ಇಲ್ಲದಿದ್ದರೆ,
ಈ 10 ವರ್ಷಗಳನ್ನು ನೋಡೋಕೆ ಸಾಧ್ಯವಿರುತ್ತಿರಲಿಲ್ಲ. ನನ್ನ ಪಾಲಿಗೆ ಈ ಸಮಯ ಅಮೂಲ್ಯ’ ಎನ್ನುತ್ತಾರೆ ಅವರು.
ಅಂದಹಾಗೆ, ಗಣೇಶ್‌ ಅಭಿನಯದ “ಸ್ಟೈಲ್‌ ಕಿಂಗ್‌’ ಮತ್ತು “ಜೂಮ್‌’ ಚಿತ್ರಗಳು ಮೇ ತಿಂಗಳಲ್ಲಿ ಬಿಡುಗಡೆಯಾಗಲಿವೆ.
-ಉದಯವಾಣಿ

Write A Comment