ರಾಷ್ಟ್ರೀಯ

2015ರಲ್ಲಿ ದೇಶದಲ್ಲಿ ನಿತ್ಯ ರಸ್ತೆ ಅಪಘಾತದಲ್ಲಿ ಸರಾಸರಿ 400 ಸಾವು : ರಾಜ್ಯಕ್ಕೆ 4 ನೇ ಸ್ಥಾನ

Pinterest LinkedIn Tumblr

accidentನವದೆಹಲಿ, ಏ.21- ರಸ್ತೆ ಅಪಘಾತದಲ್ಲಿ ಕರ್ನಾಟಕ ದೇಶದಲ್ಲಿಯೇ ನಾಲ್ಕನೆಯ ಸ್ಥಾನದಲ್ಲಿದೆ. ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ ತಮಿಳುನಾಡು ಮತ್ತು ಮಹಾರಾಷ್ಟ್ರ ಎರಡು ಮತ್ತು ಮೂರು ಸ್ಥಾನದಲ್ಲಿವೆ.
2015ರಲ್ಲಿ ಕರ್ನಾಟಕದಲ್ಲಿ ಒಟ್ಟು 10,856 ಜನರು, ಉತ್ತರ ಪ್ರದೇಶದಲ್ಲಿ 17,666, ತಮಿಳುನಾಡಿನಲ್ಲಿ 15,642 ಮತ್ತು ಮಹಾರಾಷ್ಟ್ರದಲ್ಲಿ 13,212 ಜನರು ಅಪಘಾತಕ್ಕೆ ಬಲಿಯಾಗಿದ್ದಾರೆ. 2015ರಲ್ಲಿ ದೇಶದಲ್ಲಿ ನಿತ್ಯ ಸರಾಸರಿ 400 ಸಾವುಗಳಾಗಿದ್ದು ಒಟ್ಟು 1,46,133 ಜನರು ಅಸುನೀಗಿದ್ದಾರೆ. ರಾಜ್ಯ ಪೊಲೀಸರು ನೀಡಿರುವ ಅಂಕಿ-ಅಂಶಗಳಿಂದ ಈ ಮಾಹಿತಿ ಲಭಿಸಿದೆ.

2014ರಲ್ಲಿ ಸಹ ಕರ್ನಾಟಕ ನಾಲ್ಕನೆಯ ಸ್ಥಾನದಲ್ಲಿದ್ದು 10,452 ಜನರು ಸಾವನ್ನ್ನಪ್ಪಿದ್ದಾರೆ. ದೇಶದಲ್ಲಿ ದಿನೇ ದಿನೇ ರಸ್ತೆ ಅಪಘಾತ ಹೆಚ್ಚುತ್ತಿದ್ದು ಅದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲು ಕೇಂದ್ರ ಸಾರಿಗೆ ಇಲಾಖೆ ಮುಂದಿನ ವಾರ ಎಲ್ಲಾ ರಾಜ್ಯಗಳ ಸಭೆ ಕರೆದಿದೆ. 2020ರ ವೇಳೆಗೆ ಶೇ.50ರಷ್ಟು ಅಪಘಾತಗಳನ್ನು ಇಳಿಸುವ ಗುರಿಯನ್ನು ಹೊಂದಲಾಗಿದೆ ಎನ್ನಲಾಗಿದೆ.

Write A Comment