ಅಂತರಾಷ್ಟ್ರೀಯ

90ನೇ ವಸಂತಕ್ಕೆ ಕಾಲಿಟ್ಟಿ ಬ್ರಿಟನ್ ರಾಣಿ : ದೇಶಾದ್ಯಂತ ಸಂಭ್ರಮ-ಸಡಗರ

Pinterest LinkedIn Tumblr

raniಲಂಡನ್, ಏ.21- ವಿಶ್ವದ ಅತ್ಯಂತ ಪ್ರಾಚೀನ ಸಾಮ್ರಾಜ್ಯಶಾಹಿ ಅರಸೊತ್ತಿಗೆಯಾಗಿರುವ ಬ್ರಿಟನ್ನಿನ ಹಿರಿಯ ರಾಣಿ ಎಲಿಜಬೆತ್ ಅವರು ಇಂದು 90ನೆ ವಸಂತಕ್ಕೆ ಕಾಲಿಟ್ಟಿದ್ದು, ರಾಜಧಾನಿ ಲಂಡನ್‍ನಲ್ಲಿ ರಾಣಿಯ ಹುಟ್ಟುಹಬ್ಬ ಆಚರಣೆ ಸಂಕೇತವಾಗಿ ನೂರಾರು ಸೈರನ್‍ಗಳು ಮೊಳಗಿ, ಜತೆಗೆ ನೂರಾರು ಕುಶಾಲುತೋಪುಗಳನ್ನು ಹಾರಿಸುವ ಮೂಲಕ ಇಡೀ ದೇಶ ಅವರನ್ನು ಅಭಿನಂದಿಸಿತು. ರಾಣಿ ಎಲಿಜಬೆತ್ ಅವರ ಜನ್ಮದಿನ ಆಚರಣೆ ಸಾಮಾನ್ಯವಾಗಿ ಪ್ರತಿವರ್ಷ ನಿರಾಡಂಬರವಾಗಿ ನಡೆಯುತ್ತಿತ್ತು. ಆದರೆ, ಇಂದು ಅವರು 90ನೆ ವರ್ಷಕ್ಕೆ ಕಾಲಿಟ್ಟ ಸಂಭ್ರಮವನ್ನು ಇಡೀ ದೇಶ ಆಚರಿಸಿತು.

90 ವರ್ಷವಾದರೂ ಇನ್ನೂ ದಣಿವರಿಯದ ರಾಣಿ ಎಲಿಜಬೆತ್ ಪ್ರತಿ ವರ್ಷವೂ ನೂರಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ತಮ್ಮ ಸ್ವಗೃಹ ಪಶ್ಚಿಮ ಲಂಡನ್‍ನಲ್ಲಿರುವ ವಿಂಡ್ಸರ್ ಕ್ಯಾಸಲ್ ನಿವಾಸಕ್ಕೆ ಇಂದು ಸಾವಿರಾರು ಜನ ಆಗಮಿಸಿ ರಾಣಿಗೆ ಶುಭ ಹಾರೈಸಿದರು. ಭೂಸೇನೆಯ ಪದಾತಿದಳದವರೂ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಇದೇ ವೇಳೆ ಇಲ್ಲಿನ ಆಕಾಶವಾಣಿಗೆ ಸಂದರ್ಶನ ನೀಡಿದ ರಾಣಿಯವರ ಮೊಮ್ಮಗ ಹಾಗೂ ಭವಿಷ್ಯದ ಚಕ್ರವರ್ತಿ ರಾಜಕುಮಾರ ವಿಲಿಯಮ್ಸ್ ಹಿರಿಯ ರಾಣಿಯವರ ಸಾಧನೆಗಳನ್ನು ಬಣ್ಣಿಸಿದರು. ಕಳೆದ 64 ವರ್ಷಗಳ ಹಿಂದೆ ತನ್ನ ಮುತ್ತಜ್ಜಿ ವಿಕ್ಟೋರಿಯಾ ರಾಣಿಯಿಂದ ಅಧಿಕಾರ ಪಡೆದ ಎಲಿಜಬೆತ್ ಅವರು ರಾಣಿಯಾಗಿ 64 ವರ್ಷಗಳ ಸುದೀರ್ಘ ಕಾಲ ಸಾಮ್ರಾಜ್ಯವನ್ನು ಆಳಿದ್ದಾರೆ.

Write A Comment