ಮನೋರಂಜನೆ

ಸಂಚಾರಿ ವಿಜಯ್‌ ಹೊಸ ಚಿತ್ರ ಪಾದರಸ

Pinterest LinkedIn Tumblr

padarasaಸಂಚಾರಿ ವಿಜಯ್‌ ನಿಧಾನವಾಗಿ ಸಿನಿಮಾ ಮೇಲೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರ ನಾಯಕರಾಗಿರುವ ಸಾಕಷ್ಟು ಸಿನಿಮಾಗಳು ಚಿತ್ರೀಕರಣದಲ್ಲಿವೆ. ಈಗ ಅದಕ್ಕೆ ಹೊಸ ಸೇರ್ಪಡೆ “ಪಾದರಸ’. ಇದು ಸಂಚಾರಿ ವಿಜಯ್‌ ನಾಯಕರಾಗಿ ನಟಿಸುತ್ತಿರುವ ಹೊಸ ಸಿನಿಮಾ. ಈಗಾಗಲೇ ಚಿತ್ರೀಕರಣ ಕೂಡಾ ಆರಂಭವಾಗಿದೆ. ಹೃಷಿಕೇಶ್‌ ಜಂಬಗಿ ಈ ಸಿನಿಮಾದ ನಿರ್ದೇಶಕರು. ಆರ್ಟ್‌ ಅಂಡ್‌ ಸೋಲ್‌ ಮೀಡಿಯಾ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಚಿತ್ರದಲ್ಲಿ ಸಂಚಾರಿ ವಿಜಯ್‌ ಜೊತೆಗೆ ನಿರಂಜನ್‌ ದೇಶಪಾಂಡ, ಸಂಜನಾ ನಾಯ್ಡು ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

ಅಷ್ಟಕ್ಕೂ “ಪಾದರಸ’ ಎಂದರೇನು ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಏಕೆಂದರೆ ಚಿತ್ರ ತೆರೆಮೇಲೆ ಬರುವವರೆಗೆ ಕಾಯಲೇಬೇಕು. ಈಗಾಗಲೇ ಸಂಚಾರಿ ವಿಜಯ್‌ “ವರ್ತಮಾನ’, “ರಿಕ್ತಾ’, “ಸಿಪಾಯಿ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಈಗ “ಪಾದರಸ’ ಮಾಡುತ್ತಿದ್ದಾರೆ. ಚಿತ್ರಕ್ಕೆ ಎಂ.ಬಿ.ಅಳ್ಳಿಕಟ್ಟಿ ಛಾಯಾಗ್ರಹಣ, ಮನೋಜ್‌ ಸಂಗೀತ, ನಾಗೇಂದ್ರ ಅರಸ್‌ ಸಂಕಲನ, ಬಾಬು ಖಾನ್‌ ಕಲೆ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಮನಸ್ವಿನಿ, ಶೋಭರಾಜ್‌, ಅರವಿಂದ ರಾವ್‌, ರಮೇಶ್‌ ಬಾಬು ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದಾರೆ. ತಮ್ಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ವಿಜೇತರಾದ ನಂತರ ಸಂಚಾರಿ ವಿಜಯ್‌ಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ, ಸಂಚಾರಿ ವಿಜಯ್‌ ಮಾತ್ರ ತಮಗೆ ಇಷ್ಟವಾದ ಹಾಗೂ ನಟನೆಗೆ ಅವಕಾಶವಿರುವ ಪಾತ್ರಗಳನ್ನಷ್ಟೇ ಒಪ್ಪಿಕೊಳ್ಳುತ್ತಿದ್ದಾರೆ.
-ಉದಯವಾಣಿ

Write A Comment