ಅಂತರಾಷ್ಟ್ರೀಯ

ಹೆಚ್ಚು ಹಸಿರಿನ ಪ್ರದೇಶಗಳಲ್ಲಿನ ಮಹಿಳೆಯರ ಆಯುಷ್ಯ ಹೆಚ್ಚು!

Pinterest LinkedIn Tumblr

greenಹಚ್ಚ ಹಸಿರಿನ ಪ್ರದೇಶಗಳಲ್ಲಿ ಜೀವಿಸುವುದು ಎಲ್ಲ ರೀತಿಯಲ್ಲೂ ಖುಷಿಯ, ಆರೋಗ್ಯಕರ ವಿಚಾರ ಅನ್ನೋದು ಗೊತ್ತೇ ಇದೆ. ಅದ್ರಲ್ಲೂ ಮಹಿಳೆಯರ ಪಾಲಿಗೆ ಇದು ಪ್ಲಸ್‌ ಪಾಯಿಂಟ್‌ ಆಗುತ್ತೆ ಅನ್ನೋದನ್ನುಸಮೀಕ್ಷೆಯೊಂದು ಹೇಳಿದೆ.

ಆ ಪ್ರಕಾರ ಹೆಚ್ಚು ಹಸಿರಿನ ಪ್ರದೇಶಗಳಲ್ಲಿ ಜೀವಿಸುವ ಮಹಿಳೆಯರ ಆಯುಷ್ಯ ಹೆಚ್ಚಂತೆ. ಹಸಿರಿರುವ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರ ಆಯುಷ್ಯ ಹಸಿರು ಕಡಿಮೆ ಇರುವ ಪ್ರದೇಶಗಳಲ್ಲಿ ವಾಸಿಸುವ ಆಯುಷ್ಯಕ್ಕಿಂತ ಶೇ.12ರಷ್ಟು ಹೆಚ್ಚು. ಮನೆ ಪಕ್ಕದಲ್ಲೇ ಹಸಿರು ಹೆಚ್ಚಿದ್ದಷ್ಟೂ ಅದು ಪರಿಣಾಮ ಬೀರುತ್ತದೆ ಎನ್ನಲಾಗಿದೆ. ವಿಶೇಷವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಸಿರು ಇಲ್ಲದಲ್ಲಿ ವಾಸಿಸುವ ಮಹಿಳೆಯರ ಮೇಲೆ ವಿವಿಧ ಕಾಯಿಲೆಗಳು, ಕಿಡ್ನಿ ಸಮಸ್ಯೆ, ಕ್ಯಾನ್ಸರ್‌ ಇತ್ಯಾದಿ ಪರಿಣಾಮ ಬೀರುತ್ತದಂತೆ. ಜೊತೆಗೆ ಮಾನಸಿಕ, ಸಾಮಾಜಿಕ ವರ್ತನೆ ಮೇಲೆ ಪರಿಣಾಮ ಬೀರುತ್ತದಂತೆ. ಅಮೆರಿಕದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಎನ್ವಿರೋನ್‌ಮೆಂಟಲ್‌ ಹೆಲ್ತ್‌ ಸಯನ್ಸ್‌ (ಎನ್‌ ಐಇಎಚ್‌ಎಸ್‌)ನ ಸಮೀಕ್ಷಕರು ಇದನ್ನು ಹೇಳಿದ್ದಾರೆ. 2000-08ರ ಅವಧಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಹಸಿರು ಇರುವ ಪ್ರದೇಶದಲ್ಲಿರುವ ಮಹಿಳೆಯರು ಮತ್ತು ಹಸಿರು ಇಲ್ಲದೇ ಇರುವ ಪ್ರದೇಶದಲ್ಲಿರುವ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಿದ್ದಾರೆ.

ಫ‌ಲಿತಗಳು…
ಹಸಿರು ಇರುವ ಪ್ರದೇಶದಲ್ಲಿ ವಾಸಿಸುವ ಮಹಿಳೆಯರು ಹೆಚ್ಚು ಆರೋಗ್ಯವಾಗಿರ್ತಾರೆ

ಹಸಿರು ಇಲ್ಲದೇ ಇರುವ ಪ್ರದೇಶಗಳಲ್ಲಿರುವ ಮಹಿಳೆಯರಿಗೆ ಆರೋಗ್ಯ ಕಡಿಮೆ ಸಾವಿನ ಪ್ರಮಾಣ ಶೇ.12ರಷ್ಟು ಕಡಿಮೆ

ಹಸಿರು ಮಹಿಳೆಯರ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
-ಉದಯವಾಣಿ

Write A Comment