ಅಂತರಾಷ್ಟ್ರೀಯ

ಇನ್ನು ಹತ್ತೇ ವರ್ಷಕ್ಕೆಪೆಟ್ರೋಲ್‌, ಡೀಸೆಲ್‌ ಖಾಲಿ!

Pinterest LinkedIn Tumblr

peಜಗತ್ತಿನಾದ್ಯಂತ ರಸ್ತೆ ಮೇಲೆ ಸಾವಿರಾರು ಕಾರುಗಳು, ಲಾರಿಗಳು, ಬಸ್ಸುಗಳು, ಆಗಸದಲ್ಲಿ ವಿಮಾನ ಇತರ ವಾಹನಗಳು ಸಂಚರಿಸುತ್ತಿವೆ ಆದರೆ ಏಕಾಏಕಿ ಇವೆಲ್ಲ ಸ್ಥಗಿತಗೊಂಡರೆ ಏನಾಗಬಹುದು? ಇಡೀ ಜಗತ್ತಿನ ಜನಜೀವನವೇ ಸ್ತಬ್ಧವಾಗಬಹುದು. ಅಷ್ಟರಮಟ್ಟಿಗೆ ನಾವು ಪಳೆಯುಳಿಕೆಯ ಇಂಧನಗಳನ್ನು ಅರ್ಥಾತ್‌ ಪೆಟ್ರೋಲಿಯಂ ಉತ್ಪನ್ನ, ಕಲ್ಲಿದ್ದಲು ಇತ್ಯಾದಿಗಳನ್ನು ಅವಲಂಬಿಸಿದ್ದೇವೆ. ಆದರೆ ಇವುಗಳ ಬಳಕೆ ಪ್ರಮಾಣ ವಿಪರೀತ ಹೆಚ್ಚುತ್ತಿದ್ದು ಇನ್ನು ಕೇವಲ ಹತ್ತೇ ವರ್ಷಕ್ಕೆ ಖಾಲಿಯಾಗಲಿದೆ ಎಂದು ಸಂಶೋಧಕರ ತಂಡವೊಂದು ಎಚ್ಚರಿಸಿದೆ.

ಸಸ್ಸೆಕ್ಸ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವೊಂದು ಈ ಎಚ್ಚರಿಕೆ ರವಾನಿಸಿದೆ. ಪರ್ಯಾಯ ಇಂಧನದ ಬಗ್ಗೆ ಹೆಚ್ಚಿನ ಪ್ರಯತ್ನಗಳಾಗದೇ ಹೋದಲ್ಲಿ ಪರಿಸ್ಥಿತಿ ಬಿಗಡಾಯಿಸಲಿದೆ ಎಂದು ಹೇಳಿದೆ.

ಸಮೀಕ್ಷೆಯ ವಿವರಗಳನ್ನು ವಿವಿಯ ಪ್ರೊ.ಬೆಂಜಮಿನ್‌ ಸೊವಕೂಲ್‌ ಅವರು ವಿಶ್ಲೇಷಿಸಿದ್ದಾರೆ. ತಕ್ಷಣದಲ್ಲಿ ತಂತ್ರಜ್ಞಾನದ ನೆರವಿನಿಂದ ಪರ್ಯಾಯ ಇಂಧನದ ಹುಡುಕಾಟ, ಬಳಕೆ ನಡೆಯಬೇಕು ಎಂದವರು ಹೇಳುತ್ತಾರೆ. ಸದ್ಯ ಹವಾಮಾನ ಬದಲಾವಣೆ ಕಾರಣ, ಹೆಚ್ಚುತ್ತಿರುವ ಇಂಧನ ಬಳಕೆಗೆ ತಡೆಯಾಗಬೇಕು. ಕೂಡಲೇ ಪರ್ಯಾಯ ಇಂಧನದ ಬಳಕೆ ನಡೆಯಬೇಕು ಎಂದು ಹೇಳುತ್ತಾರೆ. ಪರ್ಯಾಯ ಇಂಧನ ಬಳಕೆ ಈ ಹಿಂದೆ ನಿಧಾನವಾಗಿತ್ತು. ಯುರೋಪ್‌ ನಲ್ಲಿ ಕಲ್ಲಿದ್ದಲು ಬಳಕೆ ವಿದ್ಯುತ್‌ ಆಗಿ ಬಳಸುವುದರಲ್ಲಿ 40ರಿಂದ 60 ವರ್ಷ ತೆಗೆದುಕೊಂಡಿತು. ಇತ್ತೀಚಿನ ದಿನಗಳಲ್ಲಿ ಪರ್ಯಾಯ ಇಂಧನ ಬಳಕೆಯತ್ತ ಬದಲಾವಣೆ ವೇಗನೆ ಆಗುತ್ತಿದ್ದರೂ, ಪರಿಣಾಮಕಾರಿ ಫ‌ಲಿತಾಂಶಕ್ಕೆ ಮತ್ತಷ್ಟು ವೇಗ ಪಡೆಯಬೇಕಿದೆ ಎಂದು ಹೇಳಿದ್ದಾರೆ.

ಅಧ್ಯಯನದಲ್ಲಿ ಬಹುಮುಖ್ಯವಾಗಿ ಪರ್ಯಾಯ ಇಂಧನ ಬಳಕೆಯತ್ತ ಬದಲಾಗುವುದನ್ನೇ ಪ್ರಮುಖವಾಗಿ ಗುರುತಿಸಲಾಗಿದೆ. ಕಲ್ಲಿದ್ದಲಿನಿಂದ ಸೀಮೆಎಣ್ಣೆ, ಬಳಿಕ ಎಲ್‌ಪಿಜಿ, ಪರಮಾಣು ಇಂಧನ ಹೀಗೆ ಬದಲಾವಣೆಗಳ ಅವಧಿಯನ್ನು ಪರಿಗಣಿಸಲಾಗಿದೆ. ವಿಶ್ವದ ವಿವಿಧೆಡೆಗಳಲ್ಲಿ ಈ ಕುರಿತ ಬದಲಾವಣೆಯನ್ನು ತುಲನೆ ಮಾಡಲಾಗಿದೆ.

ವಿಶ್ವದ ಸರ್ಕಾರಗಳು ಪರ್ಯಾಯ ಇಂಧನ ಬಳಕೆ ಬಗ್ಗೆ ಪ್ರಯತ್ನ ಪಟ್ಟರೆ ಮುಂದಿನ 10 ವರ್ಷದಲ್ಲಿ ಎದುರಾಗಬಹುದಾದ ಸಮಸ್ಯೆಯನ್ನು ತಪ್ಪಿಸಬಹುದು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮಮಾದರಿಯಲ್ಲಿ ಪರಿಣಾಮಕಾರಿಯಾಗಿ ಇಂಧನ ಬಳಕೆಯ ಮಾದರಿಗಳನ್ನು ಬಳಸಿಕೊಂಡರೆ ಸಮಸ್ಯೆಯನ್ನು ತಪ್ಪಿಸಬಹುದು ಎಂದು ಹೇಳಲಾಗಿದೆ. ಅಧ್ಯಯನವನ್ನು “ಎನರ್ಜಿ ರಿಸರ್ಚ್‌ ಆ್ಯಂಡ್‌ ಸೋಷ್ಯಲ್‌ ಸಯನ್ಸ್‌ ಜರ್ನಲ್‌’ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
-ಉದಯವಾಣಿ

Write A Comment