ಮನೋರಂಜನೆ

ವೀಕೆಂಡ್‌ ವಿಥ್‌ ರಮೇಶ್‌ನಲ್ಲಿ ಸುದೀಪ್‌

Pinterest LinkedIn Tumblr

sudeeಜೀಟಿವಿಯಲ್ಲಿ ಪ್ರಸಾರವಾಗುತ್ತಿರುವ “ವೀಕೆಂಡ್‌ ವಿಥ್‌ ರಮೇಶ್‌’ನ ಎರಡನೆಯ ಸೀಸನ್‌ ಮುಗಿಯುತ್ತಾ ಬಂದಿದೆ.
ಇನ್ನೆರೆಡು ಕಂತುಗಳು ಪ್ರಸಾರವಾದರೆ, ಕಾರ್ಯಕ್ರಮಕ್ಕೆ ಕುಂಬಳಕಾಯಿ ಒಡೆಯಲಾಗುತ್ತದೆ. ಅಂದಹಾಗೆ, “ವೀಕೆಂಡ್‌ ವಿಥ್‌ ರಮೇಶ್‌’ನ ಎರಡನೆಯ ಸೀಸನ್‌ ಮುಕ್ತಾಯವಾಗುವುದು ಸುದೀಪ್‌ ಅವರೊಂದಿಗೆ.

ಮೊದಲ ಸೀಸನ್‌ನಿಂದಲೇ ಸುದೀಪ್‌ ಅವರನ್ನು ಕರೆಸಬೇಕು ಎಂಬ ಪ್ರಯತ್ನಗಳಾಗುತ್ತಿದ್ದವು. ಈಗ ಕೊನೆಗೂ 2ನೆಯ ಸೀಸನ್‌ನ ಮುಕ್ತಾಯಕ್ಕೆ ಸುದೀಪ್‌ ಅತಿಥಿಯಾಗಿ ಬರುತ್ತಿರುವುದು ವಿಶೇಷ. ಸುದೀಪ್‌ ಅತಿಥಿಯಾಗಿ ಭಾಗವಹಿಸಿರುವ 2 ಕಂತುಗಳ ಚಿತ್ರೀಕರಣ ಮುಗಿದಿದೆ. ಈ ಕಂತುಗಳು ಎಲ್ಲಾ ಅಂದುಕೊಂಡಂತೆ ಆಗಿದ್ದರೆ ನಿನ್ನೆ (ಶನಿವಾರ) ಮತ್ತು ನಾಳೆ (ಭಾನುವಾರ) ಪ್ರಸಾರವಾಗಬೇಕಿತ್ತು. ಆದರೆ, “ಸರಿಗಮಪ’ದ 11ನೇ ಸೀಸನ್‌ನ ಕಾರ್ಯಕ್ರಮ ಪ್ರಸಾರವಾಗುತ್ತಿರುವುದರಿಂದ, ಸುದೀಪ್‌ ಅವರ ವೀಕೆಂಡ್‌ ಸೆಶನ್‌ ಮುಂದಿನ ವಾರಕ್ಕೆ ಮುಂದೂಡಲ್ಪಟ್ಟಿದೆ.
-ಉದಯವಾಣಿ

Write A Comment