ಮನೋರಂಜನೆ

ಗಯ್ನಾಳಿಗಳ ನೋಡಿ ಮೆಚ್ಚಿದ ರಾಜೇಶ್ವರಿ ತೇಜಸ್ವಿ

Pinterest LinkedIn Tumblr

gayyaliಸುಮನ ಕಿತ್ತೂರು ನಿರ್ದೇಶನದ “ಕಿರಗೂರಿನ ಗಯ್ನಾಳಿಗಳು’ ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಚಿತ್ರ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ಇತ್ತೀಚೆಗಷ್ಟೇ ರಾಜೇಶ್ವರಿ ತೇಜಸ್ವಿ ಅವರು ವೀಕ್ಷಿಸಿದ್ದಾರೆ.

ಅವರು “ಕಿರಗೂರಿನ ಗಯ್ನಾಳಿಗಳು’ ಚಿತ್ರವನ್ನು ನೋಡಿರುವುದಷ್ಟೇ ಅಲ್ಲ, ಆ ಚಿತ್ರವನ್ನು ಮೆಚ್ಚಿಕೊಂಡು ನಿರ್ದೇಶಕಿ ಸುಮನಾ ಕಿತ್ತೂರು ಅವರಿಗೊಂದು ಪ್ರೀತಿಯ ಪತ್ರವನ್ನೂ ಬರೆದಿದ್ದಾರೆ. ಏಪ್ರಿಲ್‌ 13 ರಂದು ಮೂಡಿಗೆರೆಯ
“ನಿರುತ್ತರ’ದಿಂದ ನೇರವಾಗಿ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ರಾಜೇಶ್ವರಿ ತೇಜಸ್ವಿ ಅವರು ಬರೆದಿರುವುದಾದರೂ ಏನು ಎಂಬ ಕುತೂಹಲವಿದ್ದರೆ, ಅವರೇ ಸ್ವತಃ ಬರೆದಿರುವ ಪತ್ರದ ಯಥಾವತ್‌ ಬರಹ ಇಲ್ಲಿದೆ ಓದಿ

ನಿಮ್ಮ “ಕಿರಗೂರಿನ ಗಯ್ನಾಳಿಗಳು’ ಸಿನಿಮಾ ನೋಡಿ ಬಂದೆ. ಸಂತೋಷವಾಯ್ತು. 40 ಕಿಲೋ ಮೀಟರ್‌ ಕ್ರಮಿಸಿ, ಅಂದರೆ ಜನ್ನಾಪುರ ಚಿತ್ರಕೂಟ ತೋಟದಿಂದ ಚಿಕ್ಕಮಗಳೂರಿಗೆ ಹೋಗಿ 3 ಸಿನಿಮಾ ನೋಡಿ ಬಂದಿದ್ದೆವು. ದಿ ಗ್ರೇಟ್‌
ಹೌಡಿನಿ (ಮ್ಯಾಜೀಷಿಯನ್‌) “ವರ್ಲ್ಡ್ ವೇರ್‌ ದೇರ್‌ ಈಸ್‌ ನೋ ಸನ್‌’. ಮತ್ತೂಂದು ಇಂಗ್ಲೀಷ್‌ ಸಂಗೀತಗಾರ್ತಿಯ ಬಗೆಗಿನದು.

(ಸಿನಿಮಾ ಪೂರ್ತಿ ಸಂಗೀತವೇ) ಮತ್ತೆಂದೂ ಆ ಕಡೆಗೇ ಹೋಗಲಿಲ್ಲ. ಈಗ ತೇಜಸ್ವಿ ಕೃತಿಯ ಸಿನಿಮಾ ಮಾಡಿ, ನಮಗೆ
ನೋಡಲು ಸದಾವಕಾಶ ಮಾಡಿಕೊಟ್ಟಿರಿ. ಧನ್ಯವಾದಗಳು. ನನ್ನ ಅಕ್ಕನ ಮಗ, ಸೊಸೆಯರ ಜೊತೆಗೆ ಹೋಗಿ ನೋಡಿದೆ. ಅವರೂ ಮೆಚ್ಚಿಕೊಂಡರು. ಸಿನಿಮಾ ಚೆನ್ನಾಗಿ ಮಾಡಿರುವಿರಿ. ನೋಡ್ತ ನೋಡ್ತ, ತೇಜಸ್ವಿ ಹೇಳಿದ
ಮಾತುಗಳು ನೆನಪಾದವು. “ನನ್ನ ಕೃತಿಗೇ ಜೋತು ಬೀಳದೆ, ನಾಲ್ಕು ಜನ ಕೂತು ನೋಡುವಂಥ ಸಿನೆಮಾ ಮಾಡ್ರಿ. ಅಲ್ಲದೆ ನಾಲ್ಕು ಕಾಸು ಹಾಕುವ ನಿರ್ಮಾಪಕನೂ ಕೈ ಸುಟ್ಟುಕೊಳ್ಳದಿರಲಿ’. 1995 ರಲ್ಲೆ ತೇಜಸ್ವಿ ಈ ಮಾತು ಹೇಳಿದ್ರು.
ಹಸಿರು ಉಸಿರಿನ ಪರಿಸರದ ದೃಶ್ಯಗಳೂ ಚೆನ್ನಾಗಿ ಮೂಡಿ ಬಂದಿವೆ. ನಟ ನಟಿಯರ ಅಟೆಂಪ್ಟ್ ಚೆನ್ನಾಗಿದೆ. ನಟರ ಆ್ಯಕ್ಟಿಂಗ್‌ ಸೂಪರ್‌º. ಕೆಲವು ದೃಶ್ಯದಲ್ಲಿ ಕಿರಗೂರಿನ ದಿಟ್ಟಿಯರ ಆ್ಯಕ್ಟಿಂಗ್‌ ಅಂತೂ ವಾವ್‌Ø! ಮತ್ತೂಮ್ಮೆ ಹೋಗಿ ಸಿನಿಮಾ ನೋಡುವ ಎಂದಾಗುತ್ತಿದೆ ನನಗೆ. ಮತ್ತೂಮ್ಮೆ ಧನ್ಯವಾದಗಳು.

ಶುಭಾಶಯಗಳೊಂದಿಗೆ ,
ಇಂತಿ ನಮಸ್ಕಾರಗಳು,
ರಾಜೇಶ್ವರಿ ತೇಜಸ್ವಿ.

ಹೀಗೆ ರಾಜೇಶ್ವರಿ ತೇಜಸ್ವಿ ಅವರು “ಕಿರಗೂರಿನ ಗಯ್ನಾಳಿಗಳು’ ಚಿತ್ರ ನೋಡಿ ಬಂದು ಪ್ರೀತಿಯಿಂದ ಬಲು ಖುಷಿಯಿಂದಲೇ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ “ಕಿರಗೂರಿನ ಗಯ್ನಾಳಿಗಳು’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಮತ್ತಷ್ಟು ಉತ್ಸಾಹದಲ್ಲಿದೆ.

ಪ್ರಿಯ ಸುಮನ್‌,

-ಉದಯವಾಣಿ

Write A Comment