ಆದಿತ್ಯ ಹಾಗೂ ಪಿ.ಎನ್. ಸತ್ಯ ಜೊತೆಯಾಗುತ್ತಿದ್ದಾರೆ. ಪಿ.ಎನ್. ಸತ್ಯ ಮಾಸ್ ಡೈರೆಕ್ಟರ್ ಎನಿಸಿಕೊಂಡರೆ, ಆದಿತ್ಯ ಮಾಸ್ ಹೀರೋ. ಈಗ ಇಬ್ಬರು ಜೊತೆಯಾಗಿದ್ದಾರೆ. ಇಷ್ಟು ಹೇಳಿದ ಮೇಲೆ ಮಾಸ್ ಸಿನಿಮಾವೊಂದು ಬರುತ್ತದೆಂದು ಪ್ರತ್ಯೇಕವಾಗಿ ಅಗತ್ಯವಿಲ್ಲ. ಹೌದು, ಈ ಇಬ್ಬರು ಜೊತೆಯಾಗಿ ಅಂಡರ್ವರ್ಲ್ಡ್ಗೆ ಕಾಲಿಟ್ಟಿ ದ್ದಾರೆ. ಅದು “ಬೆಂಗಳೂರು ಅಂಡರ್ವರ್ಲ್ಡ್’.
ಇದು ಆದಿತ್ಯ ಹಾಗೂ ಪಿ.ಎನ್.ಸತ್ಯ ಕಾಂಬಿನೇ ಶನ್ನಲ್ಲಿ ಬರುತ್ತಿರುವ ಚಿತ್ರದ ಹೆಸರು. “ಶಿವಾಜಿ ನಗರ’ ಚಿತ್ರದ ನಂತರ ಸತ್ಯ ಕೂಡಾ ಬೇರೆ ಯಾವುದೇ ಸಿನಿಮಾ ಮಾಡಿಲ್ಲ. ಈಗ ಪಕ್ಕಾ ಮಾಸ್ ಸಬೆjಕ್ಟ್ನೊಂದಿಗೆ ಈ ಸಿನಿಮಾ ಮಾಡುತ್ತಿದ್ದಾರೆ. ಆದಿತ್ಯ ಕೂಡಾ ಇಲ್ಲಿನ ಪಾತ್ರವನ್ನು ಇಷ್ಟಪಟ್ಟಿ ದ್ದಾರೆ. ಚಿತ್ರಕ್ಕೆ ಏಪ್ರಿಲ್ 18 ರಂದು ಮುಹೂರ್ತ ನಡೆಯಲಿದ್ದು, ನಂತರ ಸತತವಾಗಿ ಚಿತ್ರೀಕರಣ ಆರಂಭವಾಗಲಿದೆಯಂತೆ. ಈ ಸಿನಿಮಾ ಬಗ್ಗೆ ಮಾತನಾಡುವ ಆದಿತ್ಯ “ಕಥೆ ತುಂಬಾ ಚೆನ್ನಾಗಿದೆ. ಸದ್ಯಕ್ಕೆ ಸಿನಿಮಾ ಬಗ್ಗೆ ಹೆಚ್ಚೇನು
ಮಾತನಾಡುವುದಿಲ್ಲ. ಒಳ್ಳೆಯ ಪಾತ್ರವಿದೆ’ ಎಂದಷ್ಟೇ ಹೇಳುತ್ತಾರೆ. ಉಳಿ ದಂತೆ ಚಿತ್ರದಲ್ಲಿ ಯಾರು ನಟಿಸುತ್ತಾರೆ, ಛಾಯಾಗ್ರಹಣ, ಸಂಗೀತ … ಸೇರಿ ದಂತೆ ಇತರ ಅಂಶಗಳು ಇನ್ನಷ್ಟೇ ಫೈನಲ್ ಆಗಬೇಕಿದೆ. “ಬೆಂಗಳೂರು ಅಂಡರ್ ವರ್ಲ್ಡ್’ ಸಿನಿಮಾ ಮುಗಿಯುತ್ತಿದ್ದಂತೆ ಆದಿತ್ಯ “ಡೆಡ್ಲಿ-3′ ಚಿತ್ರದಲ್ಲಿ ನಟಿಸಲಿ ದ್ದಾರಂತೆ. ಜೊತೆಗೆ ಇಬ್ಬರು ಹೀರೋಗಳಿರುವ ಚಿತ್ರವೊಂದನ್ನು ಒಪ್ಪಿಕೊಂಡಿ
ದ್ದಾರೆ. ಹಾಗಾಗಿ ಆದಿತ್ಯ ಈ ವರ್ಷ ಬಿಝಿಯಾಗುವ ಸಾಧ್ಯತೆ ಇದೆ.
-ಉದಯವಾಣಿ