ಮನೋರಂಜನೆ

ಜೈ ಜಗದೀಶ್‌ ಪುತ್ರಿಯರ ಹೊಸ ಯಾನ

Pinterest LinkedIn Tumblr

jaiಅಮ್ಮ ಆ್ಯಕ್ಷನ್‌ ಹೇಳಿದ್ರೆ, ಮಕ್ಕಳು ನಟಿಸ್ತಾರೆ ನಿರ್ದೇಶಕಿ ಮತ್ತು ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್‌ ಮತ್ತೆ ಸುದ್ದಿಯಾಗಿದ್ದಾರೆ. ಇನ್ನೊಂದು ಚಿತ್ರ ನಿರ್ದೇಶನಕ್ಕೆ ಅವರು ಕೈ ಹಾಕಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ. ಅವರು ನಿರ್ದೇಶಿಸುತ್ತಿರುವ ಚಿತ್ರದ ವಿಶೇಷವೆಂದರೆ, ಅವರು ಈ ಸಲ ಬೇರೆ ಯಾರೋ, ಹೀರೋ, ಹೀರೋಯಿನ್‌ಗೆ ಚಿತ್ರ ನಿರ್ದೇಶಿಸುತ್ತಿಲ್ಲ. ಬದಲಾಗಿ ತಮ್ಮ ಪುತ್ರಿಯರಾದ ವೈಭವಿ, ವೈನಿಧಿ ಹಾಗು ವೈಸಿರಿ ಅವರಿಗಾಗಿ ಕಥೆಯೊಂದನ್ನು ಹೆಣೆದು ಚಿತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ.

ಅಲ್ಲಿಗೆ ಕುಟುಂಬದ ಎಲ್ಲರೂ ಸಿನಿಮಾ ರಂಗಕ್ಕೆ ಧುಮಿಕಿದಂತಾಗಿದೆ. ಅಂದಹಾಗೆ, ವಿಜಯಲಕ್ಷ್ಮೀ ಸಿಂಗ್‌ ಮಕ್ಕಳಿಗಾಗಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ “ಯಾನ’ ಎಂದು ನಾಮಕರಣ ಮಾಡಲಾಗಿದೆ. ಸಿನಿಮಾ ಹಿನ್ನೆಲೆಯಿರುವ ಕುಟುಂಬದ ಮೂವರು
ಸಹೋದರಿಯರು ನಟಿಸಿರುವುದು ಹೊಸದೇನಲ್ಲ. ಆದರೆ, ಮೂವರು ಸಹೋದರಿಯರು ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ಅದರಲ್ಲೂ ತಾಯಿ ನಿರ್ದೇಶನದಲ್ಲಿ ಕ್ಯಾಮೆರಾ ಮುಂದೆ ನಿಲ್ಲುತ್ತಿರುವುದು ಬಹುಶಃ ಭಾರತೀಯ ಚಿತ್ರರಂಗದಲ್ಲೇ ದಾಖಲೆ. ಈ ಚಿತ್ರ ಮತ್ತೂಂದು ದಾಖಲೆಯನ್ನೂ ಮಾಡುತ್ತಿದೆ. ಇಲ್ಲಿ ವಿಜಯಲಕ್ಷ್ಮೀಸಿಂಗ್‌ ನಿರ್ದೇಶಿಸಿದರೆ, ಪುತ್ರಿಯರಾದ ವೈಭವಿ, ವೈನಿಧಿ ಹಾಗು ವೈಸಿರಿ ಅವರು ನಾಯಕಿಯರಾಗಿದ್ದಾರೆ. ಈ ಚಿತ್ರವನ್ನು ಜೈ ಜಗದೀಶ್‌ ನಿರ್ಮಿಸುತ್ತಿದ್ದಾರೆ. ಅಲ್ಲಿಗೆ ಇದು ಮತ್ತೂಂದು ದಾಖಲೆಗೂ ಸೇರಿದ ಚಿತ್ರ ಎಂಬುದು ಸ್ಪಷ್ಟ. ಮಕ್ಕಳಿಗಾಗಿ ಪತ್ನಿ ನಿರ್ದೇಶನ ಮಾಡಿದರೆ, ಪತ್ನಿ ಹಾಗು ಮಕ್ಕಳ ಚಿತ್ರವನ್ನು ಜೈ ಜಗದೀಶ್‌ ನಿರ್ಮಿಸುತ್ತಿದ್ದಾರೆ. ಅಲ್ಲಿಗೆ ಇದೊಂದು ಕುಟುಂಬದವರೇ ಸೇರಿ ಮಾಡುತ್ತಿರುವ ಚಿತ್ರ ಎಂಬ ಮತ್ತೂಂದು ಸುದ್ದಿಗೆ
ಸೇರ್ಪಡೆಯಾಗುತ್ತಿದೆ.

ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಜರ್ನಿ ಕುರಿತಾದ ಕಥೆಯಂತೆ. ಆದರೆ, ಮೂವರು ಪುತ್ರಿಯರ ಪಾತ್ರವೇನು,
ಜರ್ನಿ ಎಲ್ಲಿಂದ ಎಲ್ಲಿಯವರೆಗೆ ಶುರುವಾಗುತ್ತೆ ಎಂಬ ಗುಟ್ಟನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಮೂವರು ಪುತ್ರಿಯರೇನೋ ಇಲ್ಲಿ
ನಾಯಕಿಯರಾಗಿದ್ದಾರೆ. ಅವರಿಗೆ ನಾಯಕರು ಇರುತ್ತಾರಾ? ಅಥವಾ ಇದು ನಾಯಕಿಯರ ಪ್ರಧಾನ ಚಿತ್ರವೇ ಎಂಬಿತ್ಯಾದಿ ವಿಷಯಗಳಿಗೆ ಉತ್ತರವಿಲ್ಲ. ಸೋಮವಾರ (ಇಂದು) ಚಿತ್ರದ ಮುಹೂರ್ತ ನೆರವೇರಲಿದೆ. ಬಹುಶಃ ಅಲ್ಲಿ ಎಲ್ಲಾ ವಿವರಗಳು ಸಿಗಲಿವೆ.
-ಉದಯವಾಣಿ

Write A Comment