ಮನೋರಂಜನೆ

“ಸ್ಟ್ರೇಟ್ ಫಾರ್ವರ್ಡ್” ಚಿತ್ರದಲ್ಲಿ ಸಂತು ಜೊತೆ ರಾಧಿಕಾ

Pinterest LinkedIn Tumblr

rakingಸ್ಯಾಂಡಲ್ ವುಡ್ “ಮಾಸ್ಟರ್ ಪೀಸ್” ಯಶ್ ಮುಂದಿನ ಸಿನಿಮಾ ಯಾವುದು ಅಂತಾ ತಲೆ ಕೊರೆದುಕೊಳ್ಳುತ್ತಿದ್ದ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಹೌದು, ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಸಿನಿಮಾಕ್ಕೆ “ಸಂತು ಸ್ಟ್ರೇಟ್ ಫಾರ್ವರ್ಡ್” ಎಂದು ನಾಮಕರಣ ಮಾಡಲಾಗಿದ್ದು, ಚಿತ್ರದ ಮೊದಲ ಫೋಸ್ಟರ್ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಚಿತ್ರದ ಹೆಸರು ಕೇಳಿದರೇ ನಾಯಕನ ಹೆಸರು ಹಾಗೂ ಆತ ಎಂಥ ಗುಣದವನು ಎಂಬುದು ಗೊತ್ತಾಗುತ್ತದೆ. ಅಷ್ಟರ ಮಟ್ಟಿಗೆ ಒಂದು ವಿಭಿನ್ನವಾದ ಟೈಟಲ್ ಇಟ್ಟಿದ್ದಾರೆ ನಿರ್ದೇಶಕ ಮಹೇಶ್ ರಾವ್. ಇನ್ನೂ “ಸ್ಟ್ರೇಟ್ ಫಾರ್ವರ್ಡ್” ಚಿತ್ರಕ್ಕೆ ಸ್ಟ್ರೇಟ್ ಆಗಿ ಬಂಡವಾಳ ಮಾಡುತ್ತಿರುವುದು ನಿರ್ಮಾಪಕ ಗಂಡುಗಲಿ ಕೆ. ಮಂಜು.

ನಿಮಗೆ ಇನ್ನೊಂದು ವಿಷಯ ಗೊತ್ತಿರಲಿ ಈ ಬಾರಿ ಯಶ್ ಗೆ ನಾಯಕಿಯಾಗಿರುವುದು ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್. “ಸಂತು ಸ್ಟ್ರೇಟ್ ಫಾರ್ವರ್ಡ್” ಚಿತ್ರ ಈ ಜೋಡಿಯ ಕಾಂಬೀನೇಷನ್ ನಲ್ಲಿ ಬರುತ್ತಿರುವ ನಾಲ್ಕನೇ ಸಿನಿಮಾ ಆಗಿದ್ದು, ಚಿತ್ರದಲ್ಲಿ ಈ ಜೊಡಿ ಕ್ಯೂಟ್ ಕಪಲ್ಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

“ಸ್ಟ್ರೇಟ್ ಫಾರ್ವರ್ಡ್” ಚಿತ್ರಕ್ಕೆ ಮ್ಯೂಸಿಕ್ ಮಾಂತ್ರಿಕ ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದು, ಯೋಗರಾಜ್ ಭಟ್ಟರ ಸಾಹಿತ್ಯವಿದೆ.

ಏನೇ ಆಗಲಿ ‘ಮೊಗ್ಗಿನ ಮನಸ್ಸಿನ’ ಯಶ್- ರಾಧಿಕಾ ಜೋಡಿ “ಸಂತು ಸ್ಟ್ರೇಟ್ ಫಾರ್ವರ್ಡ್” ಚಿತ್ರದಲ್ಲಿ ಯಾವ ರೀತಿ ಸಿನಿರಸಿಕರನ್ನ ಮೋಡಿ ಮಾಡುವುದೋ ಕಾದು ನೋಡೋಣ.

Write A Comment