ಮನೋರಂಜನೆ

ಸದ್ಯದಲ್ಲೇ ಸ್ಟೈಲ್‌ ಕಿಂಗ್‌ ತೆರೆಗೆ

Pinterest LinkedIn Tumblr

gaಮಾರುತಿ ಎಂಟರ್‌ ಪ್ರ„ಸಸ್‌ ಲಾಂಛನದಲ್ಲಿ ಮಾರುತಿ ಜೇಡಿಯವರ್‌ ಅವರು ನಿರ್ಮಿಸಿರುವ “ಸ್ಟೈಲ್‌ ಕಿಂಗ್‌’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ. ಚಿತ್ರ ಮಾಸಾಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲಿ ತೆರೆಗೆ ಬರಲಿದೆ.

ಪಿ.ಸಿ.ಶೇಖರ್‌ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್‌ ಅವರು ದ್ವಿಪಾತ್ರದಲ್ಲಿ ಅಭಿನಯಿಸಿರುವುದು ಈ ಚಿತ್ರದ ವಿಶೇಷ.ರಮ್ಯಾ ನಂಬಿಸನ್‌ ಈ ಚಿತ್ರದ ನಾಯಕಿ. ರಂಗಾಯಣ ರಘು, ಸಾಧುಕೋಕಿಲ, ಪದ್ಮಜಾರಾವ್‌, ಮಿತ್ರ, ಗಿರೀಶ್‌, ಅಮಿತ್‌ ಮುಂತಾದವರು “ಸ್ಟೈಲ್‌ ಕಿಂಗ್‌’ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಟರಾಜ್‌.ಜಿ ಸಂಭಾಷಣೆ ಬರೆದಿ¨ªಾರೆ. ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ.
-ಉದಯವಾಣಿ

Write A Comment