ಕರ್ನಾಟಕ

ಬರಲಿದೆ ತೆಳುವಾದ ಹಾಳೆಯ ಸೋಲಾರ್‌ ವಾಲ್‌ ಪೇಪರ್‌!

Pinterest LinkedIn Tumblr

soಮನೆಯಲ್ಲಿ ಸೌರ ವಿದ್ಯುತ್‌ ಪಡೆಯಬೇಕೆಂದರೆ ಚಾವಣಿಯ ಮೇಲೆ ಅಥವಾ ಬಿಸಿಲು ಬೀಳುವ ಜಾಗದಲ್ಲಿ ದೊಡ್ಡ ಗಾತ್ರದ ಸೌರ ಫ‌ಲಕಲಗಳನ್ನು ಅಳವಡಿಸಬೇಕು. ಅದಕ್ಕೊಂದಿಷ್ಟು ಜಾಗವನ್ನು ಮೀಸಲಿಡಬೇಕು.ಅದರೆ ಮುಂದಿನ ದಿನಗಳಲ್ಲಿ ಸೌರ ವಿದ್ಯುತ್‌ ಬಳಕೆ ಸಂಪೂರ್ಣ ವಾಗಿ ಬದಲಾದರೂ ಆಶ್ಚರ್ಯ ಇಲ್ಲ. ಏಕೆಂದರೆ, ತೆಳು ಹಾಳೆಯಂತಿರುವ ಸೋಲಾರ್‌ ವಾಲ್‌ಪೇಪರ್‌ಗಳನ್ನು ವಿಜಾnನಿಗಳು ವಿನ್ಯಾಸಗೊಳಿಸಿದ್ದಾರೆ. ಇದನ್ನು ಮನೆಯ ಗೋಡೆಯ ಮೇಲೆ ಅಥವಾ ಕಿಡಕಿಗೆ ಅಳವಡಿಸಿದರೆ ಮನೆಗೆ ಬೇಕಾದವಿದ್ಯುತ್‌ ಅನ್ನು ಪಡೆಯಬಹುದು.

ಇಂಗ್ಲೆಂಡ್‌ನ‌ ಸರ್ರೆ ವಿಶ್ವವಿದ್ಯಾಲಯದ ಸಂಶೋಧಕರು ಗ್ರ್ಯಾಫೀನ್‌ (ಕಾರ್ಬನ್‌ನಿಂದ ಮಾಡಿದ ತೆಳುವಾದ ಹಾಳೆ) ಯನ್ನು ಬಳಸಿಕೊಂಡು ಬೆಳಕನ್ನು ಹೀರಿಕೊಳ್ಳಬಲ್ಲ ಸೋಲಾರ್‌ ವಾಲ್‌ಪೇಪರ್‌ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ತಂತ್ರಜಾnನ ಚಿಟ್ಟೆಗಳ ಕಣ್ಣುಗಳ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಚಿಟ್ಟೆಗಳ ಕಣ್ಣು ಕತ್ತಲಿನಲ್ಲಿ ನೋಡುವ ಸಲುವಾಗಿ ಹಗಲಿನ ವೇಳೆ ಹೆಚ್ಚು ಬೆಳಕನ್ನು ಹೀರಿಕೊಳ್ಳು ತ್ತವೆ. ಪೇಪರ್‌ನಂತಿರುವ ಸೌರ ಫ‌ಲಕಗಳನ್ನು ಕೂಡ ಇದೇ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಮನೆಯಲ್ಲಿ ವ್ಯರ್ಥವಾಗುವ ಬೆಳಕು ಮತ್ತು ಉಷ್ಣತೆ ಹೀರಿಕೊಂಡು ವಿದ್ಯುತ್‌ ಉತ್ಪಾದನೆಯಾಗುತ್ತದೆ. ವಿದ್ಯುತ್‌ ವಾಹಕತೆಗೆ ಕಾಬನ್‌ ಹಾಳೆಗಳು ಈಗಾಗಲೇ ಪ್ರಸಿದ್ಧವಾಗಿವೆ. ಚಿಟ್ಟೆಗಳು ಬೆಳಕುಗಳನ್ನು ಕಣ್ಣಿನ ಕೇಂದ್ರದಲ್ಲಿ ಹಿಡಿದಿಟ್ಟುಕೊಳ್ಳುವ ಮೂಲಕ ಬೆಳಕಿನ ಪ್ರತಿಫ‌ಲನವನ್ನು ತಡೆಗಟ್ಟುವಂತೆ, ಕಾರ್ಬನ್‌ ಹಾಳೆಯ ಸೂಕ್ಷ್ಮ ಮಾದರಿಗಳು ಹೀರಿಕೊಂಡ ಬೆಳಕನ್ನು ಕೇಂದ್ರಕ್ಕೆ ಸ್ಥಾನಕ್ಕೆ ತರುತ್ತದೆ. ಈ ವಿಧಾನವನ್ನು ಬಳಸಿಕೊಂಡು ಕಾರ್ಬನ್‌ ಹಾಳೆಯಿಂದ ಸೋಲಾರ್‌ ವಾಲ್‌ಪೇಪರ್‌ಗಳು ಶೇ. 95ರಷ್ಟು ಬೆಳಕಿನ ಕಿರಣಗಳನ್ನು ಹಿಡಿದಿಟ್ಟುಕೊಳ್ಳುತ್ತವೆ. ಈ ಹಾಳೆಗಳು ಮಂದ ಬೆಳಕಿನಲ್ಲಿಯೂ ವಿದ್ಯುತ್‌ ಅನ್ನು ಉತ್ಪಾದಿಸಬಲ್ಲವು. ಸೋಲಾರ್‌ ವಾಲ್‌ಪೇಪರ್‌ ಮನೆಯ ಒಳಗಿನ ಗೋಡೆ ಗಳಿಗೆ ಅಂಟಿಸಿದರೆ, ವಿದ್ಯುತ್‌ ಲಭ್ಯವಾಗಲಿದೆ. ಭವಿಷ್ಯದ ದಿನ ಗಳಲ್ಲಿ ಈ ತಂತ್ರಜಾnನ ಸೋಲಾರ್‌ನ ಬಳಕೆಯ ವಿಧಾನ ವನ್ನೇ ಬದಲಿಸಲಿದೆ ಎಂದು ವಿಜಾnನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
-ಉದಯವಾಣಿ

Write A Comment