ಕರ್ನಾಟಕ

ಯುವಕನ ಬರ್ಬರ ಕೊಲೆ

Pinterest LinkedIn Tumblr

killಬೆಂಗಳೂರು,ಏ.೯-ಕೆನ್ನೆಗೆ ಹೊಡೆದ ವಿಚಾರದಲ್ಲಿ ಉಂಟಾದ ಜಗಳ ಯುವಕನೋರ್ವನ ಬರ್ಬರ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಸುಬ್ರಮಣ್ಯಪುರದ ಚುಂಚಘಟ್ಟರಸ್ತೆಯಲ್ಲಿ ಇಂದು ನಸುಕಿನಲ್ಲಿ ನಡೆದಿದೆ.
ಬೀರೇಶ್ವರನಗರದ ಗಣಪತಿಪುರದ ಕಾರ್ಪೆಂಟರ್ (ಬಡಗಿ) ಮಾದೇಶ್(೨೫)ಕೊಲೆಯಾದವರು,ಕೃತ್ಯವೆಸಗಿದ ಬೀರೇಶ್ವರನಗರದ ಪುನೀತ್,ಶಿವಕುಮಾರ್,ಭರತ್‌ಕುಮಾರ್ ಹಾಗೂ ಸಚಿನ್‌ನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಮಾದೇಶ ನಿನ್ನೆ ರಾತ್ರಿ ಗಣಪತಿಪುರಕ್ಕೆ ೧೦ರ ವೇಳೆ ಮಾತನಾಡಲು ಬಂದಿದ್ದ ಪುನೀತ್‌ಗೆ ಕ್ಷುಲಕ ವಿಷಯಕ್ಕೆ ಜಗಳ ಮಾಡಿ ಕೆನ್ನೆಗೆ ಹೊಡೆದಿದ್ದಾನೆ,ಕೋಪಗೊಂಡ ಪುನೀತ್ ಸ್ನೇಹಿತನಾದ ಶಿವಕುಮಾರ್‌ನನ್ನು ಕರೆದುಕೊಂಡು ಕೆನ್ನೆಗೆ ಹೊಡೆದಿದ್ದನ್ನು ಕೇಳಲು ಹೋಗಿದ್ದಕ್ಕೆ ಶಿವಕುಮಾರ್ ಮೇಲೆ ಮಾದೇಶ್ ಹಲ್ಲೆ ನಡೆಸಿದ್ದಾನೆ.
ಆಕ್ರೋಶಗೊಂಡ ಇಬ್ಬರು ಮತ್ತಿಬ್ಬರು ಆರೋಪಿಗಳಾದ ಭರತ್‌ಕುಮಾರ್ ಹಾಗೂ ಸಚಿನ್‌ನನ್ನು ಕರೆದುಕೊಂಡು ಕಾರಿನಲ್ಲಿ ಬಂದು ಮಾದೇಶನನ್ನು ಹತ್ತಿಸಿಕೊಂಡು ಸ್ವಲ್ಪ ದೂರ ಹೋದ ನಂತರ ಬೆದರಿಸಿ ಚಾಕುವಿನಿಂದ ಕತ್ತಿನ ಭಾಗಕ್ಕೆ ಚುಚ್ಚಿದ್ದಾರೆ.
ಚಾಕು ಕತ್ತಿನ ಆಳಕ್ಕೆ ಇಳಿದಿದ್ದರಿಂದ ಆಸ್ವಸ್ಥಗೊಂಡ ಆತ ಕೆಲ ಹೊತ್ತಿನಲ್ಲಿ ಮೃತಪಟ್ಟಿದ್ದಾನೆ ಹೆದರಿದ ನಾಲ್ವರು ಆರೋಪಿಗಳು ಚುಂಚಕಟ್ಟೆ ರಸ್ತೆ ಈಶ್ವರಿ ಬಸ್‌ನಿಲ್ದಾಣದ ಬಳಿ ಮೃತದೇಹವನ್ನು ಮಲಗಿಸಿ ಪರಾರಿಯಾಗಿದ್ದಾರೆ.
ನಂತರ ಆರೋಪಿಗಳು ಮುಂಜಾನೆ ೫ರ ವೇಳೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಡಿಸಿಪಿ ಲೋಕೇಶ್‌ಕುಮಾರ್ ತಿಳಿಸಿದ್ದಾರೆ.

Write A Comment