ಕರ್ನಾಟಕ

ಬರ ಪರಿಹಾರ: ಕೇಂದ್ರದ 1540.20 ಕೋ. ರೂ. ಪೂರ್ತಿ ಬಳಕೆ

Pinterest LinkedIn Tumblr

moneyಬೆಂಗಳೂರು: ಬರ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ‌ ಬಿಡುಗಡೆ ಮಾಡಿದ್ದ ಬೆಳೆನಷ್ಟ ಪರಿಹಾರ ಹಣದ ಪೈಕಿ ಉಳಿಕೆಯಾಗಿದ್ದ 327.20 ಕೋಟಿ ರೂ. ಹಣವನ್ನು ರಾಜ್ಯದ 31 ಲಕ್ಷ ರೈತರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ.

ಕೇಂದ್ರ ಸರಕಾರದಿಂದ ಬಿಡುಗಡೆಯಾಗಿದ್ದ 1540.20 ಕೋಟಿ ರೂ. ಹಣದ ಪೈಕಿ 1,213 ಕೋಟಿ ರೂ. ಮಾರ್ಚ್‌ 17ರವರೆಗೆ ವಿತರಣೆ ಯಾಗಿ ಉಳಿದಿದ್ದ 327.20 ಕೋಟಿ ರೂ.ಗಳನ್ನು 31 ಲಕ್ಷ ರೈತರ ಖಾತೆಗೆ ಜಮೆ ಮಾಡಲಾಗಿದೆ.
ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದ ಹಣ ಮಾರ್ಚ್‌ ಅಂತ್ಯದೊಳಗೆ ವಿತರಣೆಯಾಗದೆ ಉಳಿದರೆ ವಾಪಸ್‌ ಕಳುಹಿಸಿಕೊಡಬೇಕಿತ್ತು. ಹೀಗಾಗಿ, ಬೆಳೆನಷ್ಟ ಅನುಭವಿಸಿದ 31 ಲಕ್ಷ ರೈತರಿಗೆ ಅವರ ಪರಿಹಾರ ಮೊತ್ತಕ್ಕೆ ಶೇ.10 ರಿಂದ 20 ರವರೆಗೆ ಸೇರಿಸಿ ಕೊಡಲಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದ ಹಣ ಪೂರ್ತಿಯಾಗಿ ರೈತರಿಗೆ ವಿತರಣೆಯಾಗಿ ರುವುದರಿಂದ ಹಿಂಗಾರು ವೈಫ‌ಲ್ಯದಿಂದ ಉಂಟಾಗಿದ್ದ ನಷ್ಟದ ಬಾಬ್ತು 1,416.14 ಕೋಟಿ ರೂ. ಬಿಡುಗಡೆ ಮಾಡುವಂತೆ ಮತ್ತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ ವರ್ಷ ಮುಂಗಾರು ವೈಫ‌ಲ್ಯದಿಂದ 15,635.57 ಕೋಟಿ ರೂ. ನಷ್ಟದ ಅಂದಾಜು ಮಾಡಿ ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರವೇ 3,830.84 ಕೋಟಿ ರೂ. ಪರಿಹಾರ ಕೊಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರ ಸರಕಾರ 1,540.20 ಕೋಟಿ ರೂ. ಬಿಡುಗಡೆ ಮಾಡಿತ್ತು.

ಹಿಂಗಾರು ವೈಫ‌ಲ್ಯದಿಂದಲೂ 6,733.14 ಕೋಟಿ ರೂ. ಮೌಲ್ಯದ ಬೆಳೆನಷ್ಟ ಉಂಟಾಗಿದ್ದು ಕೇಂದ್ರ ಸರಕಾರದ ಮಾರ್ಗಸೂಚಿ ಪ್ರಕಾರ 1,416.14 ಕೋಟಿ ರೂ. ಪರಿಹಾರ ನೀಡುವಂತೆ ಮಾರ್ಚ್‌ 14 ರಂದು ಕೇಂದ್ರ ಸರಕಾರಕ್ಕೆ ಮತ್ತೂಂದು ಮನವಿ ಸಲ್ಲಿಸಲಾಗಿತ್ತು.

ಮೊದಲು ಬಿಡುಗಡೆ ಮಾಡಿದ್ದ 1,540.20 ಕೋ. ರೂ. ಪೂರ್ಣ ಪ್ರಮಾಣ ದಲ್ಲಿ ಬಳಕೆಯಾಗಿದೆಯೇ? ಆಗಿದ್ದರೆ ಬಳಕೆ ಪ್ರಮಾಣಪತ್ರ ಸಲ್ಲಿಸಿ ಎಂದು ಕೇಂದ್ರ ಸೂಚಿಸಿತ್ತು.

ರಾಜ್ಯದಲ್ಲಿ 35 ಲಕ್ಷ ರೈತರು ಬೆಳೆನಷ್ಟ ಅನು ಭವಿಸಿರುವ ಅಂದಾಜು ಮಾಡಲಾಗಿ ತ್ತಾ ದರೂ ತಾಂತ್ರಿಕ ಕಾರಣಗಳಿಂದ ಸಮರ್ಪಕ ದಾಖಲೆ ಒದಗಿಸುವುದು ಕಷ್ಟವಾಗಿ 31 ಲಕ್ಷ ರೈತರು ಮಾತ್ರ ಬೆಳೆನಷ್ಟ ಪರಿಹಾರ ಪಡೆದಿದ್ದರು. ಹೀಗಾಗಿ, ಉಳಿಕೆಯಾಗಿದ್ದ 327.20 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಅದೇ ರೈತರಿಗೆ ನೀಡಲಾಗಿದೆ.

25 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆನಷ್ಟ
-ಕಳೆದ ವರ್ಷ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ 25 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಕೈಗೆಟುಕದೆ ರೈತರು ಅನುಭವಿಸಿರುವ ನಷ್ಟ 15 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಎಂದು ಅಂದಾಜು ಮಾಡಲಾಗಿದ್ದು ಇದೇ ಕಾರಣಕ್ಕೆ ಆಹಾರ ಉತ್ಪಾದನೆ 126 ಲಕ್ಷ ಟನ್‌ಗಳಿಂದ 110 ಲಕ್ಷ ಟನ್‌ಗಳಿಗೆ ಇಳಿದಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
-ಉದಯವಾಣಿ

Write A Comment