ರಾಷ್ಟ್ರೀಯ

ನವದೆಹಲಿಯ ಸಂಸತ್ ಭವನದಲ್ಲಿ ಅಗ್ನಿ ಆಕಸ್ಮಿಕ

Pinterest LinkedIn Tumblr

parನವದೆಹಲಿ,ಏ.10- ಕೇರಳದಲ್ಲಿ ನಡೆದ ಅಗ್ನಿದುರಂತದ ಗುಂಗಿನಲ್ಲಿ ದೇಶದ ಜನ ಇರುವಾಗಲೇ ನವದೆಹಲಿಯ ಸಂಸತ್ ಭವನದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಸಂಸತ್ ಭವನದ 2ನೇ ಮಹಡಿಯಲ್ಲಿರುವ 212ನೇ ಕೊಠಡಿಯಲ್ಲಿ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದ್ದು , ಅದನ್ನು ನಂದಿಸಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಕೊಠಡಿಯಲ್ಲಿ ಮಹತ್ವದ ದಾಖಲೆಗಳ ಸಂಗ್ರಹ ಇರುವುದರಿಂದ ಈ ಘಟನೆ ತೀವ್ರ ಆತಂಕವುಂಟು ಮಾಡಿದೆ.

ಇಂದು ಮಧ್ಯಾಹ್ನ ಇದಕ್ಕಿದ್ದಂತೆ 212ನೇ ಕೊಠಡಿಯಲ್ಲಿ ಈ ಬೆಂಕಿ ಹೊಗೆ ಕಾಣಿಸಿಕೊಂಡಿದ್ದು, ಇದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

Write A Comment