ಮನೋರಂಜನೆ

ಟಿ.ಎಸ್. ನಾಗಾಭರಣ ಅವರ ಮುಂದಿನ ಸಿನಿಮಾ ‘ಅಲ್ಲಮ’ ತೆರೆಗೆ ಬರಲು ತಯಾರಿ

Pinterest LinkedIn Tumblr

nagಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರ ಲ್ಲೊಬ್ಬರಾದ ಟಿ.ಎಸ್. ನಾಗಾಭರಣ ಅವರ ಮುಂದಿನ ಸಿನಿಮಾ ಅಲ್ಲಮ ತೆರೆಗೆ ಬರಲು ತಯಾರಾಗುತ್ತಿದೆ. ಈ ಚಿತ್ರದಲ್ಲಿ ಧನಂಜಯ್, ಮೇಘನಾರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ನಾಗಾಭರಣ ಅಂಡ್ ಟೀಂ ಅಲ್ಲಮ ಚಿತ್ರದ ಹಾಡುಗಳ ಧ್ವನಿಸುರುಳಿಗಳನ್ನು ಕಳೆದವಾರ ಬಿಡುಗಡೆ ಮಾಡಿದೆ. ಖ್ಯಾತ ಹಿಂದುಸ್ತಾನಿ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾ ಅವರ ಶಿಷ್ಯ ಕೊಳಲು ಬಾಪು ಎಂದೆ ಪ್ರಸಿದ್ದರಾಗಿರುವ ಬಾಪು ಪದ್ಮನಾಭ ಅವರು ಅಲ್ಲಮ ಚಿತ್ರದ ವಚನಗಳಿಗೆ ಸಂಗೀತದ ಸುಧೆಯನ್ನು ಹರಿಸಿzರೆ.

ಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಶ್ರಮವಹಿಸಿರುವ ನಿರ್ದೇಶಕ ನಾಗಾಭರಣ ಮತ್ತು ಬಾಪು ಪದ್ಮನಾಭ ಅವರು ಈ ಚಿತ್ರಕ್ಕೆ ವಿಶೇಷ ಸಂಗೀತವನ್ನು ನೀಡಲು ಹಗಲಿರುಳು ಶ್ರಮಿಸಿದ್ದಾರೆ. ಅಂತಿಮವಾಗಿ ಇಬ್ಬರ ಅಭಿರುಚಿಗೆ ಅನುಗುಣವಾಗಿ ೮ ಹಾಡುಗಳು ಮತ್ತು ೧೮ ವಚನಗಳನ್ನು ಹೊಂದಿರುವ ಅಲ್ಲಮ ಚಿತ್ರದ ಸಂಗೀತ ರೆಡಿಯಾಗಿದೆ. ಈ ಚಿತ್ರದ ಮೂಲಕ ಶಾಸ್ತ್ರೀಯ ಸಂಗೀತದ ಹಿನ್ನೆಲೆ ಹೊಂದಿರುವ ಬಾಪು ಪದ್ಮನಾಭ ಅವರನ್ನು ನಾಗಾಭರಣ ಸ್ಯಾಂಡಲ್‌ವುಡ್ ಅಂಗಳಕ್ಕೆ ಕರೆತಂದಿದ್ದಾರೆ.

ಅಲ್ಲಮ ಚಿತ್ರದ ಹಾಡುಗಳಿಗೆ ಶಂಕರ್ ಮಹದೇವನ್, ರಾಜೇಶ್ ಕೃಷ್ಣನ್, ಹೇಮಂತ್, ಗಣೇಶ್ ದೇಸಾಯಿ, ಸಂಗೀತಾ ಕಟ್ಟಿ, ಮಂಜುಳಾ ಗುರುರಾಜ್, ತೇಜಸ್ವಿನಿ ಎಂ.ಕೆ, ಬಾಪು ಪದ್ಮನಾಭ ಸೇರಿದಂತೆ ಹಲವು ಗಾಯಕರು ಹಾಡಿzರೆ. ಈ ಮೂಲಕ ಅಲ್ಲಮನ ಹಲವು ವಚನಗಳು ಬೆಳ್ಳಿತೆರೆಗೆ ಬರಲಿವೆ. ಚಿತ್ರತಂಡಕ್ಕೆ ಶುಭಕೋರಲು ಹಲವಾರು ಗಣ್ಯರು ಆಗಮಿಸಿದ್ದು ವಿಶೇಷ.

Write A Comment