ಮನೋರಂಜನೆ

ಪಾಕ್: ಟಿ-20 ನಾಯಕತ್ವ ತೊರೆದ ಅಫ್ರಿದಿ

Pinterest LinkedIn Tumblr

Afridi-@ಕರಾಚಿ (ಪಿಟಿಐ): ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ನೀಡಿದ ಕಳಪೆ ಪ್ರದರ್ಶನಕ್ಕೆ ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಹೀದ್ ಅಫ್ರಿದಿ ಅವರು ಪಾಕಿಸ್ತಾನ ಚುಟುಕು ಕ್ರಿಕೆಟ್ ತಂಡದ ನಾಯಕತ್ವವನ್ನು ಭಾನುವಾರ ತೊರೆದಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿ ಅಫ್ರಿದಿ ನೇತೃತ್ವದ ಪಾಕ್ ತಂಡವು ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಭಾರತದ ಅಭಿಮಾನಿಗಳ ಪ್ರೀತಿಯನ್ನು ಹೊಗಳಿದ್ದಕ್ಕೂ ಮಾಜಿ ಕ್ರಿಕೆಟಿಗರಿಂದ ಟೀಕೆ ಎದುರಿಸಿದ್ದರು. ಈ ಬೆನ್ನಲ್ಲೆ, ನಾಯಕತ್ವ ತೊರೆಯುವ ಕುರಿತು ಸ್ವತಃ ಅಫ್ರಿದಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ(ಪಿಸಿಬಿ) ಸುಳಿವು ಸಿಕ್ಕಿತ್ತು.
‘ಪಾಕಿಸ್ತಾನದ ಟಿ–20 ತಂಡದ ನಾಯಕತ್ವವನ್ನು ಭಾನುವಾರ ಸ್ವಇಚ್ಛೆಯಿಂದ ತೊರೆಯುತ್ತಿರುವುದಾಗಿ ಪಾಕಿಸ್ತಾನ ಹಾಗೂ ವಿಶ್ವದೆಲ್ಲಡೆ ಇರುವ ಅಭಿಮಾನಿಗಳಿಗೆ ನಾನು ತಿಳಿಸ ಬಯಸುತ್ತೇನೆ’ ಎಂದು ಅಫ್ರಿದಿ ಅವರು ಟ್ವೀಟ್ ಮಾಡಿದ್ದಾರೆ.
ಆದರೆ, ತಂಡದಲ್ಲಿ ಆಟಗಾರನಾಗಿ ಮುಂದುವರೆಯುವುದಾಗಿ ಅಫ್ರಿದಿ ಸ್ಪಷ್ಟಪಡಿಸಿದ್ದಾರೆ.
2010ರಲ್ಲಿ ಟೆಸ್ಟ್‌ಗೆ ನಿವೃತ್ತಿ ಘೋಷಿಸುವ ಮುನ್ನ ಆಲ್‌ರೌಂಡರ್ ಆಟಗಾರ ಅಫ್ರಿದಿ, 27 ಟೆಸ್ಟ್‌ ಪಂದ್ಯಗಳನ್ನಾಡಿದ್ದರು. ಒಟ್ಟು 1716 ರನ್‌ ಹಾಗೂ 27 ವಿಕೆಟ್‌ ಪಡೆದಿದ್ದರು.
ಈವರೆಗೂ 389 ಏಕದಿನ ಪಂದ್ಯಗಳಿಂದ 8064 ರನ್‌ಗಳಿಸಿರುವ ಅವರು, 395 ವಿಕೆಟ್ ಉರುಳಿಸಿದ್ದಾರೆ.
ಒಟ್ಟು 98 ಟಿ–20 ಪಂದ್ಯಗಳಲ್ಲಿ 1405 ರನ್‌ ಹಾಗೂ 97 ವಿಕೆಟ್ ಸಾಧನೆ ಮಾಡಿದ್ದಾರೆ.

Write A Comment