ಮನೋರಂಜನೆ

ವಿಶ್ವ ಟಿ-20 ಮಹಿಳಾ ಟೂರ್ನಿ: ವಿಂಡೀಸ್ ಚಾಂಪಿಯನ್

Pinterest LinkedIn Tumblr

Hayley-Matthewsಕೋಲ್ಕತ್ತಾ (ಪಿಟಿಐ): ಕೊನೆಯ ವರೆಗೂ ಕುತೂಹಲ ಉಳಿಸಿಕೊಂಡ ವಿಶ್ವ ಟಿ-20 ಮಹಿಳಾ ಟೂರ್ನಿಯ ಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್ ವನಿತೆಯರ ತಂಡವು ಚೊಚ್ಚಲ ಗೆಲುವು ಪಡೆದು ಚಾಂಪಿಯನ್‌ ಎನಿಸಿತು.
ಇಲ್ಲಿನ ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ವಿಂಡೀಸ್ ಎಂಟು ವಿಕೆಟ್‌ಗಳಿಂದ ಮಣಿಸಿತು.
ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 148 ರನ್‌ ಕಲೆ ಹಾಕಿತು.149 ರನ್‌ಗಳ ಗುರಿಯನ್ನು ವಿಂಡೀಸ್ ಎರಡು ವಿಕೆಟ್ ಕಳೆದುಕೊಂಡು ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ ಮುಟ್ಟಿತು
ಈ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯಿತು.
ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 148 ರನ್‌
ವೆಸ್ಟ್‌ ಇಂಡೀಸ್: 19.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 149 ರನ್‌
ಫಲಿತಾಂಶ: ವಿಂಡೀಸ್‌ಗೆ 8 ವಿಕೆಟ್ ಜಯ

Write A Comment