ಕರ್ನಾಟಕ

ಬುಕ್ ಮಾಡಿದ್ದು ಮೊಬೈಲ್, ಬಂದಿದ್ದು ಉಪ್ಪಿನ ಪ್ಯಾಕೆಟ್!

Pinterest LinkedIn Tumblr

moಬೀರೂರು: ನಾಲ್ಕು ದಿನಗಳ ಹಿಂದೆ ಆನ್​ಲೈನ್ ಮೂಲಕ ಮೊಬೈಲ್ ಫೋನ್ ಬುಕ್ ಮಾಡಿದ್ದ ಗ್ರಾಹಕನಿಗೆ ಶನಿವಾರ ಕೊರಿಯರ್ ಮೂಲಕ ಬಂದಿದ್ದು ಮಾತ್ರ ಒಂದು ಪ್ಯಾಕೆಟ್ ಉಪ್ಪು!
ಪಟ್ಟಣದ ಇಂದಿರಾನಗರ ನಿವಾಸಿ ಗುಣಶೇಖರ್ ಎಂಬುವರು ಪ್ರತಿಷ್ಠಿತ ಆನ್​ಲೈನ್ ಕಂಪನಿ ಮೂಲಕ 8,500 ರೂ. ಮುಂಗಡ ಪಾವತಿಸಿ ಮೊಬೈಲ್ ಬುಕ್ ಮಾಡಿದ್ದರು. ಶನಿವಾರ ಕೊರಿಯರ್ ಮೂಲಕ ಬಂದ ಪಾರ್ಸೆಲ್ ಅನ್ನು ಗುಣಶೇಖರ್ ಸ್ನೇಹಿತ ತೆಗೆದು ನೋಡಿದಾಗ ಅದರಲ್ಲಿ ಉಪ್ಪಿನ ಪ್ಯಾಕೆಟ್ ಇದ್ದಿದ್ದನ್ನು ಕಂಡು ಹೌಹಾರಿದ್ದಾರೆ. ಕೂಡಲೇ ಪಾರ್ಸೆಲ್ ತಂದ ಕೊರಿಯರ್ ವಿತರಕನನ್ನು ವಿಚಾರಿಸಲಾಗಿದ್ದು ಈ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾನೆ.

ಬಳಿಕ ಕೊರಿಯರ್ ಕಚೇರಿಗೆ ದೂರವಾಣಿ ಕರೆ ಮಾಡಿ ಮೋಸದ ಬಗ್ಗೆ ತಿಳಿಸಿ ಕೂಡಲೆ ಹಣ ಹಿಂದಿರುಗಿಸದಿದ್ದರೆ ಪೊಲೀಸರಿಗೆ ದೂರು ನೀಡುವೆ ಎಂದು ಎಚ್ಚರಿಸಿದ್ದಾರೆ. ನಂತರ ಅವರು ಹಣವನ್ನು ಹಿಂದಿರುಗಿಸಿದ್ದಾರೆ. ಹೀಗಾಗಿ ಯಾವುದೇ ದೂರು ದಾಖಲಾಗಿಲ್ಲ.

Write A Comment