ಮನೋರಂಜನೆ

ಅಕಿರಾ ತಂಡದ ಹೊಸ ಐಡಿಯಾ ಕಡಿಮೆ ಬೆಲೆ, ವೆರೈಟಿ ಹಾಡು

Pinterest LinkedIn Tumblr

akira-1ಆಡಿಯೋ ಬಿಡುಗಡೆ ಎಂಬುದು ಈಗ ಒಂದು ಶಾಸ್ತ್ರವಾಗಿಯಷ್ಟೇ ಉಳಿದಿದೆ. ಏಕೆಂದರೆ ಆಡಿಯೋಗೆ ಮಾರುಕಟ್ಟೆ ಇಲ್ಲ. ಅದರಲ್ಲೂ ಸಿಡಿಗಳ ಮಾರಾಟವಂತೂ ತೀರಾ ಕಡಿಮೆ. ಏನಿದ್ದರೂ ಡೌನ್‌ ಲೋಡ್‌. ಈ ಕಾರಣದಿಂದಾಗಿಯೇ ಆಡಿಯೋ ಬಿಡುಗಡೆ ಒಂದು ಸಿನಿಮಾ ಕಾರ್ಯಕ್ರಮದ ಭಾಗವಾಗಿಯಷ್ಟೇ ಉಳಿದಿದೆ. ಆದರೆ, “ಅಕಿರಾ’ ಚಿತ್ರತಂಡ ಮಾತ್ರ ಆಡಿಯೋ ಎಲ್ಲರಿಗೂ ತಲುಪಬೇಕು ಎಂಬ ಕಾರಣಕ್ಕೆ ಹೊಸ ಉಪಾಯ ಹುಡುಕಿದೆ. ಅದು ಕಡಿಮೆ ಬೆಲೆಗೆ ಆಡಿಯೋ ಸಿಡಿ ಮಾರಾಟ. ಹೌದು, ಸಾಮಾನ್ಯವಾಗಿ ಸಿನಿಮಾ ಆಡಿಯೋ ಸಿಡಿಗಳ ಬೆಲೆ 30-35 ರೂಪಾಯಿ ಇರುತ್ತದೆ.
ಆದರೆ “ಅಕಿರಾ’ ಚಿತ್ರತಂಡ ಮಾತ್ರ ಕೇವಲ 9 ರೂಪಾಯಿಗೆ ಚಿತ್ರದ ಆಡಿಯೋ ಸಿಡಿ ಬಿಟ್ಟಿದೆ.

ಅಷ್ಟಕ್ಕೂ ಈ 9 ರೂಪಾಯಿ ಪ್ಲ್ರಾನ್‌ ಯಾಕೆ ಎಂದರೆ ಹಾಡುಗಳನ್ನು ಜನರಿಗೆ ತಲುಪಿಸಲು ಎಂಬ ಉತ್ತರ ಚಿತ್ರತಂಡದಿಂದ ಬರುತ್ತದೆ. ಚಿತ್ರರಂಗದಲ್ಲಿ ಆಡಿಯೋಗೆ ಮಾರುಕಟ್ಟೆ ಇಲ್ಲ, ಅದರಲ್ಲೂ μಸಿಕಲ್‌
ಸೇಲ್‌ ಇಲ್ಲವೇ ಇಲ್ಲ ಎಂದು ಹೇಳುವವರೇ ಹೆಚ್ಚು. ಈ ಕಾರಣದಿಂದಾಗಿ ಕಡಿಮೆ ಬೆಲೆ ನಿಗದಿ ಮಾಡಿ ಆಡಿಯೋ μಸಿಕಲ್‌ ಸೇಲ್‌ ಮಾಡುವ ಉದ್ದೇಶ “ಅಕಿರಾ’ ತಂಡದ್ದು. ಒಂಭತ್ತು ರೂಪಾಯಿಯಾದರೆ
ಕಡಿಮೆ ಬೆಲೆ ಎಂಬ ಕಾರಣಕ್ಕಾಗಿ ಜನ ಸಿಡಿ ಕೊಂಡುಕೊಳ್ಳುತ್ತಾರೆ. ಈ ಮೂಲಕ ಸಿಡಿ ಮಾರಾಟವಾಗುವ ಜೊತೆಗೆ ಚಿತ್ರದ ಹಾಡುಗಳು ಕೂಡಾ ಜನರಿಗೆ ತಲುಪುತ್ತದೆಂಬ ಆಲೋಚನೆಯೊಂದಿಗೆ ಕಡಿಮೆ ಬೆಲೆಗೆ ಸಿಡಿ ಬಿಡಲಾಗಿದೆ. ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ಕೂಡಾ
ವ್ಯಕ್ತವಾಗುತ್ತಿದೆಯಂತೆ. “ಚಿತ್ರಕ್ಕೆ ಹಾಡು ಆಹ್ವಾನ ಪತ್ರಿಕೆ ಇದ್ದಂತೆ. ನಮ್ಮ ಚಿತ್ರದ ಹಾಡುಗಳು ಒಂದಕ್ಕೊಂದು ಭಿನ್ನವಾಗಿವೆ. ಅಂತಹ ಹಾಡುಗಳು ಜನರಿಗೆ ತಲುಪಿದಾಗ ಮಾತ್ರ ಸಿನಿಮಾ ಬಗ್ಗೆ ಆಸಕ್ತಿ ಮೂಡುತ್ತದೆ. ಆ ಕಾರಣಕ್ಕಾಗಿ ಆಡಿಯೋ ಕಂಪೆನಿ ಜೊತೆಗೆ ಮಾತನಾಡಿ ಈ ನಿರ್ಧಾರಕ್ಕೆ ಬಂದೆವು.
ಎಲ್ಲಾ ಕಡೆಗಳಿಂದಲೂ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂಬುದು ನಿರ್ಮಾಪಕರಲ್ಲೊಬ್ಬರಾದ ಚೇತನ್‌ ಮಾತು. ಅಂದಹಾಗೆ, ನವೀನ್‌ ರೆಡ್ಡಿ ಈ ಚಿತ್ರದ ನಿರ್ದೇಶಕರು.
-ಉದಯವಾಣಿ

Write A Comment