ಮನೋರಂಜನೆ

ಜೂಮ್‌ ಚಿತ್ರದಲ್ಲಿ ರಾಧಿಕಾ ಪಂಡಿತ್‌ಗೆ ವಿಚಿತ್ರಹಿಂಸೆ

Pinterest LinkedIn Tumblr

radhikaರಾಧಿಕಾ ಪಂಡಿತ್‌ಗೆ ಟಾರ್ಚರ್‌ ಆಗಿದ್ದುಂಟಾ? ಇಂಥದ್ದೊಂದು ಪ್ರಶ್ನೆ “ಜೂಮ್‌’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಬಂದಿದ್ದುಂಟು. ಆದರೆ, ಅವರಿಗೆ ಟಾರ್ಚರ್‌ ಕೊಟ್ಟಿದ್ದು ಯಾರು, ಯಾವ ಕಾರಣಕ್ಕೆ ಎಂಬ ಮತ್ತೂಂದು ಪ್ರಶ್ನೆ ಅಲ್ಲಿ ಗಿರಕಿ ಹೊಡೆದದ್ದೂ ಉಂಟು. ಕೊನೆಗೆ ಎಂದಿನ ತಮ್ಮ ಶೈಲಿಯಲ್ಲಿ ನಗು ಬೀರಿದ ರಾಧಿಕಾ ಪಂಡಿತ್‌, ಮೈಕ್‌ ಹಿಡಿದು ಅವರಿಗೆ ಆದಂತಹ “ಟಾರ್ಚರ್‌’
ಬಗ್ಗೆ ವಿವರ ಕೊಡೋಕೆ ನಿಂತರು. ಅಂದಹಾಗೆ, ಅವರು ಟಾರ್ಚರ್‌ ಅನುಭವಿಸಿದ್ದು ನಿಜನಾ?
ಅದಕ್ಕವರು ಖಂಡಿತವಾಗಿಯೂ ಇಲ್ಲ ಅಂತಾರೆ.

ಅಷ್ಟಕ್ಕೂ “ಜೂಮ್‌’ ಶೂಟಿಂಗ್‌ನಲ್ಲಿ ಆಗಿದ್ದೇನು ಗೊತ್ತಾ? ರಾಧಿಕಾ ಪಂಡಿತ್‌, “ಜೂಮ್‌’ ಅನುಭವ
ಕುರಿತು ಹರಟುತ್ತಾ ಹೋದರು. ಚಿತ್ರದಲ್ಲಿ ರಾಧಿಕಾ ಪಂಡಿತ್‌ ಅವರ ಹೇರ್‌ಸ್ಟೈಲ್‌ ನ್ಯೂ ಲುಕ್‌ನಲ್ಲಿದೆ. ಅದಕ್ಕೆ ಕಾರಣ, ಚಿತ್ರದೊಳಗಿರುವ ಸ್ಟೈಲಿಷ್‌ ಪಾತ್ರವಂತೆ. ಆ ಲುಕ್‌ ಹೀಗೆಯೇ ಇರಬೇಕು ಅಂತ ಹಠಕ್ಕೆ ಬಿದ್ದು ಮಾಡಿಸಿದ್ದು, ನಿರ್ದೇಶಕ ಪ್ರಶಾಂತ್‌ ರಾಜ್‌ ಅವರಂತೆ. ಸತತ ಮೂರು ತಿಂಗಳ ಕಾಲ ಹೇರ್‌ಸ್ಟೈಲ್‌ ಒಂದೇ ರೀತಿ ಇರುವಂತೆ ನೋಡಿಕೊಂಡಿದ್ದರಂತೆ ನಿರ್ದೇಶಕರು.

ಅದಕ್ಕಾಗಿಯೇ ತಿಂಗಳುಗಟ್ಟಲೆ ವರ್ಕ್‌ಶಾಪ್‌ ಮಾಡಿಸಿ, ಪ್ರತಿಯೊಂದು ಸೀನ್‌ನಲ್ಲೂ ಹೇರ್‌ ಸ್ಟೈಲ್‌ ಬಗ್ಗೆ ಕಾಳಜಿ ವಹಿಸಿ, ಸ್ವಲ್ಪ ಆಚೀಚೆ ಆದರೂ, ಪುನಃ ಅದನ್ನು ಕಟ್‌ ಮಾಡಿಸಿ, ವಾಷ್‌ ಮಾಡಿಸಿ, ಡ್ರೈ ಆಗೋವರೆಗೂ ಕಾದು, ಲುಕ್‌ ಹೇಗಿದೆ ಅಂತ ನೋಡುತ್ತಿದ್ದರಂತೆ. ಕೊನೆಗೊಂದು ಫೋಟೋ ಶೂಟ್‌
ಮಾಡಿಸಿ, ಮತ್ತೇನಾದರೂ ಅವರಿಗೆ ಹೇರ್‌ಸ್ಟೈಲ್‌ನಲ್ಲಿ ಬದಲಾವಣೆ ಬೇಕಾದರೆ, ಪುನಃ, ಎಲ್ಲವನ್ನೂ ರಿಪೀಟ್‌ ಮಾಡುತ್ತಿದ್ದರಂತೆ. ಒಂದು ಷೆಡ್ನೂಲ್‌ ಬ್ರೇಕ್‌ ಆಗಿ, ಪುನಃ ಶುರುವಾಗುವಾಗಲೂ ನಿರ್ದೇಶಕರು ಆ ನ್ಯೂ ಲುಕ್‌ ಬಗ್ಗೆ ಸಾಕಷ್ಟು ಗಮನಹರಿಸಿ, ಮತ್ತೆ ಹೇರ್‌ಸ್ಟೈಲ್‌ಗೆ ಹೊಸ ರೂಪ ಕೊಡುತ್ತಿದ್ದರಂತೆ. ಈ
ಎಲ್ಲಾ ಕೆಲಸಗಳಿಂದ ರಾಧಿಕಾಪಂಡಿತ್‌ಗೆ ಒಂದಷ್ಟು ಕಿರಿಕಿರಿಯಾಗಿದ್ದರೂ, ಅವರು ಕ್ಯಾಮೆರಾ ಮುಂದೆ
ನಿಂತು ನಟಿಸಿದ ಮೇಲೆ, ನಿರ್ದೇಶಕರು ಯಾಕೆ ತಮ್ಮ ಹೇರ್‌ಸ್ಟೈಲ್‌ ಬಗ್ಗೆ ಅಷ್ಟೊಂದು ಕಾಳಜಿ ವಹಿಸಿದ್ದರು ಅನ್ನೋದು ಗೊತ್ತಾಯ್ತಂತೆ.

ಪ್ರಶಾಂತ್‌ರಾಜ್‌ ಅವರು ಕೇವಲ ರಾಧಿಕಾ ಪಂಡಿತ್‌ ಅವರ ಹೇರ್‌ಸ್ಟೈಲ್‌ ಮಾತ್ರವಲ್ಲ, ಗಣೇಶ್‌ ಅವರ ಹೇರ್‌ಸ್ಟೈಲ್‌ ಬಗ್ಗೆಯೂ ಜಾಸ್ತಿ ತಲೆಕೆಡಿಸಿಕೊಂಡಿದ್ದರಂತೆ.
-ಉದಯವಾಣಿ

Write A Comment