ಅಂತರಾಷ್ಟ್ರೀಯ

ಮೋಸ ಹೋದೀರಿ ಹುಷಾರ್‌… ಸ್ಮಾರ್ಟ್‌ಫೋನ್‌ ಅಲ್ಲ ಇದು ಪಿಸ್ತೂಲ್‌!

Pinterest LinkedIn Tumblr

Taurus-CURVE-semi-automaticನೋಡಲು ಥೇಟ್‌ ಸ್ಮಾರ್ಟ್‌ ಫೋನ್‌. ಕಿಸೆಯಲ್ಲಿ ಸಲೀಸಾಗಿ ಇಡಬಹುದು. ಆದರೆ ಸ್ಮಾರ್ಟ್‌ಫೋನ್‌ ಬಿಚ್ಚಿ ಗುರಿಯಿಟ್ಟರೆ ಮಟಾಷ್‌! ಕಾರಣ ಅದು ಪಿಸ್ತೂಲ್‌! ಇಂತಹ ಒಂದು ಹೊಸ ರೀತಿಯ ಪಿಸ್ತೂಲ್‌ ಇದೀಗ ಆವಿ ಷ್ಕಾರವಾಗಿದೆ. ಸಾಮಾನ್ಯ ಪಿಸ್ತೂಲ್‌ ರೀತಿ ಇದು ಇರದೇ ವಿಶಿಷ್ಟವಾಗಿದೆ. ಇದರಲ್ಲಿರುವ ಪುಟಾಣಿ ಸೇಫ್ಟಿ ಗ್ರಿಪ್‌ ಎಳೆದು ಓಪನ್‌ ಮಾಡಿದರೆ ಸಾಕು ಶೂಟ್‌ ಮಾಡಬಹುದು.

ಅಮೆರಿಕದ ಐಡಿಯಲ್‌ ಕನ್ಸಿಲ್‌ ಹೆಸರಿನ ಕಂಪನಿ ಈ ಗನ್‌ ಆವಿಷ್ಕರಿಸಿದ್ದು ಹಿಂಭಾಗದಲ್ಲಿ ಕ್ಯಾಮರಾ ರೀತಿ ಮತ್ತು ಮೇಲ್ಭಾಗದಲ್ಲಿ ಹೆಡ್‌ಫೋನ್‌ ಜ್ಯಾಕ್‌ ರೀತಿ ಡಿಸೈನ್‌ ಮಾಡಲಾಗಿದೆ. ಅಷ್ಟೇ ಅಲ್ಲದೇ ತುಂಬಾ ಹಗುರವಾಗಿರುವ ಈ ಪಿಸ್ತೂಲ್‌ ಬಳಸುವುದೂ ಅಷ್ಟೇ ಸುಲಭ. ಪುಟಾಣಿ ಟ್ರಿಗರ್‌ ಇದ್ದು ಗುರಿ ಇಟ್ಟರೆ ಪಿಸ್ತೂಲ್‌ ಎಂದು ತಿಳಿದುಕೊಳ್ಳುವುದೂ ಕಷ್ಟ. ಇದೊಂದು ಡಬಲ್‌ ಬ್ಯಾರೆಲ್‌ ಪಿಸ್ತೂಲ್‌ ಆಗಿದ್ದು, ಲೇಸರ್‌ ಗುರಿ ಕೂಡ ಇದರಲ್ಲಿದೆ.

ಆದರೆ ಈ ಪಿಸ್ತೂಲ್‌ಗೆ ಇನ್ನೂ ಅಮೆರಿಕ ಸರ್ಕಾರದ ಪರವಾನಗಿ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕಿದ್ದೇ ಆದಲ್ಲಿ 2016 ಮಧ್ಯಭಾಗದಲ್ಲಿ ಪಿಸ್ತೂಲ್‌ ಮಾರುಕಟ್ಟೆಗೆ ಬರಲಿದೆ. ಅದೂ 26 ಸಾವಿರ ಬೆಲೆಗೆ! ಇಷ್ಟೊಂದು ಕಡಿಮೆ ಬೆಲೆ ಪಿಸ್ತೂಲ್‌, ಅದೂ ಸ್ಮಾರ್ಟ್‌ ಫೋನ್‌ನಂತೆ ಗೊತ್ತೇ ಆಗದ ರೀತಿ ಇರುವುದು ತೀರ ಅಪಾಯಕಾರಿ ಯಾಗಿದೆ. ಇದು ಸಮಾಜಘಾತುಕರಿಗೆ ಸಿಕ್ಕಿದ್ದೇ ಆದಲ್ಲಿ ಅಪಾಯ ಹೆಚ್ಚು ಎಂದು ಅಮೆರಿಕದ ರಕ್ಷಣಾ ತಜ್ಞರು ಎಚ್ಚರಿಸಿದ್ದಾರೆ. ಆದರೆ ಸ್ವರಕ್ಷಣೆಗೆ ಇದು ಹೇಳಿ ಮಾಡಿಸಿದ ಪಿಸ್ತೂಲ್‌ ಆಗಿದ್ದು ಇಂತಹದ್ದೊಂದು ಆವಿಷ್ಕಾರ ಅಗತ್ಯವಿತ್ತು ಎಂದು ತಯಾರಕರು ಹೇಳಿದ್ದಾರೆ.
-ಉದಯವಾಣಿ

Write A Comment