ಮನೋರಂಜನೆ

ಗೆಲ್ಲುವ ಮೊದಲೇ ಸೋಲೊಪ್ಪಿಕೊಂಡ ಅಭಿಮಾನಿ

Pinterest LinkedIn Tumblr

t20-webನವದೆಹಲಿ: ಟಿ20 ಕ್ರಿಕೆಟ್​ನಲ್ಲಿ ಪತ್ರಿ ಬಾಲ್ ಕೂಡ ಪಂದ್ಯದ ಗತಿ ಬದಲಿಸಬಹುದು. ಇದಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಇಂಡೋ-ಬಾಂಗ್ಲಾ ಕದನವೇ ಸಾಕ್ಷಿ. ಪಂದ್ಯ ಗೆದ್ದರೆ ಹಬ್ಬ ಆಚರಿಸುವ ಭಾರತೀಯರು ಸೋತರೆ ಅದನ್ನು ಸುಲಭವಾಗಿ ಅರಗಿಸಿಕೊಳ್ಳಲಾರರು.

ಹೌದು, ಇದಕ್ಕೆ ಪೂರಕ ಎಂಬಂತೆ ಉತ್ತರ ಪ್ರದೇಶದ ಕ್ರಿಕೆಟ್ ಅಭಿಮಾನಿಯೊಬ್ಬರು ಸೋಮವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದದಲ್ಲಿ ಭಾರತ ಸೋಲುವುದು ಖಚಿತ ಎಂದು ಭಾವಿಸಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.ಮೃತ ದುರ್ದೈವಿಯ ಹೆಸರು ಓಂ ಪ್ರಕಾಶ್ ಶುಕ್ಲ. ಕೊನೆಯ ಓವರ್​ನಲ್ಲಿ ಮುಶ್ಪಿಕರ್ ರಹೀಂ ಸಿಡಿಸಿದ ಸತತ ಎರಡು ಬೌಂಡರಿಯೇ ಶುಕ್ಲ ಅವರ ಹೃದಯಾಘಾತಕ್ಕೆ ಕಾರಣವಾಗಿದೆ.

ಭಾರತಕ್ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ ಹನ್ನೊಂದು ರನ್ ಬೇಕಾಗಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತದಲ್ಲಿ ಮಹಮ್ಮದುಲ್ಲಾ ಒಂದು ರನ್ ಗಳಿಸುವ ಮೂಲಕ ಮುಶ್ಪಿಕರ್ ರಹೀಂ ಅವರಿಗೆ ಸ್ಟ್ರೈಕ್ ನೀಡಿದರು. ಎರಡು ಹಾಗೂ ಮೂರನೆ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ರಹೀಂ ಬಾಂಗ್ಲಾ ತಂಡಕ್ಕೆ ಬಹುತೇಕ ಜಯ ತಂದಿದ್ದರು. ಕಡೆಯ ಮೂರು ಎಸೆತಕ್ಕೆ ಕೇವಲ ಎರಡು ರನ್ ಬೇಕಾಗಿತ್ತು. ಅದಾಗಲೇ ಬಾಂಗ್ಲಾ ಪಾಳಯದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಇದನ್ನು ಅರಗಿಸಿಕೊಳ್ಳಲಾಗದ ಶುಕ್ಲ ಹೃದಯಾಘಾತಕ್ಕೆ ಒಳಗಾದರು.

ಕಡೆಯ ಮೂರು ಎಸೆತದಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ನಡೆಸಿದ ಮ್ಯಾಜಿಕ್ ವೀಕ್ಷಿಸಲು ಶುಕ್ಲಾ ಬದುಕಿರಲಿಲ್ಲ.

Write A Comment