ರಾಷ್ಟ್ರೀಯ

ಪಠಾಣ್​ಕೋಟ್ ದಾಳಿ, ಪಾಕಿಸ್ತಾನಿ ಜಂಟಿ ತನಿಖಾತಂಡಕ್ಕೆ ವೀಸಾ

Pinterest LinkedIn Tumblr

patankot-webನವದೆಹಲಿ: ಪಠಾಣ್​ಕೋಟ್ ದಾಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ತನಿಖೆ ನಡೆಸಲು ಪಾಕಿಸ್ತಾನಿ ಜಂಟಿ ತನಿಖಾ ತಂಡಕ್ಕೆ ವೀಸಾ ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ ಮಹಮ್ಮದ್ ತಾಹಿರ್ ರೈ, ಲಾಹೋರ್ ಗುಪ್ತಚರ ದಳದ ಡೆಪ್ಯುಟಿ ಡೈರೆಕ್ಟರ್ ಜನರಲ್ ಮೊಹಮ್ಮದ್ ಅಜೀಂ ಅರ್ಷದ್, ಐಎಸ್​ಐನ ಲೆಫ್ಟಿನೆಂಟ್ ಕರ್ನಲ್ ತನ್ವೀರ್ ಅಹ್ಮದ್, ಪಾಕಿಸ್ತಾನ ಸೇನೆ ಗುಪ್ತಚರ ದಳದ ಲೆಫ್ಟಿನೆಂಟ್ ಕರ್ನಲ್ ಇರ್ಫಾನ್ ಮಿರ್ಜಾ ಮತ್ತು ತನಿಖಾಧಿಕಾರಿ ಶಾಹಿದ್ ತನ್ವೀರ್ ಅವರನ್ನೊಳಗೊಂಡ 5 ಜನರ ಜಂಟಿ ತನಿಖಾ ತಂಡ ಮಾರ್ಚ್ 27ರಂದು ಭಾರತಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಲಿದೆ.

Write A Comment