ಅಂತರಾಷ್ಟ್ರೀಯ

333ಕ್ಕೂ ಹೆಚ್ಚು ತಿಮಿಂಗಿಲಗಳ ಹತ್ಯೆ ಮಾಡಿದ ಜಪಾನ್!

Pinterest LinkedIn Tumblr

japan-web1ಟೋಕಿಯೊ: ಮೀನುಗಾರಿಕೆಗೆ ತೆರಳಿದ ನಾಲ್ಕು ಹಡಗುಗಳು 230 ಹೆಣ್ಣು ತಿಮಿಂಗಿಲಗಳ ಪೈಕಿ 200ರಷ್ಟು ಗರ್ಭಿಣಿ ತಿಮಿಂಗಿಲ ಸೇರಿದಂತೆ ಬರೋಬ್ಬರಿ 333 ತಿಮಿಂಗಿಲಗಳನ್ನು ಜಪಾನ್ ತಿಮಿಂಗಿಲ ಬೇಟೆ ಪಡೆ ಸಾಯಿಸಿರುವ ಘಟನೆ ನಿಜಾಂಶದಿಂದ ಕೂಡಿದೆ ಎಂದು ಜಪಾನ್ ಮೀನುಗಾರಿಕಾ ಸಚಿವಾಲಯ ಖಚಿತಪಡಿಸಿದೆ.

ಸಚಿವಾಲಯದ ವೆಬ್​ಸೈಟ್​ನಲ್ಲಿ ಈ ಕುರಿತ ಎಲ್ಲಾ ಮಾಹಿತಿ ಪ್ರಕಟಿಸಿದ್ದು, ಈ ಹಿಂದೆ ತಾನು ನಡೆಸಿದ ಸಮೀಕ್ಷೆಯೊಂದರ ಬಗ್ಗೆಯೂ ಮೀನುಗಾರಿಕಾ ಸಚಿವಾಲಯ ಹೇಳಿಕೊಂಡಿದೆ. ಇದೀಗ ಈ ಸಂಗತಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಜಪಾನ್ ತಿಮಿಂಗಿಲಗಳನ್ನು ಹತ್ಯೆ ಮಾಡುತ್ತಿರುವ ಬಗ್ಗೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ದೇಶಗಳು ಸೇರಿದಂತೆ ಇನ್ನೂ ಅನೇಕ ದೇಶಗಳು ಖಂಡಿಸಿದ್ದವು.

ದಕ್ಷಿಣ ಮಹಾಸಾಗರ ತಿಮಿಂಗಿಲ ಸಂರಕ್ಷಣಾ ಕೇಂದ್ರ ನಡೆಸಿದ ನೂತನ ಸಮೀಕ್ಷೆಯಲ್ಲಿ ಈ ಸಂಗತಿ ಬಹಿರಂಗವಾಗಿದ್ದು, ಕಳೆದ ಡಿಸೆಂಬರ್ 1ರಿಂದ 115 ದಿನಗಳ ಕಾಲ ಮೀನುಗಾರಿಕೆಗಾಗಿ ತೆರಳಿದ್ದ ನಾಲ್ಕು ಹಡಗುಗಳು 333 ತಿಮಿಂಗಲಗಳನ್ನು ಸಾಯಿಸಿ ತಂದಿವೆ. ಇದೀಗ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದ ತಿಮಿಂಗಲ ಸಂರಕ್ಷಣಾ ಸಂಘಟನೆಗಳು ಈ ಘಟನೆಯ ಬಗ್ಗೆ ಆಕ್ಷೇಪ ಎತ್ತಿವೆ.

ಜಪಾನ್​ನಲ್ಲಿ ಇಷ್ಟೊಂದು ತಿಮಿಂಗಿಲಗಳನ್ನು ಸಾಯಿಸಿರುವುದು ಮನುಷ್ಯನ ಬಾಯಿ ಚಪಲ ತೀರಿಸಿಕೊಳ್ಳಲಿಕ್ಕಾಗಿ ಅಲ್ಲ, ತಿಮಿಂಗಿಲಗಳ ಕುರಿತು ಸಂಶೋಧನೆಗಾಗಿ ಎಂದು ತಿಮಿಂಗಿಲ ಬೇಟೆ ಪಡೆ ಸ್ಪಷ್ಟನೆ ನೀಡಿದೆ.

Write A Comment