ಮನೋರಂಜನೆ

ರಿಯೊ ಒಲಿಂಪಿಕ್ ಬಳಿಕ ನಿವೃತ್ತಿ: ಉಸೇನ್ ಬೋಲ್ಟ್

Pinterest LinkedIn Tumblr

BOLT-e1458648327616ಕಿಂಗ್‌ಸ್ಟನ್: ಮುಂದಿನ ಆಗಸ್ಟ್ ನಲ್ಲಿ ಆರಂಭಗೊಳ್ಳುವ ರಿಯೊ ಒಲಿಂಪಿಕ್ ನನ್ನ ಕೊನೆಯ ಓಟದ ಕೂಟ ಎಂದು ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಹೇಳಿದ್ದಾರೆ.

2020ರಲ್ಲಿ ಟೊಕಿಯೊದಲ್ಲಿ ನಡೆಯುವ ಒಲಿಂಪಿಕ್ ತನಕ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಕಷ್ಟ ಎಂದು ಕೋಚ್ ತಿಳಿಸಿದ್ದು ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಜಮೈಕಾ ಓಟಗಾರ ಸ್ಪಷ್ಟನೆ ನೀಡಿದ್ದಾರೆ.

ಖಂಡಿತವಾಗಿಯೂ ಈ ವರ್ಷ ನನ್ನ ಕೊನೆಯ ಒಲಿಂಪಿಕ್. ಮುಂದಿನ ನಾಲ್ಕು ವರ್ಷಗಳ ಕಾಲ ಒಲಿಂಪಿಕ್‌ಗೆ ಕಾಯುವುದು ಬಹಳ ಕಷ್ಟ. ನಾಲ್ಕು ವರ್ಷಗಳ ಆತ್ಮವಿಶ್ವಾಸವನ್ನು ಈ ಬಾರಿಯ ರಿಯೊ ಒಲಿಂಪಿಕ್‌ನಲ್ಲಿ ತೋರಿಸುತ್ತೇನೆ ಎಂದರು.

ಒಲಿಂಪಿಕ್‌ನಲ್ಲಿ ಮತ್ತೊಮ್ಮೆ ಮೂರು ಚಿನ್ನದ ಪದಕ ಜಯಿಸುವುದು ನನ್ನ ದೊಡ್ಡ ಕನಸು. ಆ ನಿಟ್ಟಿನಲ್ಲೇ ನಾನು ಅಭ್ಯಾಸ ನಡೆಸುತ್ತಿದ್ದೇನೆ ಎಂದು ಬೋಲ್ಟ್ ಇಂಗಿತ ವ್ಯಕ್ತಪಡಿಸಿದರು.

ಜಮೈಕಾದ ಈ ಮಿಂಚಿನ ಓಟಗಾರ ಈಗಾಗಲೇ ಒಲಿಂಪಿಕ್‌ನಲ್ಲಿ 6 ಚಿನ್ನದ ಪದಕ ಜಯಿಸಿದ್ದಾರೆ. 2008 ಹಾಗೂ 2012ರ ಒಲಿಂಪಿಕ್ ಕೂಟಗಳಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2009ರ ಬರ್ಲಿನ್‌ನಲ್ಲಿ ನಡೆದ ಅಥ್ಲೆೆಟಿಕ್ಸ್ ಕೂಟದಲ್ಲಿ 200 ಮೀಟರ್ ಓಟವನ್ನು 19.19 ಸೆಕೆಂಡ್‌ನಲ್ಲಿ ಗುರಿ ತಲುಪಿ ವಿಶ್ವದಾಖಲೆ ಬರೆದಿದ್ದರು. 19 ಸೆಕೆಂಡ್‌ಗಳ ಒಳಗಾಗಿ 200 ಮೀಟರ್ ಓಟದ ಗುರಿ ತಲುಪುವ ಮೂಲಕ ತಮ್ಮ ಹಿಂದಿನ ದಾಖಲೆಯನ್ನು ಅಳಿಸಿ ಹಾಕುವುದಾಗಿ ಉಸೇನ್ ಬೋಲ್‌ಟ್‌ ಹೇಳಿದ್ದಾರೆ.

Write A Comment