ಪೂಜಾ ಗಾಂಧಿ, “ಬಿಗ್‌ಬಾಸ್’ ಬಳಿಕ ಏನು ಮಾಡುತ್ತಿದ್ದಾರೆ, ಯಾವ ಚಿತ್ರ ಒಪ್ಪಿಕೊಂಡಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇರಲಿಲ್ಲ. ಈಗ ಅದಕ್ಕೆ ಉತ್ತರ “ದಂಡುಪಾಳ್ಯ-2′. ಹೌದು, ಪೂಜಾಗಾಂಧಿ “ಬಿಗ್ ಬಾಸ್’ ಮನೆಯಿಂದ ಹೊರಬಂದ ತಕ್ಷಣ, “ದಂಡುಪಾಳ್ಯ-2′ ಚಿತ್ರ ಒಪ್ಪಿಕೊಂಡಿದ್ದಾರೆ.
ಈಗಾಗಲೇ ಚಿತ್ರದ ಫಸ್ಟ್‌ಲುಕ್ ಎಲ್ಲೆಡೆ ಹರಿದಾಡುತ್ತಿದೆ ಕೂಡ. ಪೂಜಾಗಾಂಧಿಯ ಎರಡೂ ಕೈಗಳನ್ನು ಒಂದೆಡೆ ಹಿಡಿದಿರುವ ಪೋಲೀಸ್, ಮತ್ತೂಂದೆಡೆ ಅವರ ಬಾಯಲ್ಲಿ ಪೋಲೀಸೊಬ್ಬ ಬೂಟು ಇಟ್ಟಿರುವ ಪೋಸ್ಟರ್ ಹೊಸದೊಂದು ಕುತೂಹಲ ಹುಟ್ಟಿಸಿದೆ. “ದಂಡುಪಾಳ್ಯ’ ಚಿತ್ರದಲ್ಲಿ ಮೊದಲು ಪೂಜಾ ಗಾಂಧಿಯ “ಬೆನ್ನು’ ತೋರಿಸಿಯೇ ದೊಡ್ಡ ಸುದ್ದಿ ಮಾಡಿ ಸಾಕಷ್ಟು ಕುತೂಹಲ ಮೂಡಿಸಿದ್ದ ನಿರ್ದೇಶಕ ಶ್ರೀನಿವಾಸ್ ರಾಜು, “ದಂಡುಪಾಳ್ಯ-2’ನಲ್ಲೂ ಅದಕ್ಕಿಂತಲೂ ವಿಭಿನ್ನವಾಗಿ ಪೋಟೋಶೂಟ್ ಮಾಡಿಸಿ, ಎರಡು ಸ್ಟಿಲ್‌ಗಳನ್ನು ಹರಿಬಿಟ್ಟಿದ್ದಾರೆ.
ಸದ್ಯಕ್ಕೆ ಆ ಪೋಸ್ಟರ್ ನೋಡಿದರೆ, ಮತ್ತೂಂದು “ರಾ’ ಸಬೆjಕ್ಟ್ ಇಟ್ಟುಕೊಂಡೇ ಸಿನಿಮಾ ತೋರಿಸಲು ಹೊರಟಿದ್ದಾರೆ ಎಂಬುದು ಗೋಚರಿಸುತ್ತದೆ. ಅಂದಹಾಗೆ, ಇದು ಕನ್ನಡ ಹಾಡು ತೆಲುಗು ಭಾಷೆಯಲ್ಲಿ ತಯಾರಾಗುತ್ತಿದೆ. ತೆಲುಗಿನಲ್ಲಿ “ದಂಡುಪಾಳ್ಯಂ-2′ ಎಂದು ನಾಮಕರಣ ಮಾಡಲಾಗಿದೆ.
“ದಂಡುಪಾಳ್ಯ-2′ ಚಿತ್ರದ ಪಾತ್ರಕ್ಕಾಗಿ ಪೂಜಾ ಗಾಂಧಿ ಸಾಕಷ್ಟು ಮೈ ಭಾರ ಇಳಿಸಿಕೊಂಡಿದ್ದಾರಂತೆ. ಅಷ್ಟೇ ಅಲ್ಲ, ಗ್ಲಾಮರ್ ಅನ್ನು ಕೂಡ ಕೊಂಚ ಕಡಿಮೆ ಮಾಡಿಕೊಳ್ಳುತ್ತಿದ್ದಾರಂತೆ. ಮೊದಲ ಚಿತ್ರಕ್ಕಿಂತಲೂ ಈ ಚಿತ್ರದ ಕಥೆ ಹಾಗೂ ಪಾತ್ರದಲ್ಲಿ ಸಾಕಷ್ಟು ಹೊಸತನ ಇದೆ ಎನ್ನುವ ನಿರ್ದೇಶಕರು, “ಆ ಚಿತ್ರದಲ್ಲಿದ್ದ ಕಲಾವಿದರೇ ಇಲ್ಲೂ ಕುಡಾ ಇರಲಿದ್ದಾರೆ. ಉಳಿದಂತೆ ಹತ್ತು ಹೊಸ ಪಾತ್ರಗಳು ಸೇರ್ಪಡೆಗೊಳ್ಳುತ್ತಿವೆ. ಮೊದಲ ಚಿತ್ರಕ್ಕಿಂತಲೂ ಈ ಚಿತ್ರದಲ್ಲಿ ಹೊಸ ವಿಷಯ ಹೇಳಲಾಗುತ್ತಿದೆ. ಇಲ್ಲಿ ಕ್ರೈಮ್ ಇದೆ, ಮೆಲೋಡ್ರಾಮವೂ ಇದೆ. ಕ್ರೈಮ್‌ನೊಂದಿಗೆ ಪೊಲಿಟಿಕಲ್, ಪೋಲೀಸ್ ಹಾಗು ಮೀಡಿಯಾ ಕೂಡ ಸೇರಿಕೊಂಡಿವೆ.
ದಂಡುಪಾಳ್ಯ ಗ್ಯಾಂಗ್ ಜತೆ ಹೇಗೆಲ್ಲಾ ಇನ್ವಾಲ್‌ಮೆಂಟ್ ಇತ್ತು ಎಂಬುದನ್ನು ಇಲ್ಲಿ ಹೇಳಲಾಗುತ್ತಿದೆ. ಯಾರು ಯಾರನ್ನು ಹೇಗೆಲ್ಲಾ ಬ್ಲಾಕ್‌ವೆುàಲ್ ಮಾಡಿದರು, ಎಷ್ಟೆಲ್ಲಾ ಕಿರುಕುಳ ಕೊಟ್ಟರು ಎಂಬುದು ಹೈಲೈಟ್. ಹೊಸ ರೀತಿಯ ಪ್ರಸೆಂಟೇಷನ್ ಇಲ್ಲಿ ಕೊಡಲಾಗುತ್ತೆ. ಕಥೆ ಹಿಂದಿನ ಸತ್ಯ ಏನೆಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಹೇಳಹೊರಟಿದ್ದೇನೆ. ಇದೊಂದು ಕ್ರೈಮ್ ಸಿನಿಮಾ ಆಗಿದ್ದರೂ, ಇಲ್ಲಿ ಕ್ರೈಮ್‌ಗಿಂತ ಹೆಚ್ಚು ಬೇರೆ ವಿಷಯಗಳನ್ನು ಹೇಳುತ್ತಿದ್ದೇನೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಶ್ರೀನಿವಾಸ್‌ರಾಜು.
ಪೂಜಾ ಗಾಂಧಿ ಅವರು ಈ ಚಿತ್ರಕ್ಕಾಗಿ ಫುಲ್ ಟೈಮ್ ತೊಡಗಿಕೊಂಡಿದ್ದಾರಂತೆ. ಅದಕ್ಕಾಗಿ ತಿಂಗಳಿನಿಂದಲೂ ತಯಾರಿ ಮಾಡಿಕೊಳ್ಳುತ್ತಿದ್ದು, “ದಂಡುಪಾಳ್ಯ’ ಜಪವಲ್ಲದೆ ಬೇರೇನೂ ಮಾಡುತ್ತಿಲ್ಲವಂತೆ. ಸದ್ಯಕ್ಕೆ ಅವರ “ರಾವಣಿ’ ಈ ಚಿತ್ರದ ನಂತರ ಶುರುವಾಗಲಿದೆ. ಅವರು ಈಗಾಗಲೇ ಕಳಸಾ ಬಂಡೂರಿ ಯೋಜನೆ ಕುರಿತು ಮಾಡಿರುವ ಒಂದು ಕಿರುಚಿತ್ರವನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ.
ಅದಾದ ಬಳಿಕ “ದಂಡುಪಾಳ್ಯ-2′ ಚಿತ್ರಕ್ಕೆ ಸೀಮಿತಗೊಳ್ಳಲಿದ್ದಾರೆ. ಇನ್ನು, ಪೂಜಾಗೆ, ಸಾಕಷ್ಟು ಚಿತ್ರಗಳ ಅವಕಾಶ ಬಂದಿದ್ದರೂ, ಅವೆಲ್ಲವನ್ನೂ ಬದಿಗೊತ್ತಿ, ಈ ಚಿತ್ರ ಒಪ್ಪಿಕೊಂಡಿದ್ದಾರೆ.
ಅಂದಹಾಗೆ, ಈ ಚಿತ್ರವನ್ನು “ನಾಟಿಕೋಳಿ’ ನಿರ್ಮಿಸಬೇಕಿದ್ದ ನಿರ್ಮಾಪಕ ವೆಂಕಟ್ ನಿರ್ಮಿಸುತ್ತಿದ್ದಾರಂತೆ. ಹಾಗಾದರೆ, “ನಾಟಿಕೋಳಿ’ ಏನಾಯ್ತು? ಸದ್ಯಕ್ಕೆ “ದಂಡುಪಾಳ್ಯ-2′ ಮುಗಿಯಬೇಕು. ಅದಾದ ಬಳಿಕ “ನಾಟಿಕೋಳಿ’ ವಿಷಯ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಶ್ರೀನಿವಾಸ್‌ರಾಜು.
-ಉದಯವಾಣಿ