ಮನೋರಂಜನೆ

ಪಾಕ್‌ ವಿರುದ್ದ ಗೆಲುವು: ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ ಅನುಷ್ಕಾ!

Pinterest LinkedIn Tumblr

vkಮುಂಬಯಿ : ಭಾರತೀಯ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ ವಿರಾಟ್‌ ಕೊಹ್ಲಿ ಮತ್ತು ಆತನ ಗರ್ಲ್ ಫ್ರೆಂಡ್‌, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಪರಸ್ಪರ ದೂರವಾಗುತ್ತಿದ್ದಾರೆ ಎಂದು ಭಾರೀ ಸುದ್ದಿಗಳು ಹರಿಯುತ್ತಿರುವ ಬೆನ್ನಲ್ಲೇ ಪಾಕ್‌ ವಿರುದ್ದದ ಭರ್ಜರಿ ಗೆಲುವಿನಲ್ಲಿ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕೊಹ್ಲಿಗೆ ಅನುಷ್ಕಾ ಅಭಿನಂದನೆ ಸಲ್ಲಿಸಿ ಮತ್ತೆ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದ್ದಾರೆ.

ಎಲ್ಲಾ ಸುದ್ದಿಗಳಿಗೆ ಮನವೇ ಉತ್ತರವಾಗಿಟ್ಟುಕೊಂಡು ಸುಮ್ಮನಿದ್ದ ಅನುಷ್ಕಾ ಪಾಕಿಸ್ತಾನ ವಿರುದ್ದ ಭಾರತ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಪ್ರಿಯತಮ ಕೊಹ್ಲಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಪಂದ್ಯ ಗೆದ್ದ ಬಳಿಕ ಕೊಹ್ಲಿಗೆ ಅಭಿನಂದನೆ ಸಲ್ಲಿಸಿ ಅನುಷ್ಕಾ ಮೆಸೇಜ್‌ ಕಳುಹಿಸಿದ್ದಾರೆ ಎಂದು ಬಾಲಿವುಡ್‌ ಲೈಫ್ ಡಾಟ್‌ ಕಾಂ ವರದಿ ಮಾಡಿದೆ.

ಎನೇ ಇರಲಿ ..ಈ ಗೆಲುವಿನಿಂದಲಿ ದೂರಾದ ಜೋಡಿ ಹಕ್ಕಿಗಳು ಮತ್ತೆ ಒಂದಾಗಲಿ..ಹೊಸ ಯಶಸ್ಸಿನ ಮೆಟ್ಟಿಲೇರಲಿ ..ಎನ್ನುವುದು ನಮ್ಮ ನಿಮ್ಮ ಹಾರೈಕೆ…
-ಉದಯವಾಣಿ

Write A Comment