ಮನೋರಂಜನೆ

ಆಫ್ರಿದಿ ಮಗುವಿಗಾಗಿ ಗರ್ಭಿಣಿಯಾಗಿದ್ದೇನೆ: ನಟಿ ಆರ್ಷಿ ಖಾನ್ 

Pinterest LinkedIn Tumblr

Arshi-Afridi1-600ಹೊಸದಿಲ್ಲಿ : “ನಾನು ಪಾಕ್‌ ಕ್ರಿಕೆಟ್‌ ನಾಯಕ ಶಾಹೀದ್‌ ಆಫ್ರಿದಿಯ ಜತೆಗೆ ಸೆಕ್ಸ್‌ ನಡೆಸಿದ್ದೇನೆ; ಆತನನ್ನು ನಾನು ತುಂಬಾ ಪ್ರೀತಿಸುತ್ತೇನೆ’ ಎಂದು ಕೆಲ ಸಮಯದ ಹಿಂದೆ ಘಂಟಾಘೋಷವಾಗಿ ಹೇಳಿಕೊಂಡಿದ್ದ ಮಾಡೆಲ್‌ ಹಾಗೂ ನಟಿ ಆರ್ಷಿ ಖಾನ್‌ ಇದೀಗ “ನಾನು ಆಫ್ರಿದಿಯಿಂದಾಗಿ ಗರ್ಭಿಣಿಯಾಗಿದ್ದೇನೆ; ಆತನ ಮಗುವಿಗೆ ತಾಯಿಯಾಗಲಿದ್ದೇನೆ’ ಎಂದು ಬಹಿರಂಗಪಡಿಸಿದ್ದಾಳೆ.

ಈ ಬಗ್ಗೆ ಆರ್ಷಿ ಖಾನ್‌ ಸಾಮಾಜಿಕ ಜಾಲ ತಾಣದಲ್ಲಿ ತಾನು ಆಫ್ರಿದಿಯ ಮಗುವಿಗಾಗಿ ಗರ್ಭಿಣಿಯಾಗಿದ್ದೇನೆ’ ಎಂದು ಬಹಿರಂಗಪಡಿಸುವ ವಿಡಿಯೋ ಒಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ.

ದೈನಿಕ್‌ ಭಾಸ್ಕರ್‌ ಜತೆ ಮಾತನಾಡಿರುವ ಆರ್ಷಿ ಖಾನ್‌ ತನ್ನ ವಿಡಿಯೋ ಸಂದರ್ಶನವನ್ನು ನೀಡಿದ್ದಾಳೆ. ಅದೀಗ ವೈರಲ್‌ ಆಗಿದೆ.

ಇದೇ ವೇಳೆ ಇಂಡಿಯಾ ನ್ಯೂಸ್‌ ನೆಟ್‌ವರ್ಕ್‌ಗೆ (ಐಎನ್‌) ಆರ್ಷಿ ಖಾನ್‌ ಅತ್ಯಂತ ಬೋಲ್ಡ್‌ ಹಾಗೂ ಶಾಕಿಂಗ್‌ ಹೇಳಿಕೆಗಳನ್ನು ನೀಡಿದ್ದಾಳೆ.

“ಒಬ್ಬ ಲವ್ವರ್‌ ಆಗಿ, ಫ್ರೆಂಡ್‌ ಆಗಿ ಮತ್ತು ಕಂಪ್ಲೀಟ್‌ ಜಂಟ್ಲಮನ್‌ ಆಗಿ ನಾನು ಶಾಹೀದ್‌ ಆಫ್ರಿದಿಗೆ ನೂರಕ್ಕೆ ನೂರು ಮಾರ್ಕ್‌ ಕೊಡುತ್ತೇನೆ. ಹಾಸಿಗೆಯಲ್ಲಂತೂ ಆತ ನಿಜಕ್ಕೂ ವೆರಿ ಗುಡ್‌ ಲವ್ವರ್‌’ ಎಂದು ಆರ್ಷಿ ಖಾನ್‌ ಹೇಳಿದ್ದಾಳೆ.

ಆಫ್ರಿದಿ ಜತೆಗಿನ ಆರ್ಷಿ ಖಾನ್‌ ಸಂಬಂಧ ನಿಜವೇ ಸುಳ್ಳೇ ಎಂಬುದು ಈಗಲೂ ಯಕ್ಷ ಪ್ರಶ್ನೆಯೇ ಆಗಿದೆ. ಇವರೊಳಗಿನ ಸಂಬಂಧವನ್ನು ನಿಜಕ್ಕೂ ತಿಳಿದವರೇ ದೃಢೀಕರಿಸಬೇಕಾಗಿದೆ ಎನ್ನವವರೇ ಅಧಿಕ.

ಹಿಂದೆ ಆಫ್ರಿದಿ ಜತೆಗೆ ತಾನು ದೈಹಿಕ ಸಂಬಂಧ ಹೊಂದಿದ್ದೇನೆ ಎಂದು ಆರ್ಷಿ ಖಾನ್‌ ಜಗಜ್ಜಾಹೀರು ಮಾಡಿದ್ದನ್ನು ಪ್ರಶ್ನಿಸಿದ್ದ ಮಾಧ್ಯಮದವರಿಗೆ ಆಕೆ “ಹೌದು, ಆಫ್ರಿದಿ ಜತೆಗೆ ನಾನು ಸೆಕ್ಸ್‌ ನಡೆಸಿದ್ದೇನೆ.ಆತನೊಂದಿಗೆ ಮಲಗುವುದಕ್ಕೆ ನಾನು ಭಾರತೀಯ ಮಾಧ್ಯಮದವರ ಅನುಮತಿಯನ್ನು ಪಡೆಯಬೇಕೇ ? ಇದೇನಿದ್ದರೂ ನನ್ನ ಖಾಸಗಿ ಬದುಕು; ನನ್ನ ಮಟ್ಟಿಗೆ ಇದು ಲವ್‌ !’ ಎಂದು ತಿರುಗೇಟು ನೀಡಿದ್ದಳು.
-ಉದಯವಾಣಿ

Write A Comment