ಮನೋರಂಜನೆ

ಭಾರತಕ್ಕೆ ಸೋಲಾಗಿ ಕಾಡಿದ ಮಳೆ; ಪಾಕಿಸ್ತಾನ ಮಹಿಳಾ ತಂಡಕ್ಕೆ ಗೆಲುವು; ಆತಿಥೇಯರ ಬ್ಯಾಟಿಂಗ್‌ ವೈಫಲ್ಯ

Pinterest LinkedIn Tumblr

wom

ನವದೆಹಲಿ (ಪಿಟಿಐ): ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ಮಹಿಳಾ ತಂಡಕ್ಕೆ ಮಳೆ ಕೂಡ ದುರದೃಷ್ಟದಂತೆ ಕಾಡಿತು. ಆದ್ದರಿಂದ ಆತಿಥೇಯರು ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಾಕಿ ಸ್ತಾನ ಎದುರಿನ ಪಂದ್ಯದಲ್ಲಿ ನಿರಾಸೆ ಅನುಭವಿಸಬೇಕಾಯಿತು.

ಸಾಂಪ್ರದಾಯಿಕ ಎದುರಾಳಿಗಳ ನಡುವಣ ಹೋರಾಟವಾಗಿದ್ದ ಕಾರಣ ಸಹಜವಾಗಿ ಕುತೂಹಲ ಮನೆ ಮಾಡಿತ್ತು. ಆದರೆ ಇಲ್ಲಿನ ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದ ಸುರಿದ ಮಳೆಯಲ್ಲಿ ಭಾರತದ ಗೆಲುವಿನ ಅವಕಾಶ ಕೊಚ್ಚಿ ಹೋಯಿತು.

ಟಾಸ್‌ ಗೆದ್ದ ಪಾಕಿಸ್ತಾನದ ಆಟಗಾರ್ತಿಯರು ಮೊದಲು ಫೀಲ್ಡಿಂಗ್ ಮಾಡಲು ಮುಂದಾದರು. ನಾಯಕಿ ಸನಾ ಮೀರ್‌ ಅವರ ತೀರ್ಮಾನವನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಬೌಲರ್‌ಗಳು ಆತಿಥೇಯ ತಂಡವನ್ನು 96 ರನ್‌ಗೆ ಕಲೆ ಹಾಕಿದರು.

ಅಲ್ಪ ಮೊತ್ತದ ಗುರಿಯನ್ನು ಪಾಕ್ ತಂಡ ಬೆನ್ನಟ್ಟಿದ ಕೆಲ ಹೊತ್ತಿನಲ್ಲಿಯೇ ಮಳೆ ಸುರಿಯಿತು. ಆದ್ದರಿಂದ ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ ಪಾಕ್ ತಂಡಕ್ಕೆ 16 ಓವರ್‌ಗಳಲ್ಲಿ 76 ರನ್ ಗಳಿಸುವ ಪರಿಷ್ಕೃತ ಗುರಿ ನೀಡಿತು. ಇದನ್ನು ಆರು ವಿಕೆಟ್‌ ಕಳೆದುಕೊಂಡು ಮುಟ್ಟಿತು.

ವೈಫಲ್ಯ: ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಉತ್ತಮ ಬ್ಯಾಟಿಂಗ್‌ ಮಾಡಿದ್ದ ಭಾರತದ ಆಟ ಗಾರ್ತಿಯರು ಮಹತ್ವದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರು.

ನಾಯಕಿ ಮಿಥಾಲಿ ರಾಜ್‌ 16 ರನ್ ಗಳಿಸಿ ಔಟಾದರೆ, ಕರ್ನಾಟಕದ ವಿ.ಆರ್‌. ವನಿತಾ ಎರಡು ರನ್‌ ಹೊಡೆದಿದ್ದಾಗ ಪೆವಿಲಿಯನ್‌ ಸೇರಿದರು. ಸ್ಮೃತಿ ಮಂದಾನ ಕೂಡ ಒಂದು ರನ್‌ ಬಾರಿಸಿ ಔಟಾದರು. ಆದ್ದರಿಂದ ಭಾರತಕ್ಕೆ ನೂರು ರನ್ ಗಳಿಸಲು ಸಾಧ್ಯವಾಗಲಿಲ್ಲ.

ಆತಿಥೇಯ ತಂಡ 96 ರನ್‌ಗಿಂತಲೂ ಬೇಗನೆ ಆಲೌಟ್ ಆಗುವ ಅಪಾಯಕ್ಕೆ ಸಿಲುಕಿತ್ತು. ಹರ್ಮನಪ್ರೀತ್ ಕೌರ್‌ (16), ವೇದಾ ಕೃಷ್ಣಮೂರ್ತಿ (24) ಮತ್ತು ಜೂಲನ್ ಗೋಸ್ವಾಮಿ (14) ಆಸರೆಯಾದರು.

ಅಮೀನ್‌ ಆಸರೆ: ಅಲ್ಪ ಮೊತ್ತದ ಗುರಿ ಎದುರು ಪಾಕ್ ತಂಡವೂ ಪರದಾಡಿತು. ನಾಹೀದಾ ಖಾನ್, ಸಿದ್ರಾ ಅಮೀನ್‌ ಮೊದಲ ವಿಕೆಟ್‌ ಜತೆಯಾಟದಲ್ಲಿ 19 ರನ್‌ ಕಲೆ ಹಾಕಿದ್ದರು. ನಂತರದ ಬ್ಯಾಟ್ಸ್‌ ವುಮನ್‌ಗಳು ಬೇಗನೆ ಔಟಾಗಿದ್ದರಿಂದ ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿತ್ತು. ಈ ತಂಡದ ಪ್ರಮುಖ ಆಟ ಗಾರ್ತಿಯರು ಔಟಾಗಿದ್ದ ರಿಂದ ಭಾರತಕ್ಕೆ ಕೊನೆಯಲ್ಲಿ ಗೆಲುವಿನ ಅವಕಾಶವಿತ್ತು.

ಆದರೆ ಮಳೆ ಸುರಿದ ಕಾರಣ ಭಾರತದ ಗೆಲುವಿನ ಕನಸು ನುಚ್ಚುನೂರಾಯಿತು. ಈ ಸೋಲಿಗೆ ತಂಡದ ಬ್ಯಾಟಿಂಗ್‌ ವೈಫಲ್ಯ ಕೂಡ ಕಾರಣವಾಯಿತು.

ಬೇಸರ: ‘ಆರಂಭದಲ್ಲಿಯೇ ನಾವು ಬೇಗನೆ ವಿಕೆಟ್‌ ಕಳೆದುಕೊಂಡೆವು. ಎದುರಾಳಿ ತಂಡದ ಬ್ಯಾಟಿಂಗ್ ವೇಳೆ ರನ್‌ ಬಿಟ್ಟುಕೊಟ್ಟೆವು. ಆದ್ದರಿಂದ ಮೊದಲ ಆರು ಓವರ್‌ಗಳಲ್ಲಿ ನಮ್ಮ ಸೋಲು ನಿರ್ಧಾರವಾಗಿತ್ತು’ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಸ್ಕೋರ್‌ಕಾರ್ಡ್‌
ಭಾರತ 7ಕ್ಕೆ 96 (20 ಓವರ್‌ಗಳಲ್ಲಿ)
ಮಿಥಾಲಿ ರಾಜ್‌ ಸಿ. ಸಿದ್ರಾ ಅಮೀನ್‌ ಬಿ. ನಿದಾ ದಾರ್‌ 16
ವಿ.ಆರ್‌ ವನಿತಾ ಸಿ. ಸನಾ ಮೀರ್‌ ಬಿ. ಅನಮ್‌ ಅಮೀನ್‌ 02
ಸ್ಮೃತಿ ಮಂದಾನಾ ಎಲ್‌ಬಿಡಬ್ಲ್ಯು ಬಿ. ಆಸ್ಮಾವಿಯಾ ಇಕ್ಬಾಲ್ 01
ಹರ್ಮನಪ್ರೀತ್ ಕೌರ್ ಸಿ. ಸಿದ್ರಾ ಅಮೀನ್‌ ಬಿ. ಸಾದಿಯಾ ಯೂಸುಫ್‌ 16
ವೇದಾ ಕೃಷ್ಣಮೂರ್ತಿ ಸಿ. ಮತ್ತು ಬಿ. ಸನಾ ಮೀರ್‌ 24
ಜೂಲನ್‌ ಗೋಸ್ವಾಮಿ ರನ್‌ ಔಟ್‌ (ಆಸ್ಮಾವಿಯಾ ಇಕ್ಬಾಲ್) 14
ಅನುಜಾ ಪಾಟೀಲ್‌ ರನ್‌ ಔಟ್‌ (ಆಸ್ಮಾವಿಯಾ ಇಕ್ಬಾಲ್/ಸಿದ್ರಾ ನವಾಜ್‌) 03
ಶಿಖಾ ಪಾಂಡೆ ಔಟಾಗದೆ 10
ಇತರೆ: (ಲೆಗ್‌ ಬೈ–1, ವೈಡ್‌–9) 10
ವಿಕೆಟ್‌ ಪತನ: 1–3 (ವನಿತಾ; 2.3), 2–5 (ಮಂದಾನಾ; 3.3), 3–34 (ಮಿಥಾಲಿ; 11.2), 4–49 (ಹರ್ಮನಪ್ರೀತ್‌; 14.1), 5–71 (ವೇದಾ; 16.2), 6–80 (ಅನುಜಾ; 17.6), 7–96 (ಜೂಲನ್‌; 19.6).
ಬೌಲಿಂಗ್‌: ಅನಮ್ ಅಮೀನ್‌ 4–0–9–1, ಆಸ್ಮಾವಿಯಾ ಇಕ್ಬಾಲ್ 4–0–13–1, ಸನಾ ಮೀರ್‌ 4–0–14–1, ಸಾದಿಯಾ ಯೂಸುಫ್‌ 3–0–24–1, ಬಿಸ್ಮಾ ಮಾರೂಫ್ 2–0–12–0, ನಿದಾ ದಾರ್‌ 3–0–23–1.

ಪಾಕಿಸ್ತಾನ 6ಕ್ಕೆ 77 (16 ಓವರ್‌ಗಳಲ್ಲಿ)
ನಾಹೀದಾ ಖಾನ್‌ ಸಿ. ಹರ್ಮನಪ್ರೀತ್ ಕೌರ್ ಬಿ. ಶಿಖಾ ಪಾಂಡೆ 14
ಸಿದ್ರಾ ಅಮೀನ್‌ ಬಿ. ರಾಜೇಶ್ವರಿ ಗಾಯಕವಾಡ್‌ 26
ಬಿಸ್ಮಾ ಮಾರೂಫ್‌ ಸಿ. ಜೂಲನ್‌ ಗೋಸ್ವಾಮಿ ಬಿ. ಹರ್ಮನಪ್ರೀತ್ ಕೌರ್ 05
ಮುನಿಬಾ ಅಲಿ ಔಟಾಗದೆ 12
ಇರಾಮ್‌ ಜಾವೇದ್ ಸಿ. ಮಿಥಾಲಿ ರಾಜ್‌ ಬಿ. ಜೂಲನ್‌ ಗೋಸ್ವಾಮಿ 10
ಆಸ್ಮಾವಿಯಾ ಇಕ್ಬಾಲ್ ರನ್‌ ಔಟ್‌ (ಸ್ಮೃತಿ ಮಂದಾನಾ/ಸುಷ್ಮಾ ವರ್ಮಾ) 05
ಸನಾ ಮೀರ್‌ ರನ್ ಔಟ್‌ (ಸುಷ್ಮಾ ವರ್ಮಾ) 00
ನಿದಾ ದಾರ್ ಔಟಾಗದೆ 00
ಇತರೆ: (ಬೈ–1, ವೈಡ್‌–4) 05
ವಿಕೆಟ್‌ ಪತನ:1–19 (ನಾಹೀದಾ; 2.6), 2–48 (ಸಿದ್ರಾ; 8.6), 3–50 (ಬಿಸ್ಮಾ; 9.6), 4–71 (ಇರಮ್‌; 14.2), 5–77 (ಆಸ್ಮಾವಿಯಾ; 15.4), 6–77 (ಸನಾ; 15.5).
ಬೌಲಿಂಗ್‌: ಅನುಜಾ ಪಾಟೀಲ್‌ 3–0–14–0, ರಾಜೇಶ್ವರಿ ಗಾಯಕವಾಡ್‌ 2–0–11–1, ಶಿಖಾ ಪಾಂಡೆ 2–0–14–1, ಜೂಲನ್‌ ಗೋಸ್ವಾಮಿ 4–0–14–1, ಪೂನಮ್‌ ಯಾದವ್‌ 3–0–14–0, ಹರ್ಮನಪ್ರೀತ್ ಕೌರ್‌ 2–0–9–1.
ಫಲಿತಾಂಶ: ಡಕ್ವರ್ಥ್‌ ಲೂಯಿಸ್‌ ನಿಯಮದ ಪ್ರಕಾರ ಪಾಕಿಸ್ತಾನಕ್ಕೆ 2 ರನ್ ಜಯ. ಪಂದ್ಯ ಶ್ರೇಷ್ಠ: ಅನಮ್ ಅಮೀನ್‌.

Write A Comment