ಬಾಸೆಲ್ (ಪಿಟಿಐ): ಉತ್ತಮ ಪ್ರದರ್ಶನ ತೋರಿದ ಭಾರತದ ಸೈನಾ ನೆಹ್ವಾಲ್ ಹಾಗೂ ಎಚ್.ಎಸ್.ಪ್ರಣಯ್ ಅವರು ಸ್ವಿಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಹಾಗೂ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶನಿವಾರ ಸೆಮಿಫೈನಲ್ ಪ್ರವೇಶಿಸಿದರು.
ಎರಡು ಬಾರಿಯ ಸ್ವಿಸ್ ಓಪನ್ ಚಾಂಪಿಯನ್ ಸೈನಾ, 13–21, 21–15, 21–14ರಲ್ಲಿ ಜಪಾನಿನ ಸಯಕಾ ಸಾತೊ ಅವರನ್ನು ಮಣಿಸಿದರು.
ಮೊದಲ ಗೇಮ್ನಲ್ಲಿ ಎದುರಾದ ಹಿನ್ನಡೆ ಮೆಟ್ಟಿನಿಂತ ಅನುಭವಿ ಸೈನಾ, ಬಳಿಕ ಎರಡು ಗೇಮ್ಗಳನ್ನು ಸತತವಾಗಿ ಜಯಿಸಿ ಪಂದ್ಯ ಗೆದ್ದರು. ಈ ಹೋರಾಟ 52 ನಿಮಿಷಗಳ ಕಾಲ ನಡೆಯಿತು.
ಒಲಿಂಪಿಕ್ ಕಂಚಿನ ಪದಕ ವಿಜೇತ ಹೈದರಾಬಾದ್ನ ಈ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ಚೀನಾದ ವಾಂಗ್ ಯಿಹಾನ್ ಸವಾಲು ಎದುರಿಸಲಿದ್ದಾರೆ.
ಗೆದ್ದ ಪ್ರಣಯ್: ಟೂರ್ನಿಯಲ್ಲಿ 13ನೇ ಶ್ರೇಯಾಂಕ ಪಡೆದಿರುವ ಪ್ರಣಯ್, ಕ್ವಾಟರ್ಫೈನಲ್ನಲ್ಲಿ ಥಾಯ್ಲೆಂಡ್ನ ತನೊಂಗ್ಸಕ್ ಸಯೆನ್ ಸಂಬೂನ್ಸಕ್ ಅವರನ್ನು ಸೋಲಿಸಿದರು.
ಸುಮಾರು ಒಂದು ಗಂಟೆಯ ಕಾಲ ನಡೆದ ಹೋರಾಟದಲ್ಲಿ ಪ್ರಣಯ್, 21-18, 22-24, 21-9ರಲ್ಲಿ ಥಾಯ್ಲೆಂಡ್ ಆಟಗಾರನನ್ನು ಮಣಿಸಿದರು.
ಮುಂದಿನ ಸುತ್ತಿನಲ್ಲಿ ಪ್ರಣಯ್ ಚೀನಾ ತೈಪೆಯ ತ್ಜು ವೀ ವಾಂಗ್ ವಿರುದ್ಧ ಸೆಣಸಲಿದ್ದಾರೆ.
ಮನೋರಂಜನೆ