ಗಾಯಕಿ, ನಟಿ ಎಂ.ಡಿ. ಪಲ್ಲವಿ ಮತ್ತು ಶಮಿಕ್ ಸೇನ್ ನಿರ್ದೇಶನದ “ಪ್ಲೇಗ್ರೌಂಡ್ಸ್’ ಕಿರು ಚಿತ್ರ ಹಾಂಗ್ ಕಾಂಗ್ನಲ್ಲಿ ನಡೆದ “ಇನ್ಕ್ಯುಬೇಟರ್ ಫಾರ್ ಫಿಲಂ ಆ್ಯಂಡ್ ವಿಶ್ಯುವಲ್ ಮೀಡಿಯಾ ಇನ್ ಏಶಿಯಾ (ಇಫ್ವಾ ) ಚಿತ್ರೋತ್ಸವದಲ್ಲಿ ಚಿನ್ನದ ಫಲಕ ಗೆದ್ದುಕೊಂಡಿದೆ. “ಏಶಿಯನ್ ನ್ಯೂ ಫೋರ್ಸ್’ ವಿಭಾಗದಡಿ ಈ ಪ್ರಶಸ್ತಿ ದೊರೆತಿದ್ದು ಇದು ಭಾರತದ ಚಿತ್ರಕ್ಕೇ ಮೊದಲು ಸಿಕ್ಕ ಗೆಲುವಾಗಿದೆ.
ಕಣ್ಣಾಮುಚ್ಚಾಲೆ ಆಡುತ್ತಿದ್ದ ಹುಡುಗ ಹಾಗೇ ನಿದ್ದೆ ಹೋಗಿ, ಮತ್ತೆ ಎಚ್ಚರಾಗುವ ಹೊತ್ತಿಗೆ ಅಲ್ಲಿನ ಸನ್ನಿವೇಶವೇ ಬದಲಾಗಿ ಹೋಗಿರುವುದು ಈ ಚಿತ್ರದ ಕಥಾವಸ್ತು. ಅವನು ವಾಪಾಸ್ ತನ್ನ ಮನೆಯನ್ನು ಹೇಗೆ ಸೇರುತ್ತಾನೆ ಅನ್ನುವ ಕಥಾಹಂದರವುಳ್ಳ ಈ ಸಿನಿಮಾ, ಇವತ್ತಿನ ಎಲ್ಲಾ ಸಾಮಾಜಿಕ ಸಮಸ್ಯೆಗಳನ್ನೂ ಅವಲೋಕಿಸುತ್ತದೆ.
ಎಂ.ಡಿ. ಪಲ್ಲವಿ ಮತ್ತು ಶಮಿಕ್ ಸೇನ್ ಗುಪ್ತಾ ಅವರು ಬರೆದ ಈ ಕತೆಯನ್ನು ಅವರೇ ನಿರ್ದೇಶಿಸಿದ್ದಾರೆ. ಈ ಚಿತ್ರ ಈಗಾಗಲೇ ಲಾಸ್ ಎಂಜಲೀಸ್ನ “ಇಫ್ಲಾ’, ಮುಂಬೈ ಅಂತಾರಾಷ್ಟ್ರೀಯ ಚಿತ್ರೋತ್ಸವ, ಮುಂಬೈನ ಥರ್ಡ್ ಐ ಚಿತ್ರೋತ್ಸವ, ಬೆಂಗಳೂರು, ಪುಣೆ ಕಿರು ಚಿತ್ಸೋತ್ಸವ, ಮಧುರೈ, ಪಾಂಡಿಚೆರಿ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ, ಪ್ರದರ್ಶನ ಕಂಡು ಮೆಚ್ಚುಗೆ ಪಡೆದುಕೊಂಡಿದೆ.
-ಉದಯವಾಣಿ