ಮನೋರಂಜನೆ

ಇಂದು ಭಾರತಕ್ಕೆ ಪಾಕ್ ತಂಡ ಆಗಮನ

Pinterest LinkedIn Tumblr

pakಲಾಹೋರ್: ಪಾಕಿಸ್ತಾನ ತಂಡ ಶುಕ್ರವಾರ ಭಾರತಕ್ಕೆ ಆಗಮಿಸುವ ಮೂಲಕ ಪಾಕಿಸ್ತಾನ ಸರಕಾರದ ಹಲವು ಹೈಡ್ರಾಮಾಗಳು ಅಂತ್ಯಗೊಳ್ಳಲಿದೆ.

ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಿಂದ ಕ್ರಿಕೆಟ್ ತಂಡ ಶುಕ್ರವಾರ ಭಾರತಕ್ಕೆ ಪ್ರಯಾಣ ಬೆಳಸಲಿದೆ. ಸಂಜೆ ವೇಳೆಗೆ ಭಾರತಕ್ಕೆ ಪಾಕಿಸ್ತಾನ ತಂಡ ಆಗಮಿಸಲಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಈ ನಡುವೆ ಪಾಕಿಸ್ತಾನ ತಂಡಕ್ಕೆ ಪಿಸಿಬಿ ಮುಖ್ಯಸ್ಥ ಶಹರ್ಯಾ ಖಾನ್ ಆತ್ಮವಿಶ್ವಾಸ ತುಂಬುವ ಮಾತನಾಡಿದ್ದಾರೆ. ‘1999ರಲ್ಲಿಯೂ ಸಹ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಾಕಿಸ್ತಾನದ ಅಂದಿನ ತಂಡ ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಭಾರತಕ್ಕೆ ತೆರಳಿತ್ತು. ಅದ್ಭುತ ಪ್ರದರ್ಶನ ನೀಡುವ ಮೂಲಕ ಸರಣಿ ಜಯದೊಂದಿಗೆ ಪಾಕಿಸ್ತಾನ ತಂಡ ವಾಪಸ್ಸಾಗಲಿದೆ ಎಂದು ಹುರಿದುಂಬಿಸುವ ಮಾತುಗಳನ್ನಾಡಿದ್ದಾರೆ.

ಮಾರ್ಚ್ 19ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಧರ್ಮಶಾಲದಲ್ಲಿ ಪಂದ್ಯ ನಿಗದಿಯಾಗಿತ್ತು. ಆದರೆ ಇದಕ್ಕೆ ಹಿಮಾಚಲ ಪ್ರದೇಶ ಸರಕಾರ ಸೇರಿ ನಿವೃತ್ತ ಯೋಧರು ವಿರೋಧ ವ್ಯಕ್ತಪಡಿಸಿದ್ದರು. ಪಾಕಿಸ್ತಾನ ಸರಕಾರವೂ ಸಹ ಸೂಕ್ತ ಭದ್ರತೆಯ ನೆಪವೊಡ್ಡಿ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸಲು ಹಿಂದೇಟು ಹಾಕಿತ್ತು. ಅನೇಕ ಬೆಳವಣಿಗೆ ನಂತರ ಧರ್ಮಶಾಲ ಪಂದ್ಯವನ್ನು ಕೋಲ್ಕತ್ತಾಕ್ಕೆ ಸ್ಥಳಾಂತರ ಮಾಡಲಾಯಿತು.

ಕೋಲ್ಕತ್ತಾದ ಇಡನ್‌ಗಾರ್ಡನ್‌ನಲ್ಲಿ ಪಂದ್ಯ ಆಯೋಜನೆಗೊಂಡ ಬಳಿಕ ಪಾಕಿಸ್ತಾನ ಸರಕಾರವು ತಂಡವನ್ನು ಕಳುಹಿಸಿಕೊಡುವುದಾಗಿ ಸಮ್ಮತಿ ಸೂಚಿಸಿತ್ತು.

Write A Comment