ರಾಷ್ಟ್ರೀಯ

ಇಶ್ರತ್ ಪ್ರಕರಣದ ದಾಖಲೆಗಳಿಲ್ಲ: ರಾಜನಾಥ್ ಸಿಂಗ್

Pinterest LinkedIn Tumblr

rajnathದೆಹಲಿ: ಇಶ್ರತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ದಾಖಲೆಗಳು ಸಚಿವಾಲಯದಿಂದ ಕಾಣೆಯಾಗಿವೆ ಎಂದು ಗೃಹಸಚಿವ ಹೇಳಿದ್ದಾರೆ.

ಲೋಕಸಭೆಯಲ್ಲಿ ನಡೆದ ಇಂದಿನ ಚರ್ಚೆಯ ವೇಳೆ ರಾಜನಾಥ್ ಸಿಂಗ್, “2009ರಲ್ಲಿ ಗೃಹ ಕಾರ್ಯದರ್ಶಿ ಅಟಾರ್ನಿ ಜನರಲ್ ಅವರಿಗೆ ಬರೆದ ಎರಡು ಪತ್ರಗಳು ಕಾಣೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಅಟಾರ್ನಿ ಜನರಲ್ ಎರಡು ಅಫಿಡವಿಟ್ ಗಳನ್ನು ನಮೂದಿಸಿದ್ದಾರೆ. ಅವುಗಳು ಲಭ್ಯವಿಲ್ಲ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಪಿ ಚಿದಂಬರಮ್ ಅವರ ಹೆಸರನ್ನು ಹೇಳದೆ, ಆ ಅಫಿಡೆವಿಟ್ ಗಳನ್ನು ಗೃಹ ಸಚಿವರ ಹಸ್ತಕ್ಷೇಪದಿಂದ ತಿದ್ದಲಾಗಿದೆ ಎಂದು ಕೂಡ ರಾಜನಾಥ್ ಆರೋಪಿಸಿದ್ದಾರೆ.

2004ರ ಜೂನ್ 15ರಂದು ಇಶ್ರತ್ ಜಹಾನ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ ಹಾಗೂ ಇಬ್ಬರು ಪಾಕಿಸ್ತಾನಿಗಳಾದ ಅಮ್ಜದ್ ಅಲಿ ಹಾಗೂ ಜಿಶಾನ್ ಜೋಹಾರ್ ಅಬ್ದುಲ್ ಘನಿ ಅವರು ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದರು.

Write A Comment