ಮನೋರಂಜನೆ

ನಾನು ಸ್ವಾರ್ಥಿಯಾಗಿದ್ದೆ; ರಾಮಗೋಪಾಲ ವರ್ಮಾ

Pinterest LinkedIn Tumblr

urmilaಬಾಲಿವುಡ್ ನಟಿ ಊರ್ಮಿಳಾ ಮಾಥೊಂಡ್ಕರ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಗರಡಿಯಿಂದ ಬೆಳಕಿಗೆ ಬಂದ ಪ್ರತಿಭೆ. ವರ್ಮಾರ ರಂಗೀಲಾ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಯವಾದ ಸತ್ಯ, ಜುದಾಯಿ, ದೌಡ್ ನಂತಹ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಕಳೆದ ವಾರದ ತಮ್ಮ ಮಾಜಿ ಗೆಳತಿ ಊರ್ಮಿಳಾ  ಮದುವೆಯಾಗಿದ್ದನ್ನು ತಿಳಿದ  ಬಳಿಕ ವರ್ಮಾ ಟ್ವೀಟ್ ಮಾಡಿದ್ದು, “ಈ ಹಿಂದೆ ನಾನು ಊರ್ಮಿಳಾ ವಿಷಯದಲ್ಲಿ ತುಂಬಾ ಸ್ವಾರ್ಥಿಯಾಗಿದ್ದೆ, ಆಕೆ ತನ್ನ ಅಂದಕ್ಕಿಂತ ಹೆಚ್ಚು  ಪ್ರತಿಭೆಯುಳ್ಳ ನಟಿಯಾಗಿದ್ದಳು” ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ “ನನ್ನ ಹಲವು ಚಿತ್ರಗಳಲ್ಲಿ ಊರ್ಮಿಳಾ ನಟಿಸಿದ್ದಾರೆ, ಅದರಲ್ಲೂ ‘ರಂಗೀಲಾ’ ಸಿನಿಮಾದ ಗೆಲುವು ಅವರಿಗೆ ಸಲ್ಲಬೇಕು. ಊರ್ಮಿಳಾ  ನನ್ನ ಕ್ಯಾಮರಾ ಕಣ್ಣಿಗೆ ಸ್ಫೂರ್ತಿಯಾಗಿಳು ರಂಗೀಲಾ ಸೆಟ್‌ನಲ್ಲಿ ಊರ್ಮಿಳಾ ಸೌಂದರ್ಯವನ್ನು ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದೆ. ಆಕೆಯ ವರ್ಣರಂಜಿತವಾಗಿರೋ ಫೋಟೊಗಳಿಗೆ ನಾನು ಮನಸೋತಿದ್ದೆ” ಹೇಳುವುದರ ಮೂಲಕ ವರ್ಮಾ ಊರ್ಮಿಗೆ ಜೀವಮಾನದ ಗಿಫ್ಟ್ ನೀಡಿದ್ದಾರೆ.

ಹಳೆ ಗೆಳತಿ ಮದುವೆಯಾದ ನಂತರ ಆಕೆಯ ಬಗ್ಗೆ ಟ್ವೀಟ್ ಮಾಡಿರೋ ವರ್ಮಾಗೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಸಮಾಧಾನ ಮಾಡುತ್ತಲೇ “ಟ್ರೈನ್ ಹೋದ ಮೇಲೆ ವರ್ಮಾ ಟಿಕೇಟ್ ತಕೊಂಡು ಟ್ರೈನ್ ಬೋಗಿ ಲೆಕ್ಕ ಹಾಕುತ್ತಿದ್ದಾರೆ” ಅಂತಾ ಕಾಲು ಎಳೆದಿದ್ದಾರೆ.

Write A Comment